Thursday, February 14, 2013

ಕಡಬ ತಾಲೂಕಿಗೆ ನೆಲ್ಯಾಡಿಯನ್ನು ಕೇಂದ್ರವಾಗಿರಿಸಲು ಆಗ್ರಹ;ನೆಲ್ಯಾಡಿ ತಾಲೂಕು ರಚನಾ ಹೋರಾಟ ಸಮಿತಿಯಿಂದ ಪ್ರತಿಭಟನೆಪುತ್ತೂರು: ನೂತನ ತಾಲೂಕಾಗಿ ಘೋಷಣೆಯಾಗಿರುವ ಕಡಬ ತಾಲೂಕಿಗೆ ನೆಲ್ಯಾಡಿಯನ್ನು ಕೇಂದ್ರ ಸ್ಥಾನವಾಗಿ ಪರಿಗಣಿಸಬೇಕು ಎಂಬ ಆಗ್ರಹ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ನೆಲ್ಯಾಡಿ ತಾಲೂಕು ರಚನಾ ಹೋರಾಟ ಸಮಿತಿಯ ನೇತೃತ್ವ ದಲ್ಲಿ ವಿವಿಧ ಸಂಘಟನೆಗಳ ಸಹಭಾಗಿತ್ವ ದಲ್ಲಿ ಬುಧವಾರ ನೆಲ್ಯಾಡಿಯಲ್ಲಿ ಪ್ರತಿಭಟನೆ ಮತ್ತು ರಾಷ್ಟ್ರೀಯ ಹೆದ್ದಾರಿ ರಸ್ತೆ ತಡೆ ನಡೆಯಿತು.
ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದ ನೆಲ್ಯಾಡಿ ತಾಲೂಕು ರಚನಾ ಹೋರಾಟ ಸಮಿತಿಯ ಗೌರವಾಧ್ಯಕ್ಷ ಹಾಗೂ ನಿವೃತ್ತ ಪ್ರಾಂಶುಪಾಲ ಅಬ್ರಹಾಂ ವರ್ಗೀಸ್, ನೆಲ್ಯಾಡಿಯನ್ನು ಪುತ್ತೂರು ವಿಧಾನ ಸಭಾ ಕ್ಷೇತ್ರದಿಂದ ವಿಂಗಡಿಸಿ ಸುಳ್ಯ ವಿಧಾನ ಸಭಾ ಕ್ಷೇತ್ರಕ್ಕೆ ಸೇರಿಸಿದ ಬಳಿಕ ಇಲ್ಲಿನ ಅಭಿವೃದ್ಧಿಯಲ್ಲಿ ಸಾಕಷ್ಟು ಹಿನ್ನಡೆಯಾಗಿದೆ. ತಾಲೂಕು ಹೋರಾಟ ಸಮಿತಿಯು ಕಳೆದ 12 ವರ್ಷಗಳಿಂದ ರಾಷ್ಟ್ರೀಯ ಹೆದ್ದಾರಿ ಯಲ್ಲಿರುವ ನೆಲ್ಯಾಡಿಯನ್ನು ಕೇಂದ್ರ ವಾಗಿಸಿ ತಾಲೂಕು ರಚಿಸಬೇಕೆಂದು ಆಗ್ರಹಿಸುತ್ತಿದ್ದು, ಪ್ರಾಯೋಗಿಕವಾದ ಎಲ್ಲಾ ಆವಶ್ಯಕತೆಗಳನ್ನು ತೋರಿಸಿ ಬೇಡಿಕೆಯನ್ನು ಮಂಡಿಸಿದೆ. ಆದರೆ 