Saturday, February 16, 2013

ಮದುವೆಯಾಗುವುದಾಗಿ ನಂಬಿಸಿ 16 ರ ಬಾಲಕಿಗೆ ಲೈಂಗಿಕ ಕಿರುಕುಳ



ಮಂಜೇಶ್ವರ:ಹದಿನಾರು ವರ್ಷದ ಬಾಲಕಿಯನ್ನು ಮದುವೆಯಾಗುವುದಾಗಿ ನಂಬಿಸಿ ವಿವಿಧೆಡೆ ಕೊಂಡೊಯ್ದು ಲೈಂಗಿಕ ಕಿರುಕುಳ ನೀಡಿದ ವ್ಯಕ್ತಿಯ ವಿರುದ್ದ ಮಂಜೇಶ್ವರ ಠಾಣೆಯಲ್ಲಿ ದೂರು ದಾಖಲಾಗಿದೆ.
ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ವ್ಯಕ್ತಿ ಪಚ್ಲಂಪಾರೆ ನಿವಾಸಿ ಅಬ್ದುಲ್ಲಾ ಎಂಬವರ ಪುತ್ರ ಫಾರೂಕ್(೨೫) ಎಂಬವನಾಗಿದ್ದಾನೆ. ಈತ ಉಪ್ಪಳ ಬಟ್ಟೆ ಅಂಗಡಿಯೊಂದರಲ್ಲಿ ಸೇಲ್ಸ್ ಗರ್ಲ್ ಆಗಿ ಕೆಲಸ ನಿರ್ವಹಿಸುತಿದ್ದ ಬಾಲಕಿಯನ್ನು ಮದುವೆಯಾಗುವುದಾಗಿ ಪೊಳ್ಳು ಭರವಸೆ ನೀಡಿ ಹೊಸಂಗಡಿ, ಮಂಗಳೂರು ಸೇರಿದಂತೆ ಹಲವುಕಡೆ ಕೊಂಡೊಯ್ದು ವಸತಿ ಗೃಹಗಳಲ್ಲಿ ಮಜಾ ಉಡಾಯಿಸಿ ಲೈಂಗಿಕ ಕಿರುಕುಳ ನೀಡಿರುವುದಾಗಿ ಬಾಲಕಿ ಆರೋಪಿಸಿದ್ದು್ ಬಳಿಕ ಯುವಕ ಮದುವೆಯಾಗಲು ಹಿಂಜರಿದ ಹಿನ್ನೆಲೆಯಲ್ಲಿ ಬಾಲಕಿ ನೇರ ಮಂಜೇಶ್ವರ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಿಸಿರುತ್ತಾಳೆ.

No comments:

Post a Comment