Friday, February 1, 2013

ಅಂತಾರಾಷ್ಟ್ರೀಯ ದರ್ಜೆಗೆ ಮಂಗಳೂರು ರೈಲು ನಿಲ್ದಾಣ: ಮೋಹನ್ ಮೆನನ್


ಅಂತಾರಾಷ್ಟ್ರೀಯ ದರ್ಜೆಗೆ ಮಂಗಳೂರು ರೈಲು ನಿಲ್ದಾಣ: ಮೋಹನ್ ಮೆನನ್


ಮಂಗಳೂರು: ಮಂಗಳೂರು ಸೆಂಟ್ರಲ್ ರೈಲ್ವೆ ನಿಲ್ದಾಣವನ್ನು 17.63 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಪಡಿಸುವ ಯೋಜನೆಯನ್ನು ಸಿದ್ಧಪಡಿ ಸಲಾಗಿದೆ. ಅಲ್ಲದೆ ಈ ನಿಲ್ದಾಣವನ್ನು ಅಂತಾರಾಷ್ಟ್ರೀಯ ದರ್ಜೆಗೇರಿಸುವ ಯೋಜನೆ ಪ್ರಗತಿಯಲ್ಲಿದೆ. ಬೆಲ್ಜಿಯಂನ ತಾಂತ್ರಿಕ ಸಲಹೆಗಾರರ ಸಹಾಯದೊಂದಿಗೆ ಈ ಕಾರ್ಯ ನಡೆಯುತ್ತಿದೆ ಎಂದು ಪಾಲ್ಘಾಟ್ ರೈಲ್ವೆ ವಿಭಾಗದ ಹೆಚ್ಚುವರಿ ನಿರ್ದೇಶಕ ಮೋಹನ್ ಮೆನನ್ ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿಂದು ಜನಪ್ರತಿನಿಧಿಗಳು, ರೈಲ್ವೆ ಇಲಾಖೆ ಹಾಗೂ ಇತರ ಇಲಾಖಾ ಅಧಿಕಾರಿ ಗಳೊಂದಿಗೆ ನಡೆದ ಸಭೆಯಲ್ಲಿ ಅವರು ಈ ವಿಚಾರ ತಿಳಿಸಿದರು.
ರೈಲ್ವೆ ಇಲಾಖೆಯು ರೈಲ್ವೆಯ ಅಭಿವೃದ್ಧಿಗಾಗಿ ಹಲವು ಯೋಜನೆಗಳನ್ನು ಹಮ್ಮಿಕೊಂಡಿದೆ. ಅದರಂತೆ ಬೆಲ್ಜಿಯಂನ ತಾಂತ್ರಿಕ ಸಲಹೆಗಾರರ ನೆರವಿನೊಂ ದಿಗೆ ದೇಶದ ಕೆಲವು ರೈಲ್ವೆ ನಿಲ್ದಾಣ ಗಳನ್ನು ಗುರುತಿಸುವ ಕಾರ್ಯವನ್ನು ಮಾಡಲಾಗಿದೆ. ಇದರಲ್ಲಿ ಪಾಲ್ಘಾಟ್ ವಿಭಾಗ ವ್ಯಾಪ್ತಿಯ ಮಂಗಳೂರು ಮತ್ತು ಕಲ್ಲಿಕೋಟೆ ನಿಲ್ದಾಣಗಳೂ ಸೇರಿವೆ ಎಂದು ಮೋಹನ್ ವಿವರಿಸಿದರು.
ಕಂಕನಾಡಿ ಪ್ರದೇಶದ ಪಡೀಲ್- ಬಜಾಲ್ ರೈಲ್ವೆ ಕೆಳ ಸೇತುವೆ ರಸ್ತೆಗೆ ಸಂಬಂಧಿಸಿದಂತೆ ಒಟ್ಟು 11 ಕೋ. ರೂ.ಯ ಯೋಜನೆ ರಚಿಸಲಾಗಿದೆ. ಮಂಗಳೂರು ಮಹಾನಗರಪಾಲಿಕೆ ಹಾಗೂ ದಕ್ಷಿಣ ರೈಲ್ವೆ ವಿಭಾಗದ ನಡುವೆ ಶೇ.50:50ರ ಅನುಪಾತದಲ್ಲಿ ಈ ವೆಚ್ಚವನ್ನು ಭರಿಸಬೇಕಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಹಾಗೂ ರೈಲ್ವೆ ಸಚಿವಾಲಯದ ಅನುದಾನದೊಂದಿಗೆ ನಿರ್ವಾಹಣಾ ವೆಚ್ಚದ ಶೇ.30ನ್ನು ರೈಲ್ವೆ ಇಲಾಖೆ ನೀಡಲು ಸಮ್ಮತಿಸಿದೆ. ಬೈಕಂಪಾಡಿ ರೈಲ್ವೆ ಮೇಲ್ಸೇತುವೆ ಕಾಮಗಾರಿಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳೊಂ ದಿಗೆ ಸಮಾಲೋಚನೆ ನಡೆಸಿ ಪರಿಷ್ಕೃತ ಯೋಜನೆ ತಯಾರಿಸಲು ನಳಿನ್ ಕುಮಾರ್ ಸೂಚಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಮೋಹನ್ ಮೆನನ್, ಮನಪಾದಿಂದ ಬರಬೇಕಾದ ಅನು ದಾನ ಶೀಘ್ರವಾಗಿ ಬಂದಲ್ಲಿ ಟೆಂಡರ್ ಪ್ರಕ್ರಿಯೆ ತ್ವರಿತಗೊಳಿಸಲಾ ಗುವುದು ಎಂದು ತಿಳಿಸಿದರು. ಸುರತ್ಕಲ್-ಬಿ.ಸಿ.ರೋಡ್ ಚತುಷ್ಪಥ ರಸ್ತೆ ಕಾಮಗಾರಿಯನ್ನು ಎಪ್ರಿಲ್ ಅಂತ್ಯದೊಳಗೆ ಪೂರ್ಣಗೊಳಿಸಲಾಗುವುದು. ಕುಂದಾಪುರ-ತಲಪಾಡಿ ಚತುಷ್ಪಥ ಕಾಮಗಾರಿ 2014ರಲ್ಲಿ ಪೂರ್ಣಗೊಳಿಸಲಾಗುವುದು ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಶ್ರೀರಾಮ್ ಮಿಶ್ರಾ ಸಭೆಗೆ ತಿಳಿಸಿದರು.
ಮಂಗಳೂರು ಸೆಂಟ್ರಲ್ ರೈಲ್ವೆ ನಿಲ್ದಾಣದ ಅಭಿವೃದ್ಧಿ ಬಹುಪಯೋಗಿ ಸಂಕೀರ್ಣದ ರಚನೆ ಹಾಗೂ ಕಂಕನಾಡಿ ಜಂಕ್ಷನ್ ರೈಲ್ವೆ ನಿಲ್ದಾಣದ ಸಮಸ್ಯೆಗಳ ಬಗ್ಗೆ ಸಭೆಯಲ್ಲಿ ಭಾಗವಹಿಸಿದ ಪ್ರತಿ ನಿಧಿಗಳು ಅಧಿಕಾರಿಗಳ ಗಮನಸೆಳೆದರು. ಬೈಕಂಪಾಡಿ ರೈಲ್ವೆ ಮೇಲ್ಸೇತುವೆ ಕಾಮಗಾರಿ ತ್ವರಿತವಾಗಿ ಕೈಗೊಳ್ಳಲು ನಳಿನ್ ಕುಮಾರ್ ಸೂಚಿಸಿದರು.
ಚೆರ್ವತ್ತೂರು-ಮಂಗಳೂರು ಪ್ಯಾಸೆಂ ಜರ್ ರೈಲು ಮತ್ತು ಕಬಕ-ಪುತ್ತೂರು ರೈಲಿನಲ್ಲಿ ಬರುವ ವಿದ್ಯಾರ್ಥಿಗಳು ಮತ್ತು ನೌಕರರಿಗೆ ಅನುಕೂಲವಾಗುವಂತೆ ಬೆಳಗ್ಗೆ ಹಿಂದೆ ನಿಗದಿಯಾದ ಸಮಯ ದಂತೆ 9ಕ್ಕೆ ಮುಂಚಿತವಾಗಿ ಈ ಎರಡೂ ರೈಲುಗಳು ಮಂಗಳೂರು ತಲುಪಬೇಕು ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಕೋರಿದ್ದು, ಇದಕ್ಕೆ ರೈಲ್ವೆ ಇಲಾಖಾಧಿಕಾರಿಗಳು ಸಮ್ಮತಿಸಿದ್ದಾರೆ ಎಂದು ತಿಳಿಸಿದ್ದಾರೆ.
ಸಭೆಯಲ್ಲಿ ವಿಧಾನಸಭೆಯ ಉಪ ಸಭಾಪತಿ ಎನ್.ಯೋಗೀಶ್ ಭಟ್, ಶಾಸಕ ಮೋನಪ್ಪ ಭಂಡಾರಿ, ಜಿಲ್ಲಾಧಿ ಕಾರಿ ಪ್ರಕಾಶ್, ಅಪರ ಜಿಲ್ಲಾಧಿಕಾರಿ ದಯಾನಂದ, ಮನಪಾ ಆಯುಕ್ತ ಹರೀಶ್ ಮತ್ತಿತರರು ಉಪಸ್ಥಿತರಿದ್ದ

No comments:

Post a Comment