Monday, January 21, 2013

ಶಾಲಾ ಕಲಿಕೆಗಿಂತ ಮನೆ ಪಾಠದಲ್ಲಿ ಗ್ರಾಮೀಣ ವಿದ್ಯಾರ್ಥಿಗಳು ಮುಂದೆ


 ಜನವರಿ -21-2013

 ಹೊಸದಿಲ್ಲಿ, ಜ.20:ಗ್ರಾಮೀಣ ಶಾಲಾ ವಿದ್ಯಾರ್ಥಿಗಳ ಕಲಿಕೆಯ ಗುಣಮಟ್ಟವನ್ನು ಪರೀಕ್ಷಿಸಲು ನಡೆಸಿದ ಸಮೀಕ್ಷೆಯೊಂದರಲ್ಲಿ ,ಮಕ್ಕಳು ಶಾಲೆಯಲ್ಲಿ ಬೆಳಗ್ಗೆಯಿಂದ ಸಂಜೆವರೆಗೆ ಕಲಿಯುವುದಕ್ಕಿಂತಲೂ ಹೆಚ್ಚಾಗಿ ಇತರ ಮನೆಪಾಠಗಳಲ್ಲಿ ತಮ್ಮ ಜ್ಞಾನವನ್ನು ವೃದ್ಧಿ ಮಾಡಿಕೊಳ್ಳುತ್ತಿದ್ದಾರೆ ಎಂದು ಎ.ಎಸ್.ಇ.ಆರ್. ವರದಿ ತಿಳಿಸಿದೆ.
  
567 ಜಿಲ್ಲೆಗಳ 6 ಲಕ್ಷದಷ್ಟು ಗ್ರಾಮೀಣ ವಿದ್ಯಾರ್ಥಿಗಳನ್ನು ಆರಿಸಿಕೊಂಡು ಮಾಡಿದ ಸಮೀಕ್ಷೆಯಲ್ಲಿ ಇದು ಮನೆಪಾಠಗಳಿಗೆ ಹಾಜರಾಗುವ ವಿದ್ಯಾರ್ಥಿಗಳು ಅಂಕಗಣಿತದ ಸಮಸ್ಯೆಗಳನ್ನು ಬಗೆಹರಿಸುವುದರಲ್ಲಿ ಭಾರೀ ಪಕ್ವತೆಯನ್ನು ಹೊಂದಿದ್ದಾರೆ ಎಂಬ ಅಭಿಪ್ರಾಯಕ್ಕೆ ಬಂದಿದೆ.
ಇತರ ಟ್ಯೂಷನ್ ತರಗತಿಗೆ ಹಾಜರಾಗುವ ವಿದ್ಯಾರ್ಥಿಗಳು ಕೇವಲ ಸರಕಾರಿ ಅಥವಾ ಖಾಸಗಿ ತರಗತಿಯಲ್ಲಿ ಕಲಿಯುವ ವಿದ್ಯಾರ್ಥಿಗಳಿಗಿಂತ ಕಲಿಕೆಯಲ್ಲಿ ಬಹಳ ಮುಂದಿದ್ದಾರೆ ಎಂದು ಅದು ಹೇಳಿದೆ.
ಹಾಗೆಯೇ ಖಾಸಗಿ ತರಗತಿಗೆ ಸೇರ್ಪಡೆಯಾಗುವ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಶೇ.10 ಹೆಚ್ಚಳ ಕಂಡುಬಂದಿದೆ ಎಂದು ವರದಿ ಹೇಳಿದೆ.
2012 ರಲ್ಲಿ 45 ಶೇ.ವಿದ್ಯಾರ್ಥಿಗಳು ಖಾಸಗಿ ಮನೆ ಪಾಠದಿಂದಲೇ ಮುಂದೆ ಬಂದವರಾಗಿದ್ದಾರೆ ಎಂದು ವರದಿ ಸೂಚಿಸುತ್ತದೆ.
ಜಮ್ಮು ಮತ್ತು ಕಾಶ್ಮೆರ,ಪಂಜಾಬ್,ಹರ್ಯಾಣ,ರಾಜಸ್ಥಾನ,ಉತ್ತರ ಪ್ರದೇಶ,ಗೋವಾ ಮತ್ತು ಮೇಘಾಲಯ ರಾಜ್ಯಗಳಲ್ಲಿ ಶೇ. 40ರಷ್ಟು ವಿದ್ಯಾರ್ಥಿಗಳು ಖಾಸಗಿ ಸಂಸ್ಥೆಯಲ್ಲಿ ವಿದ್ಯಾರ್ಜನೆ ಮಾಡುತ್ತಿದ್ದರೆ, ಕೇರಳ ಮತ್ತು ಮಣಿಪುರ ರಾಜ್ಯಗಳಲ್ಲಿ ಅದರ ಪ್ರಮಾಣ ಶೇ.60 ರಷ್ಟಿದೆ ಎಂದು ವರದಿ ಹೇಳಿದೆ.

No comments:

Post a Comment