2013-14ರ ಬಜೆಟ್ ಮಂಡನೆಯಲ್ಲಿ ನೂತನ ತಾಲೂಕುಗಳನ್ನು ಘೋಷಿಸುವಾಗ ನೆಲ್ಯಾಡಿ ತಾಲೂಕು ಪ್ರಸ್ತಾಪವನ್ನು ಕೈಬಿಡಲಾಗಿದೆ. ಇದರಿದಾಗಿ ನೆಲ್ಯಾಡಿಯ ಬೆಳವಣಿಗೆ ಇನ್ನಷ್ಟು ಕುಂಠಿತಗೊಳ್ಳುವ ಅಪಾಯವಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಕಡಬವನ್ನು ತಾಲೂಕಾಗಿ ಘೋಷಿಸಿರುವುದಕ್ಕೆ ಯಾವುದೇ ವಿರೋಧವಿಲ್ಲ ಎಂದ ಅವರು, ಪ್ರಸ್ತುತ ಬೆಳ್ತಂಗಡಿ ತಾಲೂಕಿನಲ್ಲಿರುವ ಕೊಕ್ಕಡ, ರೆಖ್ಯ, ಶಿಬಾಜೆ, ಹತ್ಯಡ್ಕ, ಶಿಶಿಲ ಗ್ರಾಮಗಳನ್ನು ಹಾಗೂ ಪುತ್ತೂರು ತಾಲೂಕಿನಲ್ಲಿರುವ ಗೋಳಿತ್ತೊಟ್ಟು, ಆಲಂತಾಯ, ಕೊಣಾಲು, ನೆಲ್ಯಾಡಿ, ಕೌಕ್ರಾಡಿ, ಇಚ್ಲಂಪಾಡಿ, ಶಿರಾಡಿ ಗ್ರಾಮಗಳನ್ನು ಕಡಬ ಕೇಂದ್ರವಾಗಿರುವ ನೂತನ ತಾಲೂಕಿಗೆ ಸೇರ್ಪಡೆ ಗೊಳಿಸುವುದನ್ನು ವಿರೋಧಿಸುವುದಾಗಿ ತಿಳಿಸಿದರು. ದಕ್ಷಿಣ ಕನ್ನಡ ಜಿಲ್ಲೆಯನ್ನು ವಿಭಾಗಿಸಿ ಗ್ರಾಮಾಂತರ ಹಾಗೂ ನಗರ ಜಿಲ್ಲೆ ಮಾಡುವ ಹುನ್ನಾರ ನಡೆಯುತ್ತಿದೆ. ಗ್ರಾಮಾಂತರ ಜಿಲ್ಲೆಗೆ ಪುತ್ತೂರಿನಲ್ಲಿ ಕೇಂದ್ರ ಸ್ಥಾನ ಮಾಡಲು ಸಿದ್ಧತೆಗಳೂ ನಡೆಯುತ್ತಿವೆ. ಆ ಸಂದಭರ್ದಲ್ಲಿ ನೆಲ್ಯಾಡಿಯು ತಾಲೂಕು ಕೇಂದ್ರವಾ ಗಲೇ ಬೇಕು. ಆದುದರಿಂದ ಈಗಿನಿಂ ದಲೇ ಹೋರಾಟದ ಮೂಲಕ ಸರಕಾರ ವನ್ನು ಮತ್ತು ಜನಪ್ರತಿನಿಧಿಗಳನ್ನು ಎಚ್ಚರಿ ಸುವ ಕೆಲಸ ನಡೆಯಬೇಕು ಎಂದರು.
ಬೆಳ್ತಂಗಡಿ ತಾಲೂಕು ಪಂಚಾ ಯತ್‌ನ ಮಾಜಿ ಸದಸ್ಯ ವಾಮನ ತಾಮಂಡ್ಕರ್ ಮಾತನಾಡಿದರು.
