Wednesday, January 2, 2013

ರಸ್ತೆ ಅಪಘಾತ: ಓರ್ವನ ಸಾವು; ಹಲವರಿಗೆ ಗಾಯ ಜನವರಿ -02-2013

ತರೀಕೆರೆ: ಇಂದು ಬೆಳಗ್ಗಿನ ಜಾವ ಮಾರುತಿ ಓಮ್ನಿ ಕಾರೊಂದು ನಿಂತಿದ್ದ ಲಾರಿಗೆ ಢಿಕ್ಕಿ ಹೊಡೆದ ಪರಿಣಾಮ ಓರ್ವ ಮೃತಪಟ್ಟು 4 ಮಂದಿಗೆ ಗಂಭೀರ ಗಾಯವಾದ ಘಟನೆ ತರೀಕೆರೆಯ ಹೊಸೂರು ಕ್ರಾಸ್ ಬಳಿ ನಡೆದಿದೆ.
  ಮೃತರನ್ನು ಗೋಪಿ(22) ಎಂದು ಗುರುತಿಸಲಾಗಿದೆ. ಮೈಸೂರು ಕಡೆಯಿಂದ ಗೋಪಾಲಬೂಸೇನ ಹಳ್ಳಿ ಕಡೆ ಬರುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ನಿಂತಿದ್ದ ಲಾರಿಗೆ ಢಿಕ್ಕಿ ಹೊಡೆದಿದೆ. ಗಾಯಳುಗಳನ್ನು ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಂಭೀರಗೊಂಡ ಗೋಪಿ ಎಂಬವರು ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗದ ಮಧ್ಯೆ ಮೃತ ಪಟ್ಟಿದ್ದಾರೆ.

No comments:

Post a Comment