Tuesday, January 8, 2013

ಮೂಡುಬಿದಿರೆ: ಶಾಲಾ ಬಸ್ ಪಲ್ಟಿ; ಐವರಿಗೆ ಗಾಯಜನವರಿ -08-2013

ಮೂಡುಬಿದಿರೆ: ಇಲ್ಲಿನ ಮಾರೂರು ಎಂಬಲ್ಲಿ ಶಾಲಾ ಪ್ರವಾಸಿ ಬಸ್ ಮಗುಚಿ ಬಿದ್ದ ಪರಿಣಾಮ ಐದು ಮಂದಿ ವಿದ್ಯಾರ್ಥಿಗಳು ಗಾಯಗೊಂಡ ಘಟನೆ ಇಂದು ಬೆಳಗ್ಗೆ ನಡೆದಿದೆ.
  ಮಂಡ್ಯ ಜಿಲ್ಲೆಯ ಹಳ್ಳಿಯಗೆರೆ ಹಿರಿಯ ಪ್ರಾರ್ಥಮಿಕ ಶಾಲೆಯ ವಿದ್ಯಾರ್ಥಿಗಳನ್ನು ಪ್ರವಾಸಕ್ಕೆಂದು ಕರೆತಂದ ಪ್ರವಾಸಿ ಬಸ್ ಕೂರ್ಗ್‌ಕಿಂಗ್ ಕೆಎ 11, 9428 ನೋಂದಾಣಿಯ ಬಸ್, ಕಟೀಲಿನಿಂದ ಧರ್ಮಸ್ಥಳದ ಕಡೆ ಹೋಗುತ್ತಿದ್ದಾಗ ಮಾರೂರು ಬಳಿಯ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಚರಂಡಿಗೆ ಮಗುಚಿ ಬಿದ್ದಿದೆ. ಇದರಿಂದ ನಾಲ್ಕು ಮಂದಿ ವಿದ್ಯಾರ್ಥಿಗಳು ಸೇರಿ ಐದು ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸಮೀಪದ ಆಳ್ವಾಸ್ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದ್ದು, ಓರ್ವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಕೆರೆದೊಯ್ಯಲಾಗಿದೆ.
 ಘಟನೆ ನಡೆದ ತಕ್ಷಣ ಸ್ಥಳೀಯರು ಮಕ್ಕಳ ರಕ್ಷಣಾ ಕಾರ್ಯ ಮುಂದುವರಿಸಿದ್ದಾರೆ. ಸ್ಥಳಕ್ಕೆ ಮೂಡಬಿದಿರೆ ಠಾಣಾ ಪೊಲೀಸರು ಆಗಮಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ

No comments:

Post a Comment