Tuesday, February 26, 2013

2013-14 ರೈಲ್ವೆ ಬಜೆಟ್ ಮಂಡನೆ


2013-14 ರೈಲ್ವೆ ಬಜೆಟ್ ಮಂಡನೆ


ಹಿನ್ನೆಲೆ: 2013-14 ರೈಲ್ವೆ ಬಜೆಟ್‌ನ್ನು ರೈಲ್ವೆ ಸಚಿವ ಪಿ.ಕೆ.ಪವನ್ ಕುಮಾರ್ ಬನ್ಸಲ್ ಲೋಕ ಸಭೆಯಲ್ಲಿ ಬಜೆಟ್ ಮಂಡಿಸಿದರು. ಈ ಬಗ್ಗೆ ಮಾತನಾಡುತ್ತಿರುವ ಅವರು, ರೈಲ್ವೆ ಬಜೆಟ್ ಮಂಡಿಸಲು ನನಗೆ ಸಂತೋಷವಾಗುತ್ತಿದೆ ಎಂದರು.
  ಭಾರತದ ರೈಲ್ವೆ ಇಲಾಖೆ ಆರ್ಥಿಕವಾಗಿ ಸಬಲವಾಗಬೇಕು, ಹೊಸ ರೈಲುಗಳಿಗಾಗಿ ಅಧಿಕ ಬೇಡಿಕೆಗಳು ಬಂದಿವೆ. ಯೋಜನಾ ಆಯೋಗವು ಬಜೆಟನ್ನು 5.19 ಲಕ್ಷ ಕೋ. ರೂಗೆ ಮಿತಿಗೊಳಿಸಿದೆ ಎಂದು ಅವರು ಹೇಳಿದರು.

