Thursday, February 28, 2013

2013-14 ರ ಬಜೆಟ್‌ ನವದೆಹಲಿ, : ಹಣಕಾಸು ಸಚಿವ ಪಿ ಚಿದಂಬರಂ ಯುಪಿಎ ಮೈತ್ರಿಕೂಟ ಸರಕಾರದ ಕೊನೆಯ ಬಜೆಟ್‌ನ್ನು ಇಂದು ಲೋಕಸಭೆಯಲ್ಲಿ ಮಂಡಿಸಿದ್ದಾರೆ.
ಮುಂಗಡ ಪತ್ರದ ಸಾರಾಂಶ:
* ಅಂಚೆ ಕಚೇರಿ ತಂತ್ರಜ್ಞಾನ ಆಧುನೀಕರಣಕ್ಕೆ 532 ಕೋಟಿ ರೂ.
* ರಕ್ಷಣಾ ವೆಚ್ಚ 2,03,672 ಕೋಟಿ ರೂ. ಗೆ ಏರಿಕೆ
* ವಿಮೆ, ನೌಕರರ ಭವಿಷ್ಯ ನಿಧಿಗಳು ಸಾಲ ವಿಭಾಗದ ಮೂಲಕ ಷೇರು ಮಾರುಕಟ್ಟೆಯಲ್ಲಿ ನೇರವಾಗಿ ಹೂಡಿಕೆ ಮಾಡಬಹುದು.
* ಬೆಂಗಳೂರು-ಚೆನ್ನೈ ಕೈಗಾರಿಕಾ ಕಾರಿಡಾರ್ ಯೋಜನೆ (ಜಪಾನ್ ಸಹಯೋಗದಲ್ಲಿ)
* ರಕ್ಷಣಾ ಖಾತೆಗೆ 2,20,000 ಕೋಟಿ
* ಬಾಹ್ಯಾಕಾಶ ಇಲಾಖೆಗೆ 5400 ಕೋಟಿ ರೂ
* ಅಣು ಶಕ್ತಿ ಇಲಾಖೆಗೆ 5600 ಕೋಟಿ ರೂ
* NHB ಸಹಯೋಗದಲ್ಲಿ ನಗರ ಗೃಹ ನಿರ್ಮಾಣ ಬ್ಯಾಂಕ್
* 1000 ಕೋಟಿ ರೂ ಬಂಡವಾಳದೊಂದಿಗೆ ಮೊದಲ ಮಹಿಳಾ ಸಾರ್ವಜನಿಕ ಬ್ಯಾಂಕ್ ಸ್ಥಾಪನೆ
* ಮನೆಗೆಲಸದವರು ಮತ್ತು ಅಂಗನವಾಡಿ ಕಾರ್ಯಕರ್ತಕರಿಗೆ ಸಮೂಹ ವಿಮೆ
* 2014ರ ವೇಳೆಗೆ ಎಲ್ಲ ಸಾರ್ವಜನಿಕ ಬ್ಯಾಂಕುಗಳ ಎಲ್ಲ ಶಾಖೆಗಳಲ್ಲೂ ATMಗಳ ಸ್ಥಾಪನೆ
* 13 ಸಾರ್ವಜನಿಕ ವಲಯದ ಬ್ಯಾಂಕುಗಳ ಒಟ್ಟು ಆದಾಯ ಸಂಗ್ರಹ 14000 ಕೋಟಿ ರೂ
* 6 ನೂತನ AIIMS ಗಳ ಸ್ಥಾಪನೆ
* ಜವಳಿ ಕ್ಷೇತ್ರದಲ್ಲಿ ತಂತ್ರಜ್ಞಾನ ಉನ್ನತೀಕರಣಕ್ಕೆ 2400 ಕೋಟಿ ರೂ
* ಬೆಂಗಳೂರು-ಮುಂಬೈ ಕಾರಿಡಾರ್ ಯೋಜನೆಗೆ ವಿಶೇಷ ಒತ್ತು
* ವಿದ್ಯುತ್ ಯಂತ್ರೋಪಕರಣಕ್ಕೆ ಶೂನ್ಯ ಕಸ್ಟಮ್ಸ್ ತೆರಿಗೆ
