Sunday, February 24, 2013

ಮಂಜೇಶ್ವರ ಉಧ್ವಿಘ್ನ:ಭುಗಿಲೆದ್ದ ಘರ್ಷಣೆ:ನಾಲ್ವರು ಗಾಯ:9ಮಂದಿ ಪೊಲೀಸ್ ಬಲೆಗೆನಮ್ಮ ಪ್ರತಿನಿಧಿ ವರದಿ

ಮಂಜೇಶ್ವರ:ಕಳೆದ ರಾತ್ರಿ ಮಂಜೇಶ್ವರದಲ್ಲಿ ಸಂಭವಿಸಿದ ಘರ್ಷನೆಯಲ್ಲಿ ಮಂಜೇಶ್ವರ ಪರಿಸರದಲ್ಲಿ ಭೀತಿಯ ವಾತಾವರಣ ಸೃಷ್ಟಿಯಾಗಿದೆ.ನಿನ್ನೆ ರಾತ್ರಿ ಮೀನಿನ ಲಾರಿ ಹಾಗು ಬೈಕ್ ಪರಸ್ಪರ ಡಿಕ್ಕಿಯಾದ ಕಾರಣದಿಂದ ಭುಗಿಲೆದ್ದ ಘರ್ಷನೆಯು ಮೂರು ಬಾರಿಯಾಗಿ ನಡೆದ ಅಕ್ರಮಣಗಳಿಂದ ನಾಲ್ಕು ಮಂದಿ ಗಾಯಗೊಂಡಿದ್ದು 9 ಮಂದಿಯನ್ನು ಪೊಲೀಸರು ಕಸ್ಟಡಿಗೆ ತೆಗೆದಿದ್ದಾರೆ ಹಾಗು ಬಿಟ್ಟು ಪರಾರಿಯಾದ 9 ಬೈಕ್ ಗಳನ್ನು ಕೂಡಾ ಪೊಲೀಸರು ವಶಕ್ಕೆ ತೆಗೆದು ಕೊಂಡಿದ್ದಾರೆ. ಗಾಯಗೊಂಡವರು ಮಂಜೇಶ್ವರ ನಿವಾಸಿ ಖಲೀಲ್,ಬಂಗ್ರ ಮಂಜೇಶ್ವರದ ಬಷೀರ್,ರಹ್ಮತ್ ನಗರದ ಫರೀದ್,ಹಾಗು ಮಂಜೇಶ್ವರದ ಸಕೀರ್ ಎಂಬವರಾಗಿದ್ದು ಇವರನ್ನು ಮಂಜೇಶ್ವರದ ಸರಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.ಬೈಕ್ ಲಾರಿ ಪ್ರಯಾಣಿಕರ ಮದ್ಯೆ ಉಂಟಾದ ವಾಗ್ವಾದ ಘರ್ಷಣೆಗೆ ಕಾರಣವಾಗಿದೆ.ಬಳಿಕ ಇತ್ತಂಡಗಳು ಸ್ಥಳದಿಂದ ತೆರಳಿದ್ದು ಅಲ್ಪ ಹೊತ್ತಿನ ಬಳಿಕ ಕ್ರಿಕೆಟ್ ಪಂದ್ಯ ಕಳೆದು ರಿಕ್ಷಾದಲ್ಲಿ ಹಿಂತಿರುಗುತಿದ್ದ 9 ಮಂದಿಯನ್ನು ಹೊಸಂಗಡಿಯಲ್ಲಿ ತಡೆದು ನಿಲ್ಲಿಸಿ ಹಲ್ಲೆಗೊಳಿಸುವಾಗ ಪರಸ್ಪರ ಹೊಡೆದಾಟ ನಡೆದು ನಂತ್ರ ಪೊಲೀಸರು ಸ್ಥಳಕ್ಕೆ ತಲುಪುವಾಗ ಕೊನೆಗೊಂಡಿತು.ಬಳಿಕ ಪೊಲೀಸರು ಘರ್ಷಣೆ ನಿರತರಾದವರ ವಶದಿಂದ ರಿಕ್ಷಾದಲ್ಲಿದ್ದ 9 ಮಂದಿಯನ್ನು ಬಿಡುಗಡೆಗೊಳಿಸಿ ವಶಕ್ಕೆ ತೆಗೆದುಕೊಂಡರು.ಇದಾದ ಬಳಿಕ ರಿಕ್ಷಾಕ್ಕೆ ಹಾನಿಗೈಯಲಾಗಿದೆಯೆಂದು ಮಾಹಿತಿ ಲಭಿಸಿ ಕುಂಜತ್ತೂರಿನಿಂದ ಕೆಲವು ಮಂದಿ ಬೈಕ್ ಗಳಲ್ಲಿ ಸ್ಥಳಕ್ಕೆ ತಲುಪಿದ್ದು ಇವರನ್ನು ಹೊಸಂಗಡಿಯಲ್ಲಿ ಸೇರಿದ ಜನತೆ ಓಡಿಸಿದಾಗ ಬಂದವರು ಬೈಕುಗಳನ್ನು ಉಪೇಕ್ಷಿಸಿ ಪರಾರಿಯಾದರು.ಪುನಃ ಅಲ್ಲಿಗೆ ಪೊಲೀಸರು ತಲುಪಿದಾಗ ಉಪೇಕ್ಷಿತ ಸ್ಥಿತಿಯಲ್ಲಿ 9 ಬೈಕುಗಳು ಕಾಣಸಿಕ್ಕಿದ್ದು ಅವುಗಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.ಆಸ್ಪತ್ರೆಯಲ್ಲಿ ದಾಖಲಾದವರ ದೂರಿನಂತೆ 19 ಮಂದಿಯ ವಿರುದ್ದ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಸಂಭಂಧ ಹೊಸಂಗಡಿ,ಪೊಸೋಟ್,ಉದ್ಯಾವರ,ಕುಂಜತ್ತೂರುಗಳಲ್ಲಿ ಪೊಲೀಸ್ ಬಿಗು ಕಾವಲು ಏರ್ಪಡಿಸಲಾಗಿದೆ.

No comments:

Post a Comment