Monday, February 11, 2013

ಚಾಲಕನ ನಿಯಂತ್ರಣ ತಪ್ಪಿ ಟಿಪ್ಪರ್ ಲಾರಿ ಉರುಳಿ ಚಾಲಕನ ಧಾರುಣ ಮೃತ್ಯುಮಂಜೇಶ್ವರ:ಚಾಲಕನ ನಿಯಂತ್ರಣ ತಪ್ಪಿದ ಟಿಪ್ಪರ್ ಲಾರಿಯೊಂದು ಕೆಂಪು ಕಲ್ಲು ಕೊರೆಯುವ ಕಲ್ಪಣೆಗೆ ಉರುಳಿ ಚಾಲಕ ಸ್ಥಳದಲ್ಲೇ ಧಾರುಣವಾಗಿ ಸಾವನ್ನಪ್ಪಿದ ಘಟನೆ ಇಲ್ಲಿಗೆ ಸಮೀಪದ ಮೊರತ್ತನೆ ಯಿಂದ ವರದಿಯಾಗಿದೆ.
ಮೃತ ಪಟ್ಟ ವ್ಯಕ್ತಿ ಪಯ್ಯನ್ನೂರು ಪೆರುಂಬಕಡವು ನಿವಾಸಿ ಜೋಸ್(೪೫) ಎಂಬವರಾಗಿದ್ದಾರೆ. ಹೊಂಡ ಸೃಷ್ಟಿಯಾದ ಕಲ್ಪಣೆಗೆ ತುಂಬಿಸಲು ಟಿಪ್ಪರ್ ನಲ್ಲಿ ಮಣ್ಣು ಕೊಂಡೊಯ್ಯಲಾಗಿತ್ತು.ಮಣ್ಣು ಹೊಂಡಕ್ಕಿಳಿಸಿದ ಬಳಿಕ ಲಾರಿ ಮುಂದಕ್ಕೆ ಚಲಿಸುತಿದ್ದಂತೆ ಚಾಲಕನ ನಿಯಂತ್ರಣ ತಪ್ಪಿದ ಟಿಪ್ಪರ್ ಲಾರಿ ಉರುಳಿ ಕಲ್ಪಣೆಗೆ ಬಿದ್ದು ದುರ್ಘಟನೆ ಸಂಭವಿಸಿದೆ.ಇದರಿಂದ ನುಜ್ಜುಗುಜ್ಜಾದ ಲಾರಿಯೊಳಗೆ ಚಾಲಕ ಜೋಸ್ ಸಿಲುಕಿಕೊಂಡಿದ್ದು ಅಫಘಾತದ ಶಭ್ದ ಕೇಳಿ ಓಡಿ ಬಂದ ನಾಗರಿಕರು ಜೋಸ್ ರನ್ನು ಲಾರಿಯಡಿಯಿಂದ ತೆಗೆದು ಆಸ್ಪತ್ರೆಗೆ ಕೊಂದೊಯ್ಯುವಾಗ ಅವರ ಜೀವ ಪಕ್ಷಿ ಹಾರಿ ಹೋಗಿತ್ತು.ಬೇರೊಂದು ಕಂಪನಿಯಲ್ಲಿ ಟಿಪ್ಪರ್ ಚಾಲಕನಾಗಿ ಕಾರ್ಯನಿರ್ವಹಿಸುತಿದ್ದ ಜೋಸ್ ನಿನ್ನೆ ರಾತ್ರಿ ಮಾತ್ರ ಬದಲಿ ವ್ಯವಸ್ಥೆಯಾಗಿ ಅಫಘಾತ ಸಂಭವಿಸಿದ ಲಾರಿಯಲ್ಲಿ ಚಾಲಕರಾಗಿ ಸೇವೆ ಮಾಡಿದ್ದರು

No comments:

Post a Comment