Friday, February 22, 2013

ರೈಲ್ವೇ ಗೇಟ್ ಕೀಪರ್ ನ ಆಚಾತುರ್ಯಕ್ಕೆ ವಾಹನ ಚಾಲಕರಿಗೆ ದಂಡ
ನಮ್ಮ ಪ್ರತಿನಿಧಿ ವರದಿ
ಮಂಜೇಶ್ವರ:ಉದ್ಯಾವರ ಎಲ್.ಪಿ ಶಾಲೆಯ ಬಳಿಯಿರುವ ಧ್ವೀತಿಯ ರೈಲ್ವೇ ಗೇಟ್ ಅರ್ಧ ತೆರೆದಿಟ್ಟು ವಾಹನ ಚಾಲಕರ ದಂಡಕ್ಕೆ ಕಾರಣವಾಗುತ್ತಿರುವ ಗೇಟ್ ಕೀಪರ್ ಆಚಾತುರ್ಯದ ಬಗ್ಗೆ ನಾಗಕರಿಂದ ಹಾಗು ವಾಹನ ಚಾಲಕರಿಂದ ವ್ಯಾಪಕವಾದ ಆಕ್ರೋಶ ವ್ಯಕ್ತವಾಗುತ್ತಿದೆ.
ಇಲ್ಲಿ ಗೇಟ್ ಕೀಪರ್ ರೈಲು ಗಾಡಿ ಸಾಗಿದ ಬಳಿಕ ವಾಹನಗಳಿಗೆ ಸಂಚರಿಸಲು ಗೇಟ್ ತೆಗೆಯುವಾಗ ಅರ್ಧದಷ್ಟೇ ತೆರೆಯುವುದರಿಂದ ಘನವಾಹನಗಳಾದ ಲಾರಿ ಅಥವಾ ಬಸ್ಸುಗಳು ಸಂಚರಿಸುವ ಸಂದರ್ಭ ಗೇಟ್ ಗೆ ತಾಗುತಿದ್ದು ಇದೊಂದು ಅಫಘಾತಕ್ಕೂ ಕಾರಣವಾಗುತ್ತಿದೆ.
ಇತ್ತೀಚೆಗೆ ಇದೇ ಗೇಟ್ ಮೂಲಕ ವಾಹನಗಳು ಸಂಚರಿಸುತ್ತಿರುವಾಗ ಬಸ್ಸುಗಳ ಮೇಲ್ಬಾಗ ಗೇಟ್ ಗೆ ತಾಗಿ ಗೇಟ್ ಬಾಗಿದ ಸ್ಥಿತಿಯಲ್ಲಿತ್ತು.ಕೂಡಲೇ ರೈಲ್ವೇ ಇಲಾಖೆಯು ಗೇಟ್ ಕೀಪರ್ ಅಚಾತುರ್ಯವನ್ನು ಬದಿಗಿಟ್ಟು ನಷ್ಟ ಪರಿಹಾರವಾಗಿ ಚಾಲಕರಿಂದ 25 ಸಾವಿರ ರೂಪಾಯಿ ದಂಡ ವಿಧಿಸಿದೆ.ಗೇಟ್ ಕೀಪರ್ ಅಚಾತುರ್ಯದ ಬಗ್ಗೆ ಸಂಭಂಧ ಪಟ್ಟವರು ಗಮನಿಸಿ ಗೇಟನ್ನು ಸಂಪೂರ್ಣವಾಗಿ ಮೇಲೆತ್ತಲು ಆದೇಶ ನೀಡಲು ಚಾಲಕರು ಹಾಗು ನಾಗರಿಕರು ಆಗ್ರಹಿಸಿದ್ದಾರೆ.

No comments:

Post a Comment