Saturday, February 16, 2013

ಮಂಜೇಶ್ವರದಲ್ಲಿ ಶಿಪ್ಪಿಂಗ್ ಹಾರ್ಬರ್ 49.80 ಕೋಟಿ ರೂ.ಗಳ ಆಡಳಿತಾನುಮತಿ


*ರಹಿಮಾನ್ ಉದ್ಯಾವರ

ಮಂಜೇಶ್ವರ:ಮಂಜೇಶ್ವರದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಮೀನುಗಾರಿಕಾ ಬಂದರು(ಶಿಪ್ಪಿಂಗ್ ಹಾರ್ಬರ್) ಗೆ ಯು.ಪಿ..ಸರಕಾರದಿಂದ 49.80 ಕೋಟಿ ರೂ ಆಡಳಿತಾನುಮತಿ ಲಭಿಸಿರುವುದಾಗಿ ಮಂಜೇಶ್ವರದ ಶಾಸಕರಾದ ಪಿ.ಬಿ.ಅಬ್ದುಲ್ ರಜಾಕ್ ರವರು ತಿಳಿಸಿರುತ್ತಾರೆ.
ಇನ್ನು ಮುಂದಿನ ಕ್ರಮಕ್ಕಾಗಿ ಕೇಂದ್ರ ಸರಕಾರ ಅನುಮತಿ ಲಭಿಸಿದಲ್ಲಿ ಬಂದರಿನ ನಿರ್ಮಾಣ ಕೆಲಸವನ್ನು ಶೀಘ್ರವೇ ಆರಂಭಿಸುವುದಾಗಿ ಮೀನುಗಾರಿಕಾ ಸಚಿವರು ಮಂಜೇಶ್ವರ ಶಾಸಕರಿಗೆ ಭರವಸೆ ನೀಡಿರುವುದಾಗಿ ತಿಳಿದು ಬಂದಿದೆ.ಮಂಜೇಶ್ವರ ಮೀನುಗಾರಿಕಾ ಬಂದರಿನ ಅಭಿವೃದ್ದಿಯ ಬಗ್ಗೆ ಶಾಸಕ ಅಬ್ದುಲ್ ರಜಾಕ್ ರವರು ಮಂಡಿಸಿದ ಗೊತ್ತುವಳಿಗೆ ಉತ್ತರಿಸುತ್ತಾ ಸಚಿವರು ಭರವಸೆಯನ್ನು ನೀಡಿದ್ದಾರೆ.ಮಂಜೇಶ್ವರ ಮೀನುಗಾರಿಕಾ ಬಂದರಿನ ನಿರ್ಮಾಣ ಕಾರ್ಯಕ್ಕಾಗಿ ಈಗಾಗಲೇ ಬೌಗೋಳಿಕ ಅಧ್ಯಯನ ಕೇಂದ್ರ ಇದರ ಬಗ್ಗೆ ಅಧ್ಯಯನ ನಡೆಸಿ ಸಿ.ಆರ್.ಝಡ್ ಸ್ಟಾಟ್ಸ್ ವರದಿಯನ್ನು ಸಲ್ಲಿಸಿದೆ ಹಾಗು ಪುಣೆಯಲ್ಲಿರುವ ಸೆಂಟ್ರಲ್ ವಾಟರ್ ಆಂಡ್ ಪವರ್ ಇನ್ ಸ್ಟಿಯೂಟ್ ಅಧಿಕಾರಿಗಳು ಬಂದರಿನ ಮಾದರಿ ಮತ್ತು ಪರಿಸರ ಅಧ್ಯಯನ ವನ್ನು ಈಗಗಾಲೇ ನಡೆಸಿರುತ್ತಾರೆ.ಪ್ರಮುಖವಾಗಿ ಬೇಕಾಗಿರುವ ಕೋಸ್ಟ್ ಗಾರ್ಡ್ ಝೋನ್ ಮ್ಯಾನೇಜ್ ಮೆಂಟ್ ಆಥೋರಿಟಿಯಿಂದ ಕೋಸ್ಟಲ್ ಝೋನ್ ಕ್ಲಿಯರೆನ್ಸ್ ಸರ್ಟಿ ಫಿಕೇಟ್ ಕೂಡಾ ಲಭಿಸಿದೆ.
275 ದೋಣಿಗಳಿಗೆ ಉಪಯೋಗಿಸಲು ಸಾದ್ಯವಾಗುವಂತಹ ಮೀನುಗಾರಿಕಾ ಬಂದರನ್ನು ಮಂಜೇಶ್ವರದಲ್ಲಿ ನಿರ್ಮಿಸಲಾಗುತ್ತಿದೆ.490.530 ಮೀಟರ್ ಉದ್ದದಲ್ಲಿ ಎರಡು ಧಕ್ಕೆಗಳು,ದೋಣಿಗಳನ್ನು ದಡ ಸೇರಿಸಲು 100 ಉದ್ದಳತೆಯಲ್ಲಿ ಸಿಮೆಂಟಿನಿಂದ ನಿರ್ಮಿತ ಸೌಕರ್ಯ.ಪಾರ್ಕಿಂಗ್ ಏರಿಯಾ,ಶುದ್ದ ನೀರು ವಿತರಣೆ,660 ಸ್ಕ್ವಾರ್ ಫೀಟ್ ವಿಸ್ತೀರ್ಣದಲ್ಲಿ ಹರಾಜು ಕೇಂದ್ರ ಸಂಪರ್ಕ ರಸ್ತೆ,ಉತ್ತಮ ಕ್ಯಾಂಟೀನ್ ಸೌಕರ್ಯ,ಬಲೆಗಳನ್ನು ದುರಸ್ಥಿಗೈಯಲು ನೆಟ್ ಮೆಂಡಿಂಗ್ ಶೆಡ್,ಮಲಿನ ಜಲ ಸಂರಕ್ಷಣಾ ಘಟಕ ಮೊದಲಾದ ರೀತಿಯ ಉತ್ತಮ ಸೌಕರ್ಯಗಳು ಮಂಜೇಶ್ವರದಲ್ಲಿ ಉದ್ದೇಶಿಸಿರುವ ನೂತನ ಬಂದರಿನ ಪಟ್ಟಿಯಲ್ಲಿ ಒಳಗೊಂಡಿದೆ.ಟೆಂಡರ್ ಗಳನ್ನು ಅಹ್ವಾನಿಸಿ ಶೀಘ್ಹ್ರದಲ್ಲೇ ಬಂದರಿನ ಕೆಲಸಕ್ಕೆ ಚಾಲನೆ ನೀಡಲಾಗುವುದೆಂದು ಮಂಜೇಶ್ವರ ಶಾಸಕರಾದ ಪಿ.ಬಿ.ಅಬ್ದುಲ್ ರಜಾಕ್ ತಿಳಿಸಿರುತ್ತಾರೆ

No comments:

Post a Comment