Wednesday, January 30, 2013

ಬಾಯಾರು ಕೈಕಂಬ ರಸ್ತೆಯಲ್ಲಿ ಬೃಹತ್ ಹೊಂಡಗಳ ಸೃಷ್ಟಿ:ನಾಗರಿಕರಿಂದ ದುರಸ್ತಿಗೆ ಆಗ್ರಹ



ಮಂಜೇಶ್ವರ:ಇಲ್ಲಿಗೆ ಸಮೀಪದ ಬಾಯಾರು-ಕೈಕಂಬ ರಸ್ತೆಯು ತೀರಾ ಶೋಚನೀಯಾವಸ್ಥೆಗೆ ತಲುಪಿದ್ದು  ರಸ್ತೆಯ ಡಾಮರೀಕರಣ ಸಂಪೂರ್ಣ ಮಾಯವಾಗಿ ಜಲ್ಲಿಕಲ್ಲು ಎದ್ದು ರಸ್ತೆಗಳಲ್ಲಿ ಬೃಹತ್ ಹೊಂಡಗಳು ಸೃಷ್ಟಿಯಾಗಿರುವುದಾಗಿ ನಾಗರಿಕರು ಆರೋಪಿಸುತಿದ್ದಾರೆ.
ಕೆಲವು ದಿನಗಳ ಹಿಂದೆ ಇದೇ ರಸ್ತೆಯ ಶಾಂತಿಗುರಿ ಸಮೀಪ ವಾಹನಗಳು ಹೊಂಡಕ್ಕೆ ಬಿದ್ದೇಳುವ ಸಂದರ್ಭ ಬಿಡಿಬಾಗವೊಂದು ಹಾನಿಗೀಡಾಗಿ ಬಸ್ಸು ಚರಂಡಿಗೆ ಬಿದ್ದಿತ್ತು.ಅದೃಷ್ಟವಷಾತ್ ಅಪಾಯಗಳೇನೂ ಸಂಭವಿಸಿಲ್ಲವಾದರೂ ಈ ರಸ್ತೆಗಳಲ್ಲಿ ಓಡಾಡುತ್ತಿರುವ ವಾಹನಗಳ ಬಿಡಿಬಾಗಗಳು ಸಂಪೂರ್ಣವಾಗಿ ಹಾನಿಗೊಳಗಾಉತ್ತಿದೆ ಎಂಬುದು ಇಲ್ಲಿಯ ನಾಗರಿಕರ ಅಭಿಪ್ರಾಯ.
ಈ ರಸ್ತೆಯಾಗಿ ಬಸ್ಸುಗಳು ಕೂಡಾ ಸಂಚಾರಮೊಟಕುಗೊಳಿಸುವ ಸಾಧ್ಯತೆ ಎದ್ದುಕಾಣುತಿದ್ದು ರಸ್ತೆಯ ಅವಸ್ತೆ ಸಂಪೂರ್ಣವಾಗಿಯೂ ಕೊನೆಯ ಹಂತಕ್ಕೆ ತಲುಪಿರುವ ಕಾರಣ ಸಂಭಂಧಪಟ್ಟ ಅಧಿಕಾರಿಗಳು ಹಾಗು ಜನಪ್ರತಿನಿಧಿಗಳು ಕೂಡಲೇ ಎಚ್ಚೆತ್ತು ಪುನರ್ ಡಾಮರೀಕರಣ ಗೊಳಿಸಲು ಆಗ್ರಹಿಸಿದ್ದಾರೆ.ಬಸ್ಸುಗಳು ಹೊಂಡಗಳನ್ನು ತಪ್ಪಿಸಲು ಯತ್ನಿಸುವಾಗ ಚರಂಡಿಗೆ ಬಿದ್ದು ನಾಶ ನಷ್ಟಕ್ಕೆ ಕಾರಣವಾಗುತ್ತಿರುವುದರಿಂದ ಕೂಡಲೇ ರಸ್ತೆಯ ದುರಸ್ಥಿಗೆ ಮುಂದಾಗದಿದ್ದರೆ ಈ ರೂಟಿನಲ್ಲಿರುವ ಬಸ್ಸುಗಳನ್ನು ಮೊಟಕುಗೊಳಿಸಬೇಕಾಗಬುದೆಂಬ ಎಚ್ಚರಿಕೆಯನ್ನು ಬಸ್ಸು ಮಾಲಕರು ಕೂಡಾ ನೀಡಿರುವುದಾಗಿ ತಿಳಿದು ಬಂದಿದೆ.

No comments:

Post a Comment