Monday, February 4, 2013

ಉದ್ಯಾವರ:ಗಂಡನ ಮೇಲೆ ಕೇಸು ನೀಡಿ ತರುಣರ ಜತೆ 3 ಮಕ್ಕಳ ತಾಯಿಯ ರಾಸಲೀಲೆಮಂಜೇಶ್ವರ:ಮೂರು ಮಕ್ಕಳ ತಾಯಿಯೊಬ್ಬಳು ತಾಳಿ ಕಟ್ಟಿದ ಗಂಡನ ವಿರುದ್ದ ಪೊಲೀಸ್ ಕೇಸು ನೀಡಿ ತರುಣರ ಜತೆಯಲ್ಲಿ ರಾಸಲೀಲೆ ನಡೆಸುತ್ತಿರುವ ಪ್ರಕರಣವೊಂದು ಉದ್ಯಾವರ ಇರ್ಷಾದ್ ರಸ್ತೆಯ ಸಮೀಪದಿಂದ ತಡವಾಗಿ ಬೆಳಕಿಗೆ ಬಂದಿದೆ.
ರಾಷ್ಟ್ರೀಯ ಹೆದ್ದಾರಿಗೆ ತಾಗಿ ಕೊಂಡಿರುವ ಉದ್ಯಾವರ ಇರ್ಷಾದ್ ರಸ್ತೆಯ ಆಸುಪಾಸಿನಲ್ಲಿ ವಾಸವಾಗಿರುವ 3 ಮಕ್ಕಳ ತಾಯಿಯೊಬ್ಬಳು ತನ್ನ ಸ್ವಂತ ಗಂಡನನ್ನು ಮನೆಯಿಂದ ಹೊರಹಾಕಿ ನಾನ್ಯಾವುದಕ್ಕೂ ಕಮ್ಮಿ ಇಲ್ಲವೆಂಬುದನ್ನು ಸಾಬೀತು ಪಡಿಸಲು ಆತನ ವಿರುದ್ದ ಅಲ್ಲ ಸಲ್ಲದ ಆರೋಪ ಹೊರಿಸಿ ಗಂಡನ ವಿರುದ್ದ ಕೇಸು ನೀಡಿ ಗಂಡನನ್ನು ಮನೆಗೆ ಬಾರದ ರೀತಿಯಲ್ಲಿ ಮಾಡಿ ಗಲ್ಪ್ ನಿಂದ ಆಗಮಿಸುವ ಅವಿವಾಹಿತ ತರುಣರ ಜತೆಯಾಗಿ ತನ್ನ ಅನೈತಿಕ ಬಂಧವನ್ನು ಬೆಳಸಿ ರಾಸಲೀಲೆ ನಡೆಸುತ್ತಿರುವುದಾಗಿ ಇಲ್ಲಿಯ ಸ್ಥಳೀಯರಿಂದ ಕೇಳಿ ಬಂದಿದೆ.
ವೃತ್ತಿಯಲ್ಲಿ ಸ್ಟಿಚ್ಚಿಂಗ್ ಕೆಲಸ ಮಾಡುತ್ತಿರುವ ಮಹಿಳೆ ಮನೆಯ ಮುಂದುಗಡೆ ರಾತ್ರಿ 12 ಗಂಟೆಯ ನಂತ್ರ ಓಮ್ನಿ  ಹಾಗು ಹಲವು ರೀತಿಯ ಬಣ್ಣದ ಕಾರುಗಳು ಪ್ರತ್ಯಕ್ಷವಾಗುತಿದ್ದು ಕಾರಿನಲ್ಲಿ ಬರುತ್ತಿರುವ ಗಿರಾಕಿಗಳ ಅಟ್ಟಹಾಸದಿಂದ ಇಲ್ಲಿಯ ಆಸುಪಾಸಿನ ಜನರಿಗೆ ನಿದ್ರೆಯೇ ಇಲ್ಲದಂತಾಗಿರುವುದಾಗಿ ಸ್ಥಳೀಯರೊಬ್ಬರು ತಿಳಿಸಿದ್ದಾರೆ.