* ಗೃಹಸಾಲದ ಮೇಲೆ ರಿಯಾಯಿತಿ: ಮೊದಲ 25 ಲಕ್ಷ ರೂ ಸಾಲ ಮಿತಿಯಲ್ಲಿ ಒಂದು ಲಕ್ಷ ರೂ. ತೆರಿಗೆ ಮುಕ್ತ
* ಗ್ರಾಮೀಣಾಭಿವೃದ್ಧಿ ಖರ್ಚು ಶೇ. 46ರಷ್ಟು ಹೆಚ್ಚಳ
* ನಾಲ್ಕು infrastructure bonds ಮೂಲಕ 25000 ಕೋಟಿ ರೂ ಸಂಗ್ರಹ
* AIIMS ಮಾದರಿಯ ಇನ್ನೂ 6 ವೈದ್ಯಕೀಯ ಕಾಲೇಜುಗಳ ಆರಂಭ
* 700000 ಕೋಟಿ ರೂ ಕೃಷಿ ಸಾಲ ಯೋಜನೆಗೆ
* ಎಸ್ಸಿ/ ಎಸ್ಟಿ ಶಿಷ್ಯವೇತನಕ್ಕೆ ಹೆಚ್ಚಿನ ಒತ್ತು
* ಆಯುಷ್ ಇಲಾಖೆಗೆ 1069 ಕೋಟಿ ರೂ.
*ಮಹಿಳಾ ಮತ್ತು ಮಕಳ ಕಲ್ಯಾಣ ಇಲಾಖೆಗೆ 200 ಕೋಟಿ ರೂ.
ವೈದ್ಯಕೀಯ ಶಿಕ್ಷಣಕ್ಕೆ 7427  ಕೋಟಿ ರೂ.
* ಖರ್ಚು ಗಾತ್ರ ಏರಿಕೆ- ಅಂದರೆ ತೆರಿಗೆ ಹೆಚ್ಚಳದ ನಿರೀಕ್ಷೆ
* 3400 ಕೋಟಿ ರೂ. ಕೃಷಿ ಸಂಶೋಧನೆಗೆ
* ಶಿಕ್ಷಣಕ್ಕೆ 65867 ಕೋಟಿ ರೂ
* 4727 ಕೋಟಿ ವೈದ್ಯಕೀಯ ಸಂಶೋಧನೆಗೆ
* ಆರೋಗ್ಯಕ್ಕೆ 33,000 ಕೋಟಿ ರೂ.
* ವಿಕಲಚೇತರಿಗೆ 110 ಕೋಟಿ ವಿಶೇಷ ಯೋಜನೆ
* ಅಲ್ಪಸಂಖ್ಯಾತರ ಕಲ್ಯಾಣಕ್ಕೆ 3511 ಕೋಟಿ ರೂ.
ಗ್ರಾಮೀಣ ಅಭಿವೃದ್ಧಿಗೆ 80,000 ಕೋಟಿ ರೂ.
* ಪರಿಶಿಷ್ಟ ಜಾತಿಗೆ 41,000 ಕೋಟಿ ರೂ, ಬುಡಕಟ್ಟು ಜನರ ಕಲ್ಯಾಣಕ್ಕಾಗಿ 28,500 ಕೋಟಿ ರೂ.
* ಪ್ರಸಕ್ತ ವರ್ಷ ಶೇ.5.1ರ ಜಿಡಿಪಿ ತಲುಪುವ ಗುರಿ
* 1630825 ಕೋಟಿ ರೂ. ಒಟ್ಟು ಖರ್ಚು. 5,55,322 ಕೋಟಿ ರೂ. ಯೋಜನಾ ಖರ್ಚು
* ಭಾರತದ ಪ್ರಗತಿಗೆ ಯಾವುದೇ ಅಡ್ಡಿ-ಆತಂಕವಿಲ್ಲ. ಆದರೆ ಕರೆಂಟ್ ಅಕೌಂಟ್ ಕೊರತೆಯದ್ದೇ ಬಾಧೆ.

No comments:

Post a Comment