ಪ್ರತಿಭಟನೆಯಲ್ಲಿ ನೆಲ್ಯಾಡಿ ತಾಲೂಕು ರಚನಾ ಹೋರಾಟ ಸಮಿತಿಯ ಕಾರ್ಯದರ್ಶಿ ಹರಿಪ್ರಸಾದ್ ಕೆ., ಸದಸ್ಯರಾದ ಕೆ.ಪಿ. ಥೋಮಸ್, ಭಾಸ್ಕರ ಎಸ್. ಗೌಡ, ರವಿ ಪ್ರಸಾದ್ ಶೆಟ್ಟಿ, ರವಿಚಂದ್ರ, ಜಿ.ಪಂ. ಸದಸ್ಯ ಬಾಲಕೃಷ್ಣ ಬಾಣಜಾಲು, ತಾ.ಪಂ. ಸದಸ್ಯೆ ಉಷಾ ಅಂಚನ್, ಮಾಜಿ ತಾ.ಪಂ. ಸದಸ್ಯ ಸರ್ವೋತ್ತಮ ಗೌಡ, ಬೆಳ್ತಂಗಡಿ ತಾಲೂಕು ಜೆಡಿಎಸ್ ಘಟಕಾಧ್ಯಕ್ಷ ಹತ್ಯಡ್ಕ ಜಗನ್ನಾಥ್ ಗೌಡ, ನೆಲ್ಯಾಡಿ ಪಂಚಾಯತ್ ಅಧ್ಯಕ್ಷೆ ಗಂಗಮ್ಮ, ಉಪಾಧ್ಯಕ್ಷ ಜಯಾನಂದ ಬಂಟ್ರಿಯಾಲ್, ಕೌಕ್ರಾಡಿ ಗ್ರಾ.ಪಂ. ಉಪಾಧ್ಯಕ್ಷ ಹನೀಫ್, ಜಯ ಕರ್ನಾಟಕ ಪುತ್ತೂರು ತಾಲೂಕು ಘಟಕದ ಉಪಾಧ್ಯಕ್ಷ ನಾಝೀಂ ಸಾಹೇಬ್, ನೆಲ್ಯಾಡಿ ವಲಯ ಘಟಕದ ಅಧ್ಯಕ್ಷ ಪೂವಪ್ಪ ಕರ್ಕೇರ ಮತ್ತಿತರರು ಉಪಸ್ಥಿತರಿದ್ದರು.
ಇಲ್ಲಿನ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದಿಂದ ಮೆರವಣಿಗೆಯಲ್ಲಿ ಆಗಮಿಸಿದ ಪ್ರತಿಭಟನಕಾರರು ಸಂತೆಕಟ್ಟೆಯಲ್ಲಿ ಸಮಾವೇಶ ಗೊಂಡರು. ಈ ವೇಳೆ ಪ್ರತಿಭಟ ಕಾರರ ಮನವಿ ಸ್ವೀಕರಿಸಲು ಸ್ಥಳದಲ್ಲಿ ಸಂಬಂಧಿಸಿದ ಅಧಿಕಾರಿಗಳು ಹಾಜರಿರದ ಕಾರಣ ದಿಢೀರನೆ ರಸ್ತೆ ತಡೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಉಪ್ಪಿನಂಗಡಿ ಠಾಣಾ ಧಿಕಾರಿ ರವಿ ಬಿ.ಎಸ್ ಸ್ಥಳಕ್ಕಾಗಮಿಸಿ ಪ್ರತಿಭಟನಕಾರರ ಮನವೊಲಿಸಿ, ಸುಗಮ ರಸ್ತೆ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ತಾಲೂಕು ರಚನಾ ಹೋರಾಟ ಸಮಿತಿಯ ಅಧ್ಯಕ್ಷ ಎನ್.ಮುಹಮ್ಮದ್ ಪುತ್ತು ಸ್ವಾಗತಿಸಿದರು. ವಿನ್ಸೆಂಟ್ ಮಿನೇಜಸ್ ಕಾರ್ಯಕ್ರಮ ನಿರೂಪಿಸಿದರು.
ನಂತರ ಹಲವು ಬೇಡಿಕೆಗಳನ್ನೊಳ ಗೊಂಡ ಮನವಿಯನ್ನು ಪ್ರತಿಭಟನ ಕಾರು ಮುಖ್ಯ ಮಂತ್ರಿ ಮತ್ತು ಕಂದಾಯ ಸಚಿವರಿಗೆ ಕಡಬ ಉಪ ತಹಶೀಲ್ದಾರ್ ರಾಘವೇಂದ್ರ ಆಚಾರ್ಯರ ಮೂಲಕ ಸಲ್ಲಿಸಿದರು.
ಪ್ರತಿಭಟನಾ ಸಂದರ್ಭ ನೆಲ್ಯಾಡಿ ಯಲ್ಲಿ ಅಂಗಡಿ- ಮುಂಗಟ್ಟುಗಳೆಲ್ಲಾ ಮುಚ್ಚಿ ವರ್ತಕರೂ ಬೆಂಬಲ ಸೂಚಿಸಿ ದ್ದರು. ಆದರೆ ವಾರದ ನೆಲ್ಯಾಡಿ ಸಂತೆ ಎಂದಿನಂತೆ ನಡೆಯಿತು.

No comments:

Post a Comment