Sunday, February 3, 2013

ಯೂತ್ ಲೀಗ್ ಅಧ್ಯಕ್ಷ ಮುಸ್ತಫಾ ಗಂಭೀರ ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲು



ಮಂಜೇಶ್ವರ:ಮಂಜೇಶ್ವರ ಮಂಡಲ ಯೂತ್ ಲೀಗ್ ಅಧ್ಯಕ್ಷ ಉದ್ಯಾವರ ನಿವಾಸಿ ಮುಸ್ತಫಾ ರವರು ಕೆಲಸದ ವೇಳೆ ಯಂತ್ರಕ್ಕೆ ಕೈಬೆರಳು ಸಿಲುಕಿ ಗಂಭೀರ ಗಾಯಗಳೊಂದಿಗೆ ಮಂಗಳೂರಿನ ಎ.ಜೆ.ಆಸ್ಪತ್ರೆಯಲ್ಲಿ ದಾಖಲಾದರು
ಶುಕ್ರವಾರ ದಿವಸ ಕೆಲಸದ ವೇಳೆ ಯಂತ್ರಕ್ಕೆ ಎಡಬಾಗದ ೨ ಕೈಬೆರಳುಗಳು ಸಿಲುಕಿ ಸಂಪೂರ್ಣವಾಗಿ ೨ ಬೆರಳುಗಳು ಚರ್ಮದಲ್ಲಿ ನೇತಾಡಿತ್ತು.ಕೂಡಲೇ ಊರಿನವರು ಮುಸ್ತಫಾರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಯೊಂದಕ್ಕೆ ತಲುಪಿಸಿ ಅರ್ಧ ತಾಸಿನೊಳಗೆ ಶಸ್ತ್ರ ಚಿಕಿತ್ಸೆ ನಡೆದಿದೆ.ಶಸ್ತ್ರ ಚಿಕಿತ್ಸೆ ನದೆಸಿದ ವೈಧ್ಯರು ಯಾವುದೇ ತೊಂದರೆಯಿಲ್ಲದೆ ಬೆರಳು ಜೋಡನೆಯಾಗಬಹುದೆಂಬ ವಿಶ್ವಾಸವನ್ನು ವ್ಯಕ್ತಪಡಿಸಿರುತ್ತಾರೆ

No comments:

Post a Comment