Wednesday, February 27, 2013

ಸೂರ್ಯಸೆನ್ ಬೆಂಕಿ ಪ್ರಕರಣ: ಸಾವಿನ ಸಂಖ್ಯೆ 18ಕ್ಕೆ ಏರಿಕೆಕೊಲ್ಕತ್ತ: ಸೂರ್ಯಸೆನ್ ಮಾರ್ಕೆಟ್ ಬೆಂಕಿ ಪ್ರಕರಣದಲ್ಲಿ ಬೆಂಕಿ ಅಪಘಾತಕ್ಕೊಳಗಾಗಿ ಸಾವನ್ನಪ್ಪಿದವರ ಸಂಖ್ಯೆ 18ಕ್ಕೇರಿದೆ. ಘಟನೆಯಿಂದಾಗಿ ಲಕ್ಷಾಂತರ ರೂ. ವೌಲ್ಯದ ಸೊತ್ತುಗಳು ಬೆಂಕಿಗಾಹುತಿಯಾಗಿದ್ದು, ನಷ್ಟ ಸಂಭವಿಸಿದೆ. ಕಟ್ಟದೊಳಗೆ ಸಿಲುಕಿದ್ದ 9 ಮಂದಿಯನ್ನು ಈವರೆಗೆ ರಕ್ಷಿಸಲಾಗಿದೆ. ಹಲವರಿಗೆ ಬೆಂಕಿ ಸೋಕಿ ತೀವ್ರ ಗಾಯಗಳಾಗಿದ್ದು, ಕೆಲವರು ಗಂಭೀರ ಗಾಯಗಳೊಂದಿಗೆ ಬದುಕುಳಿದಿದ್ದಾರೆ.
 ಘಟನಾ ಸ್ಥಳದಲ್ಲಿ 25 ಅಗ್ನಿ ಶಾಮಕಗಳು ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದೆ. ಕಾರ್ಯಾಚರಣೆ ಭರದಿಂದ ಸಾಗಿದೆ ಎಂದು ತಿಳಿದು ಬಂದಿದೆ.

No comments:

Post a Comment