ಉದ್ಯಾವರ ಕುಂಜತ್ತೂರು ಪರಿಸರದಲ್ಲಿ ಎಲ್ಲಾದರೂ ರಾತ್ರಿ ಮದರಂಗಿ ಕಾರ್ಯಕ್ರಮಗಳೇನಾದರೂ ಇದ್ದರೆ ದಿವಸಗಳಲ್ಲಿ ಮನೆಯ ಮುಂದುಗಡೆ ವಾಹನಗಳ ಕ್ಯೂ. ಇದರ ಬಗ್ಗೆ  ವಿಚಾರಿಸಲು ಹೋದ ಊರವರಿಗೆ ಅವಾಚ್ಯ ಶಭ್ದಗಳಿಂದ ನಿಂದಿಸಿ ಚಪ್ಪಲಿ ಎಸೆದ ಘಟನೆ ಕೂಡಾ ನಡೆದಿದೆ ಎಂಬುದಾಗಿ ಕೇಳಿ ಬಂದಿದೆ.ಈಕೆಯ ಗಂಡ ಪೊಲೀಸರಿಗೆ ಹೆದರಿ ಗಲ್ಫ್ ಗೆ ಪಲಾಯನ ಗೈದಿರುತ್ತಾನೆ.ಗಲ್ಫ್ ರಾಜ್ಯಗಳಿಂದ ಆಗಮಿಸುತ್ತಿರುವ  ಅವಿವಾಹಿತ ತರುಣರನ್ನೇ ತನ್ನ ಬಲೆಗೆ ಹಾಕಿಕೊಳ್ಳುತ್ತಿರುವ ಈಕೆ ಗಲ್ಫ್ ನಲ್ಲಿರುವ ಅವರ ಸ್ನೇಹಿತರ ಮೊಬೈಲ್ ಸಂಖ್ಯೆಗಳನ್ನು ಪಡೆದು ದೂರವಾಣಿ ಮೂಲಕವೂ ಸೆಕ್ಸ್ ಸಂಭಾಷಣೆ ನಡೆಸಿ ಹಣ ಮಾಡುತ್ತಿರುವುದಾಗಿ ಕೂಡಾ ಸ್ಥಳೀಯರು ದೂರುತಿದ್ದಾರೆ.
ಪರಿಸರದ ತರುಣರ ಜತೆ ಸಂಪರ್ಕವನ್ನು ಇಟ್ಟು ಕೊಳ್ಳದ ಈಕೆ ಹೆಚ್ಚಾಗಿ ಹೊರ ರಾಜ್ಯದ ತರುಣರ ಜತೆಯಾಗಿಯೇ ತನ್ನ ಅನೈತಿಕ ಸಂಭಂಧವನ್ನು ಬೆಳೆಸಿಕೊಂಡಿರುವುದಾಗಿ ಜನರಿಂದ ಕೇಳಿ ಬಂದಿದೆ.ಕೆಲವು ಸಮಯಗಳ ಹಿಂದೆ ರಾಸಲೀಲೆ ನಡೆಸಲು ಈಕೆಯ ಮನೆಗೆ ನುಗ್ಗಿದ ತರುಣನೊಬ್ಬನನ್ನು ಸ್ಥಳೀಯರು ಮನೆಯ ಒಳಗೆ ಕೂಡಿ ಹಾಕಿ ಹಿಗ್ಗಾಮಗ್ಗಾ ಥಳಿಸಿದ ಘಟನೆ ಕೂಡಾ ನಡೆದಿರುವುದಾಗಿ ತಿಳಿದು ಬಂದಿದೆ.
ಪ್ರಾಮಾಣಿಕರೇ ತುಂಬಿರುವ ಪರಿಸರದಲ್ಲಿ  ಸ್ತ್ರೀ ಕುಲಕ್ಕೇ ಕಲಂಕ ತರುವಂತಹ ಮಹಿಳೆಯ ಅನೈತಿಕ ದಂಧೆಯಿಂದಾಗಿ ಪ್ರಾಮಾಣಿಕ ಮಹಿಳೆಯರಿಗೆ  ಮನೆಯಿಂದ ಹೊರಗೆ ನಡೆದಾಡುವುದೇ ಕಷ್ಟವಾಗಿರುವುದಾಗಿ ಕೇಳಿ ಬರುತ್ತಿದೆ.

No comments:

Post a Comment