ಮುಖ್ಯಾಂಶಗಳು: *2014ರಲ್ಲಿ ವಿಶೇಷ ಸುರಕ್ಷತೆ ಯೋಜನೆಗಳು.
*ರೈಲ್ವೆಯಲ್ಲಿ ಮಹಿಳಾ ಪೊಲೀಸರ ಸಂಖ್ಯೆ ಹೆಚ್ಚಳ
*ಎನ್‌ಸಿಆರ್ ವಲಯದಲ್ಲಿ ಹೆಚ್ಚಿನ ಸೌಲಭ್ಯ
* ಹಣಕ್ಕೆ ತಕ್ಕಂತೆ ಗುಣ ಮಟ್ಟದ ಸೇವೆ
* ಜೈವಿಕ ಶೌಚಾಲಗಳ ಹೆಚ್ಚಳ
* ಬಯೋ ಟಾಯ್ಲೆಟ್‌ಗಳ ನಿರ್ಮಾಣ
* ಅಪಘಾತ ಸಮಯದಲ್ಲಿ ತುರ್ತು ನೆರವಿಗೆ ವಿಶೇಷ ರೈಲು
*ರೈಲಿನಲ್ಲಿ ಉಚಿತ ವೈ -ಪೈ ವ್ಯವಸ್ಥೆ
* ಐಎಸ್‌ಒ ಮಾನ್ಯತೆಯ ವಿಶೇಷ ಅಡುಗೆ ಮನೆ
* ಮೊಬೈಲ್ ಮೂಲಕ ಟಿಕೆಟ್ ಬುಕ್ಕಿಂಗ್ ವ್ಯವಸ್ಥೆ
*ಇಂಟರ್‌ನೆಟ್ ಬುಕ್ಕಿಂಗ್ ಅವಧಿ ವಿಸ್ತರಣೆ
* ಇ- ಟಿಕೆಟ್ ಮೂಲಕ 1 ಲಕ್ಷದ 20 ಸಾವಿರ ಗ್ರಾಹಕರಿಗೆ ಏಕ ಕಾಲದಲ್ಲಿ ಉಪಯೋಗಿಸಲು ಅನುಕೂಲ
* ರೈಲು ನಿಲ್ದಾಣಗಳಲ್ಲಿ ಸೌಲಭ್ಯಗಳ ಉನ್ನತೀಕರಣ
* ರೈಲು ಆಗಮನ ನಿರ್ಗಮನ ಕುರಿತು ಮಾಹಿತಿ
* ಸಿಕಂದರಬಾದ್‌ನಲ್ಲಿ ಹಣಕಾಸು ನಿರ್ವಹಣಾ ಸಂಸ್ಥೆ
*ಚಾಲ್ತಿಯಲ್ಲಿರುವ 370 ಯೋಜನೆಗಳ ಪೂರ್ಣ
* ಮಾಹಿತಿ ಟೋಲ್ ಫ್ರೀ ನಂ ಬದಲಾವಣೆ 1800-111-321
* ಡೀಸೆಲ್ ಹಾಗೂ ಪ್ರಯಾಣ ದರ ಏರಿಕೆ ಅನಿವಾರ್ಯ
*ಅವಿವಾಹಿತ ಯೋಧರ ತಂದೆ-ತಾಯಿಗೆ ಉಚಿತ ಪ್ರಯಾಣ
* ರೈಲು ಸಿಬ್ಬಂದಿಗೆ ಹಲವು ಯೋಜನೆ
* ಪ್ರತೀ ಪ್ರಧಿಕಾರಕ್ಕೆ 1 ಕೋ.ರೂ. ಅನುದಾನ
 * ಹಣಕಾಸು ನಿರ್ವಹಣಾ ಸಂಸ್ಥೆಯಲ್ಲಿ ರೈಲು ಸಿಬ್ಬಂದಿಗೆ ತರಬೇತಿ
* ರೈಲು ಇಲಾಖೆಯ ನಷ್ಟಕ್ಕೆ ಸಂಬಂಧಿಸಿದಂತೆ 750 ಕೋಟಿ ನಷ್ಟವನ್ನು ರೈಲ್ವೆ ಇಲಾಖೆಯೆ ತುಂಬಲಿದೆ.
*67 ಹೊಸ ಎಕ್ಸ್‌ಪ್ರೆಸ್ ರೈಲು
*26 ಹೊಸ ಪ್ಯಾಸೆಂಜರ್ ರೈಲು
* ಶ್ರೀನಿವಾಸ ಪುರ- ಮದನ್ ಪಲ್ಲಿಗೆ ಹೊಸ ಮಾರ್ಗ
*ಚಿಕ್ಕ ಬಳ್ಳಾಪುರ- ಗೌರಿ ಬಿದನೂರಿಗೆ ಹೊಸ ಮಾರ್ಗ
*ಗದಗ್-ವಾಡಿ ಹೊಸ ಮಾರ್ಗ
* ಬಿಜಾಪುರ- ಕಿರಣ್‌ದುಲ್ ಹೊಸಾ ಮಾರ್ಗ
*ಬೆಂಗಳೂರು- ಮಂಗಳೂರು ರೈಲು ವಾರಕ್ಕೊಮ್ಮೆ ಪ್ರಯಾಣ
* ಹುಬ್ಬಳ್ಳಿ- ಮುಂಬೈ ವಾರಕ್ಕೊಮ್ಮೆ ರೈಲು ಸಂಚಾರ
*ತಾಳಗುಪ್ಪ- ಶಿವಮೊಗ್ಗ ಪ್ಯಾಸೆಂಜರ್ ರೈಲು ಪ್ರತಿದಿನ
*ಬೆಂಗಳೂರಿನಲ್ಲಿ ಕೌಶಲ ಅಭಿವೃದ್ಧಿ ಕೇಂದ್ರ
* ತುಮಕೂರು- ಮಳವಳ್ಳಿ -ಮದ್ದೂರು ಹೊಸ ಮಾರ್ಗ
*ಶೆರನೂರು-ಮಂಗಳೂರು ಜೋಡಿ ಮಾರ್ಗ
* ತುಮಕೂರು- ಅರಸೀ ಕೆರೆ ಜೋಡಿ ಮಾರ್ಗ

No comments:

Post a Comment