Tuesday, January 29, 2013

ಕಾಸರಗೋಡು: ನಾಳೆ ಮಾನವ ಹಕ್ಕು ಸಮ್ಮೇಳನ;ಮಅದನಿಗೆ ನ್ಯಾಯ ಒದಗಿಸುವಂತೆ ಆಗ್ರಹ


 - ಜನವರಿ -29-2013

ಕಾಸರಗೋಡು: ಬೆಂಗಳೂರು ಜೈಲಿನಲ್ಲಿ ವಿಚಾರಣಾಧೀನ ಕೈದಿಯಾಗಿರುವ ಪಿಡಿಪಿ ನಾಯಕ ಅಬ್ದುನ್ನಾಸರ್ ಮಅದನಿಗೆ ನ್ಯಾಯ ಒದಗಿಸಬೇಕೆಂದು ಒತ್ತಾಯಿಸಿ ಜ.30ರಂದು ಕಾಸರಗೋಡಿನಲ್ಲಿ ಮಾನವ ಹಕ್ಕು ಸಮ್ಮೇಳನ ಆಯೋಜಿಸಲಾಗಿದೆ. ಸಂಜೆ 3:30ಕ್ಕೆ ಹೊಸ ಬಸ್ ನಿಲ್ದಾಣದ ಪರಿಸರದಲ್ಲಿ ನಡೆಯುವ ಸಮ್ಮೇಳನವನ್ನು ಕೆಪಿಸಿಸಿ ಅಧ್ಯಕ್ಷ ರಮೇಶ್ ಚೆನ್ನಿತ್ತಲ ಉದ್ಘಾಟಿಸುವರು ಎಂದು ಪದಾಧಿಕಾರಿಗಳು ಪ್ರೆಸ್‌ಕ್ಲಬ್‌ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಮಅದನಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ರಚಿಸಲಾಗಿರುವ ಜಸ್ಟೀಸ್ ಫೋರ್ ಮಅದನಿ ಫೋರಂ(ಜೆಎಂಎಫ್) ಕಾಸರಗೋಡು ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ಸಮಿತಿಯ ಅಧ್ಯಕ್ಷ ಅಝೀಝ್ ಕಡಪ್ಪುರ ಅಧ್ಯಕ್ಷತೆ ವಹಿಸಲಿದ್ದು, ಪಾಣಕ್ಕಾಡ್ ಸೈಯದ್ ಬಶೀರಾಲಿ ತಂಙಳ್ ಮುಖ್ಯ ಅತಿಥಿಯಾಗಿರುವರು. ರಾಜ್ಯ ಸರಕಾರದ ಮುಖ್ಯ ಸಚೇತಕ ಪಿ.ಸಿ. ಜಾರ್ಜ್ ಪ್ರಧಾನ ಭಾಷಣ ಮಾಡುವರು.
ಮಾಜಿ ಸಚಿವರಾದ ಎನ್.ಕೆ. ಪ್ರೇಮಚಂದ್ರನ್, ಚೆರ್ಕಳಂ ಅಬ್ದುಲ್ಲಾ, ಶಾಸಕರಾದ ಎನ್.ಎ. ನೆಲ್ಲಿಕುನ್ನು, ಪಿ.ಬಿ. ಅಬ್ದುರ್ರಝಾಕ್, ಕೆ.ಕುಂಞಿರಾಮನ್ (ಉದುಮ), ಕೆ. ಕುಂಞಿರಾಮನ್ (ತೃಕ್ಕರಿಪುರ), ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಕೆ.ಪಿ. ಸತೀಶ್ಚಂದ್ರನ್, ನ್ಯಾಯವಾದಿ ಥೋಮಸ್ ಬಾಬು, ಪಿ.ಗಂಗಾಧರನ್ ನಾಯರ್, ಎನ್.ಅಬಿ ಅಬ್ದುಲ್ ಶೇಖ್,  ಮುಹಮ್ಮದ್ ಕಾರಕುನ್ನ್, ಎ.ಪಿ. ಅಬ್ದುಲ್ ವಾಹಬ್, ಅಬ್ದುಲ್ ಖಾದರ್ ಮದನಿ, ಪೂಂದುರ ಸಿರಾಜ್, ನಾಸರ್ ಫೈಝಿ, ಮಡಿಕೈ ಕಮ್ಮಾರನ್, ಹೇಮಾನಂದ ಶೆಟ್ಟಿ, ಎಚ್. ಶಾಹಿದ್ ಮೌಲವಿ, ಡಿ. ಶ್ಯಾಮ ಪ್ರಸಾದ್, ಸುರೇಂದ್ರ ಕರಿಪ್ಪುಯ, ಎನ್.ಎ. ಝಕೀರ್ ಹುಸೈನ್, ನ್ಯಾಯವಾದಿ ಸಿ.ಕೆ. ಶ್ರೀಧರನ್, ಸಿ.ಎಚ್. ಕುಂಞಿರಾಮ, ಎಂ.ಸಿ. ಖಮರುದ್ದೀನ್, ಕೋರನ್ ಮಾಸ್ಟರ್, ಹರೀಶ್ ಬಿ. ನಂಬ್ಯಾರ್ ಹಾಗೂ ಇತರ ಗಣ್ಯರು ಉಪಸ್ಥಿತರಿರುವರು.
ಪತ್ರಿಕಾಗೋಷ್ಠಿಯಲ್ಲಿ ಅಝೀಝ್ ಕಡಪ್ಪುರ, ಪ್ರಧಾನ ಸಂಚಾಲಕ ಝುಬೈರ್ ಪಡಪ್ಪು, ಅಜಿತ್ ಕುಮಾರ್ ಆಝಾದ್, ಪಿ.ಕೆ. ಅಬ್ದುಲ್ಲಾ, ಟಿ.ಟಿ. ಜೇಕಬ್, ಮುಹಮ್ಮದ್ ಕುಂಞಿ, ಮಾಸ್ಟರ್ ಲತೀಫ್ ಕುಂಬಳೆ ಉಪಸ್ಥಿತರಿದ್ದರು.

No comments:

Post a Comment