Saturday, February 23, 2013

ಭಾರತದ ವಿವಿಧ ಬ್ಯಾಂಕ್‌ಗಳಲ್ಲಿ ವಾರಿಸುದಾರರಿಲ್ಲದ 2,481 ಕೋಟಿ ರೂ.



ಹೊಸದಿಲ್ಲಿ:ಭಾರತದ ವಿವಿಧ ಬ್ಯಾಂಕ್‌ಗಳ ಸುಮಾರು 1.12 ಕೋಟಿ ಖಾತೆಗಳು ವಾರಿಸುದಾರ ರಹಿತ ಖಾತೆಗಳಾಗಿದ್ದು, ಈ ಖಾತೆಗಳಲ್ಲಿ 2011 ಡಿಸೆಂಬರ್ ಅಂತ್ಯಕ್ಕೆ ಸುಮಾರು 2,481.40 ಕೋ. ರೂ.ಗಳಿದ್ದವು ಎಂದು ರಿಸರ್ವ್ ಬ್ಯಾಂಕ್ ಸಂಸತ್ತಿಗೆ ಮಾಹಿತಿ ನೀಡಿದೆ.
ಕೇಂದ್ರ ಹಣಕಾಸು ಖಾತೆ ಸಹಾಯಕ ಸಚಿವ ನಮೋ ನಾರಾಯಣ್ ಮೀನ ಈ ವಿಷಯವನ್ನು ಲೋಕಸಭೆಗೆ ಇಂದು ತಿಳಿಸಿದರು.

ತಿದ್ದುಪಡಿಗೊಳಪಟ್ಟ ಬ್ಯಾಂಕಿಂಗ್ ಕಾಯ್ದೆ(2012)ಗೆ, ನೂತನ ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆಯನ್ನು ಸೇರಿಸಲು ಉದ್ಧೇಶಿಸಿದ್ದು, ಇದರಂತೆ ಹಕ್ಕುದಾರರಿಲ್ಲದ ಎಲ್ಲಾ ಬ್ಯಾಂಕ್ ಖಾತೆಯನ್ನು ಜೊತೆ ಸೇರಿಸಿ ಅದನ್ನು ‘‘ಖಾತೆದಾರರ ಶಿಕ್ಷಣ ಹಾಗೂ ಅರಿವು ನಿಧಿ’’ ಎಂದು ಮರು ನಾಮಕರಣ ಮಾಡಿ ಮುಂದಿನ 10 ವರ್ಷಗಳಿಗೆ ಸಂರಕ್ಷಿಸಿಡುವ ಯೋಜನೆ ನಮ್ಮ ಮುಂದಿದೆ ಎಂದು ಅವರು ಹೇಳಿದರು.

No comments:

Post a Comment