Wednesday, February 20, 2013

ಫೆ. 25ರಂದು ಏಳು ಉಪಗ್ರಹಗಳ ಜೊತೆಗೆ ಇಸ್ರೋ ರಾಕೆಟ್ ಗಗನಕ್ಕೆ



 ಚೆನ್ನೈ: ಭಾರತೀಯ ರಾಕೆಟೊಂದು ಏಳು ಉಪಗ್ರಹ ಗಳನ್ನು ಹೊತ್ತುಕೊಂಡು ಫೆಬ್ರವರಿ 25 ರಂದು ಗಗನಕ್ಕೆ ನೆಗೆಯಲಿದೆ. ಭಾರತೀಯ ಬಾಹ್ಯಾಕಾಶ ಸಂಸ್ಥೆಯ ಅಧಿಕಾರಿಗಳು ಈಗ ರಾಕೆಟ್ ಹಾರಾಟದ ಸಿದ್ಧತೆಯಲ್ಲಿ ತೊಡಗಿ ದ್ದು, ಪೂರ್ಣಕಾಲಿಕ ಹಾರಾಟ ತಾಲೀಮಿನಲ್ಲಿ ತೊಡಗಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.
‘‘ಪೋಲಾರ್ ಸೆಟಲೈಟ್ ಲಾಂಚ್ ವೆಹಿಕಲ್- ಪಿಎಸ್‌ಎಲ್‌ವಿ-ಸಿ20-ಗೆ ಉಪಗ್ರಹಗಳನ್ನು ಜೋಡಿಸ ಲಾಗಿದೆ. ರಾಕೆಟನ್ನು ಸಂಪೂರ್ಣ ತಪಾಸಣೆಗೆ ಒಳಪಡಿಸಲಾಗಿದೆ’’ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಅಧಿಕಾರಿ ಹೇಳಿದರು.
 ‘‘ಈಗ ಉಡಾವಣೆ ಪರೀಕ್ಷಾ ಹಂತದಲ್ಲಿದೆ. ಅಗತ್ಯ ಕನೆಕ್ಟರ್‌ಗಳನ್ನು ಜೋಡಿಸಿದ ಬಳಿಕ ಇನ್ನು ಎರಡು ದಿನಗಳಲ್ಲಿ ರಾಕೆಟ್ ಹಾರಾಟ ಹಂತಕ್ಕೆ ಭಡ್ತಿ ಪಡೆಯಲಿದೆ’’ ಎಂದರು. ‘‘ಪೂರ್ಣ ರಾಕೆಟ್ ಪರೀಕ್ಷೆ ಯಲ್ಲಿ ಯಾವುದೇ ಅಡೆತಡೆ ಕಂಡುಬಂದಿಲ್ಲ. ಎಲ್ಲವೂ ನಿರೀಕ್ಷಿಸಿದಂತೆ ನಡೆಯುತ್ತಿದೆ. ಫೆಬ್ರವರಿ 25ರಂದು ಸಂಜೆ ನಡೆಯುವ ಹಾರಾಟಕ್ಕೆ ಸಿದ್ಧತೆಗಳು ಪೂರ್ಣಗೊಳ್ಳುತ್ತಿವೆ’’ ಎಂದರು.
 ಫೆಬ್ರವರಿ 22ರಿಂದ 25ರವರೆಗೆ ‘ಉಡಾವಣಾ ಕಿಂಡಿ’ಯನ್ನು ತೆರೆಯಲಾಗುವುದು. 59 ಗಂಟೆಗಳ ಕ್ಷಣಗಣನೆಯಲ್ಲಿ ವ್ಯವಸ್ಥೆಗಳನ್ನು ಪರಿಶೀಲಿಸಲಾಗುವುದು ಹಾಗೂ ರಾಕೆಟ್‌ಗೆ ಇಂಧನ ತುಂಬಿಸಲಾಗುವುದು.

ನಿಗದಿತ ಹಾರಾಟದ ಎರಡು ದಿನಗಳ ಮೊದಲು ಉಡಾವಣೆ ಅನುಮತಿ ಮಂಡಳಿ (ಎಲ್‌ಎಬಿ) ಸಭೆ ಸೇರುವ ನಿರೀಕ್ಷೆಯಿದೆ. ಅದು ಪರಿಸ್ಥಿತಿಯನ್ನು ಅವಲೋಕಿಸಿ ಉಡ್ಡಯನಕ್ಕೆ ಅಂತಿಮ ಒಪ್ಪಿಗೆ ನೀಡಲಿದೆ. ಇಲ್ಲಿಂದ ಸುಮಾರು 80 ಕಿ.ಮೀ. ದೂರದ ಶ್ರೀಹರಿಕೋಟ ಉಡ್ಡಯನ ಕೇಂದ್ರದಿಂದ ರಾಕೆಟ್ ಬಾಹ್ಯಾಕಾಶಕ್ಕೆ ನೆಗೆಯಲಿದೆ.
ಏಳು ಉಪಗ್ರಹಗಳ ಒಟ್ಟು ತೂಕ 700 ಕೆಜಿ. ಅವುಗಳ ಪೈಕಿ ಭಾರತ-ಫ್ರಾನ್ಸ್ ಸಹಯೋಗ ಉಪಗ್ರಹ ‘ಸರಳ್’ ಸೇರಿದೆ. ಈ ಉಪಗ್ರಹ ಸಮುದ್ರ ಮೇಲ್ಮೈನ ಎತ್ತರಗಳನ್ನು ಅಳೆಯುವುದು ಹಾಗೂ ಸಂಗ್ರಹಿಸಲಾದ ಮಾಹಿತಿಯನ್ನು ಉಭಯ ದೇಶಗಳು ಹಂಚಿಕೊಳ್ಳುವುದು.
ಪಿಎಸ್‌ಎಲ್‌ವಿ-ಸಿ20 ಹೊತ್ತೊಯ್ಯುವ ಇತರ ಆರು ಉಪಗ್ರಹಗಳೆಂದರೆ- ಎರಡು ಕೆನಡದ ಉಪಗ್ರಹಗಳು ‘ನಿಯೋಸ್ಸಾಟ್’, ಮೆಕ್‌ಡೊನಾಲ್ಡ್, ಡೆಟ್‌ವಿಲರ್ ಮತ್ತು ಅಸೋಸಿಯೇಟ್ಸ್ (ಎಂಡಿಎ) ನಿರ್ಮಿಸಿದ ‘ಸಫೈರ್’, ಬ್ರೈಟ್ ಮತ್ತು ಯೂನಿಬ್ರೈಟ್ (ಎರಡೂ ಆಸ್ಟ್ರಿಯ), ಎಸ್‌ಟಿಆರ್‌ಎಎನ್‌ಡಿ-1 (ಬ್ರಿಟನ್) ಮತ್ತು ಔಸಾಟ್ (ಡೆನ್ಮಾರ್ಕ್).

No comments:

Post a Comment