Wednesday, February 20, 2013

ಕೊಲ್ಲಿ ಉದ್ಯೋಗಿಯ ಕಿಡ್ನಾಪ್ ಮಾಡಿ 50 ಲಕ್ಷ ರೂ ಲಪಟಾವಣೆ



ನಮ್ಮ ಪ್ರತಿನಿಧಿ ವರದಿ
ಮಂಜೇಶ್ವರ:ಕೊಲ್ಲಿ ಉದ್ಯೋಗಿಯೋರ್ವರನ್ನು ಕಿಡ್ನಾಪ್ ಮಾಡಿದ ತಂಡವೊಂದು ನಿರ್ಜನ ಪ್ರದೇಶಕ್ಕೆ ಕೊಂಡೊಯ್ದು ಕೊಠಡಿಯಲ್ಲಿ ಕೂಡಿ ಹಾಕಿ 50 ಲಕ್ಷ ರೂಪಾಯಿಯನ್ನು ಲಪಟಾಯಿಸಿದ ಬಗ್ಗೆ ಮಂಜೇಶ್ವರದಿಂದ ವರದಿಯಾಗಿದೆ.
ತಂಡದಿಂದ ಅಪಹರಣಕ್ಕೊಳಗಾದ ವ್ಯಕ್ತಿ ಕಾಸರಗೋಡು ಚೆಮ್ನಾಡ್ ನಿವಾಸಿ ಕೊಲ್ಲಿ ಉದ್ಯೋಗಿಯಾಗಿರುವ ಮುಜೀಬ್ ಅಬ್ದುಲ್ಲಾ ಎಂಬವರಾಗಿದ್ದಾರೆ.ಫೆಬ್ರವರಿ 2ರಂದು ಕೊಲ್ಲಿಗೆ ತೆರಳಲೆಂದು ಮಂಗಳೂರು ಬಜ್ಪೆ ವಿಮಾನ ನಿಲ್ದಾನಕ್ಕೆ ಹೋಗುವ ಮದ್ಯೆ 15 ಮಂದಿಯ ತಂಡವೊಂದು ಇವರನ್ನು ತಡೆದು ನಿಲ್ಲಿಸಿ ಬಳಿಕ ಅಪಹರಣ ಗೈದು ಕಾಸರಗೋಡಿನ ನಿರ್ಜನ ಪ್ರದೇಶವೊಂದಕ್ಕೆ ಕೊಂಡೊಯ್ದು ಕೊಠಡಿಯಲ್ಲಿ ಕೂಡಿ ಹಾಕಿ ಹಲ್ಲೆಗೈದು ಬಳಿಕ ಬಿಡುಗಡೆಗೊಳಿಸಬೇಕಾದರೆ ಒಂದು ಕೋಟಿ ರೂಪಾಯಿ ನೀಡಬೇಕೆಂದು ತಂಡ ಒತ್ತಾಯಿಸಿದೆ.ಗಾಬರಿಗೊಂಡ ಮುಜೀಬ್ ಅಬ್ದುಲ್ಲಾರವರು ವಿವರವನ್ನು ಕುಟುಂಬಸ್ಥರಿಗೆ ತಿಳಿಸಿದ್ದು ಬಳಿಕ ಸಂಭಂಧಿಕರು ಕಿಡ್ನಾಪ್ ತಂಡಕ್ಕೆ ೫೦ ಲಕ್ಷ ರೂಪಾಯಿ ನೀಡಿದ ನಂತ್ರ ಮುಜೀಬ್ ಅಬ್ದುಲ್ಲಾ ರವರನ್ನು ಬಿಡುಗಡೆಗೊಳಿಸಲಾಗಿದೆ.
ನಂತ್ರ ಸೀದಾ ಕೊಲ್ಲಿಗೆ ತೆರಳಿದ ಮುಜೀಬ್ ಅಬ್ದುಲ್ಲಾ ಅಲ್ಲಿಂದ -ಮೈಲ್ ಮೂಲಕ ಘಟನೆ ಬಗ್ಗೆ ಮಂಜೇಶ್ವರ ಠಾಣೆಗೆ ದೂರು ನೀಡಿದ್ದು ಬುಧವಾರದಂದು ದೂರು ಠಾಣಾಧಿಕಾರಿಯ ಕೈಸೇರಿದೆ.ದೂರಿನಲ್ಲಿ ತಿಳಿಸಿದ ಮಾಹಿತಿಯಂತೆ ಕಾಸರಗೋಡು ಚೆಮ್ನಾಡ್ ಪಾದೂರು ನಿವಾಸಿಯೋರ್ವನ ಸಹಿತ ೧೫ ಮಂದಿಯ ವಿರುದ್ದ ಕೇಸು ದಾಖಲಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

No comments:

Post a Comment