Friday, February 1, 2013

30೦ ಎಕ್ರೆ ಸರಕಾರಿ ವ್ಯಾಜ್ಯ ಭೂಮಿಯಲ್ಲಿ ಕಟ್ಟಿದ ಗುಡಿಸಲು ನೆಲಸಮ:ನೇತಾರರ ಬಂಧನ



ಮಂಜೇಶ್ವರ:ಇತ್ತೀಚೆಗೆ ಭೂಮಿ ಮನೆ ಇಲ್ಲದ ಭೂರಹಿತರು ಸುಮಾರು 300 ಎಕ್ರೆ ಸ್ಥಳವನ್ನು ತನ್ನದಾಗಿಸಿ ಕಟ್ಟಿದ ಗುಡಿಸಲುಗಳನ್ನು ಶುಕ್ರವಾರ ಬೆಳಿಗ್ಗೆ ರೆವೆನ್ಯೂ ಅಧಿಕಾರಿಗಳು ಪೊಲೀಸರ ಜತೆ ಸೇರಿ ನೆಲಸಮಗೊಳಿಸಿದ ಘಟನೆ ಘಟನೆ ಇಂದು ಬೆಳಿಗ್ಗೆ ಇಲ್ಲಿಗೆ ಸಮೀಪದ ಪೈವಳಿಕೆ ಕಯ್ಯಾರು ವಿಲೇಜಿನ ಜೋಡುಕಲ್ಲಿನ ಓಪತ್ತಿಮೂಲೆಯಲ್ಲಿ ನಡೆದಿದೆ.
ಭೂಮಿ ಮನೆಯಿಲ್ಲದ  ಸುಮಾರು 300 ರಷ್ಟು ಕುಟುಂಬದ ಭೂರಹಿತರು ಇತ್ತೀಚೆಗೆ ಜೋಡುಕಲ್ಲಿನ ಓಪತ್ತಿಮೂಲೆಯಲ್ಲಿರುವ 300 ಎಕ್ರೆ ಸರಕಾರಿ ವ್ಯಾಜ್ಯ  ಭೂಮಿಯಲ್ಲಿ ಕೆಂಪು ಧ್ವಜವನ್ನು ಹಾರಿಸಿ ಗುಡಿಸಲುಗಳನ್ನು ಕಟ್ಟಿದ್ದರು ಅಂದು ಇವರ ಜತೆ ಕೈಜೋಡಿಸಿದ ಸಿಪಿಎಂ,ಕರ್ಷಕ ಸಂಘ,ಕರ್ಷಕ ತೊಯಿಲಾಳಿ ಯೂನಿಯನ್,ಪರಿಶಿಷ್ಟ ಜಾತಿ -ವರ್ಗ,ಹಾಗು ಆದಿವಾಸಿ ಸಂಘಟನೆಗಳ ಆಶ್ರಯದಲ್ಲಿ ಮಿಗತೆ ಭೂಮಿಯನ್ನು ವಶಪಡಿಸಲಾಗಿತ್ತು.
ಶುಕ್ರವಾರ ಬೆಳಿಗ್ಗೆ ಜೋಡು ಕಲ್ಲಿನ ಓಪತ್ತಿ ಮೂಲೆಗೆ ತಾಹಸಿಲ್ದಾರ್ ಶಿವಕುಮಾರ್ ರವರ ನೇತೃತ್ವದಲ್ಲಿ ತಲುಪಿದ ರೆವನ್ಯೂ ಅಧಿಕಾರಿಗಳು ಹಾಗು ಪೊಲೀಸರು ಹೊರ ರಾಜ್ಯದ ಕಾರ್ಮಿಕರ ಸಹಾಯದಿಂದ ಭೂರಹಿತರು 300 ಎಕ್ರೆ ಸರಕಾರಿ ವ್ಯಾಜ್ಯ ಭೂಮಿಯಲ್ಲಿ ಕಟ್ಟಿದ ಗುಡಿಸಲುಗಳನ್ನು ನೆಲಸಮಗೊಳಿಸಿದರು. ಸಂದರ್ಭ ಅಧಿಕಾರಿಗಳ ಕ್ರಮವನ್ನು ವಿರೋಧಿಸಿ ರಂಗಕ್ಕೆ ಬಂದ ಸಿಪಿಎಂ ಪೈವಳಿಕೆ ಲೋಕಲ್ ಕಾರ್ಯದರ್ಶಿ ಅಬ್ದುಲ್ ರಜಾಕ್ ಚಿಪ್ಪಾರ್(೪೧) ಬಾಯಾರು ಲೋಕಲ್ ಕಮಿಟಿ ಕಾರ್ಯದರ್ಶಿ ರಾಘವನ್(೬೧) ಹಾಗು ಇತರ ಕೆಲವು ಮುಖಂಡರುಗಳನ್ನು  ಪೊಲೀಸರು ಬಂಧಿಸಿದರು.ಸ್ವಲಪ ಕಾಲ ಇಲ್ಲಿ ಸಂಘರ್ಷಾವಸ್ಥೆ ಉಂಟಾಯಿತು.

No comments:

Post a Comment