Friday, January 25, 2013

ಪಣಂಬೂರು ಬೀಚ್ ಉತ್ಸವಕ್ಕೆ ಚಾಲನೆ


ಪಣಂಬೂರು ಬೀಚ್ ಉತ್ಸವಕ್ಕೆ ಚಾಲನೆ


- ಜನವರಿ -26-2013

ಮಂಗಳೂರು: ಕರಾವಳಿ ಉತ್ಸವದ ಅಂಗವಾಗಿ ಪಣಂಬೂರು ಬೀಚ್‌ನಲ್ಲಿ ನಡೆಯುವ ‘ಉತ್ಸವ’ಕ್ಕೆ ಗಾಳಿಪಟ ಹಾರಿಸುವ ಮೂಲಕ ರಾಜ್ಯ ವಿಧಾನ ಸಭೆಯ ಉಪಸಭಾಪತಿ ಎನ್. ಯೋಗೀಶ್ ಭಟ್ ಶುಕ್ರವಾರ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ಪ್ರವಾಸೋದ್ಯಮಕ್ಕೆ ರಾಜ್ಯ ಸರಕಾರ ವಿಶೇಷ ಆದ್ಯತೆ ನೀಡಿದೆ. ಪಿಲಿಕುಳದಲ್ಲಿ ಸ್ವಾಮಿ ವಿವೇಕಾನಂದ ಪ್ಲಾನಿಟೋರಿಯಂ ಸ್ಥಾಪನೆಗೆ ಶೀಘ್ರದಲ್ಲೇ ಶಂಕುಸ್ಥಾಪನೆ ನೆರವೇರಿಸಲಾಗುವುದು ಮತ್ತು ವಾಟರ್ ಸ್ಪೋರ್ಟ್ಸ್‌ಗೆ ಚಾಲನೆ ನೀಡಲಾಗುವುದು ಎಂದರು.
ಈಗಾಗಲೆ ಸುಲ್ತಾನ್ ಬತ್ತೇರಿ-ತಣ್ಣೀರುಬಾವಿ ನಡುವಿನ ತೂಗುಸೇತುವೆ ಕಾಮಗಾರಿಗೆ ಚಾಲನೆ ನೀಡಲಾಗಿದೆ. ತಣ್ಣೀರುಬಾವಿಯಲ್ಲಿ ಗಾಲ್ಫ್ ಕೋರ್ಟ್ ನಿರ್ಮಿಸಲಾಗು ವುದು ಮತ್ತು ಕರವಾಳಿ ಭಾಗದ ದ್ವೀಪ ಪ್ರದೇಶಗಳನ್ನು ಗುರುತಿಸಿ ವಿಶೇಷ ಆದ್ಯತೆ ಮೂಲಕ ಅಭಿವೃದ್ಧಿಪಡಿ ಸಲಾಗುವುದು. ಅದಕ್ಕಾಗಿ ಸಿಆರ್‌ಝಡ್ ನಿಯಮಗಳನ್ನು ಸಡಿಲಿಸಲು ಚಿಂತನೆ ನಡೆಸಲಾಗಿದೆ ಎಂದು ಭಟ್ ಹೇಳಿದರು.
ಜಿಲ್ಲಾಧಿಕಾರಿ ಎನ್. ಪ್ರಕಾಶ್, ಅಪರ ಜಿಲ್ಲಾಧಿಕಾರಿ ಕೆ. ದಯಾನಂದ, ಉತ್ಸವ ಸಮಿತಿಯ ಅಧ್ಯಕ್ಷ ಹಾಗೂ ಮಂಗಳೂರು ಸಹಾಯಕ ಆಯುಕ್ತ ಡಾ.ವೆಂಕಟೇಶ್ ಎಂ.ವಿ., ಮನಪಾ ಆಯುಕ್ತ ಡಾ.ಹರೀಶ್ ಕುಮಾರ್, ತಹಶೀಲ್ದಾರ್ ರವಿಚಂದ್ರ ನಾಯಕ್, ರಾಜ್ಯ ಮೀನುಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ನಿತಿನ್ ಕುಮಾರ್, ಉಪ ಮೇಯರ್ ಅಮಿತ್ ಕಲಾ, ಕಾರ್ಪೊರೇಟರ್ ಪ್ರೇಮಾ ನಂದ ಶೆಟ್ಟಿ, ಪಣಂಬೂರು ಪ್ರವಾಸೋದ್ಯಮ ಯೋಜ ನೆಯ ಸಿಇಒ ಯತೀಶ್ ಬೈಕಂಪಾಡಿ ಮತ್ತಿತರರಿದ್ದರು.
ಮೊದಲ ದಿನವೇ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿರುವ ಪಣಂಬೂರು ಬೀಚ್‌ನಲ್ಲಿ ಕರಾವಳಿಯ ಹಾಗೂ ಇತರ ಸ್ವಾದಿಷ್ಟವಾದ ಖಾದ್ಯಗಳ ಆಹಾರ ಮಳಿಗೆಗಳೂ ಕಂಡು ಬಂದಿದೆ. ನಾಡದೋಣಿಗಳ ಸ್ಪರ್ಧೆ, ಈಜು ಸ್ಪರ್ಧೆ, ಬೇಬಿ ಬೀಚ್ ಸ್ಪರ್ಧೆ, ಟೀಂ ಮಂಗಳೂರು ತಂಡದಿಂದ ಗಾಳಿಪಟ ಹಾರಾಟ ಪ್ರದರ್ಶನ, ಮರಳಲ್ಲಿ ಆಕೃತಿ ರಚಿಸುವ ಸ್ಪರ್ಧೆ, ಸ್ಕೇಟಿಂಗ್ ಸ್ಪರ್ಧೆ, ಚೆಂಡೆ ವಾದನಗಳ ಪ್ರದರ್ಶನ, ಸಮುದ್ರದಲ್ಲಿ ದೋಣಿ ವಿಹಾರ, ಸಮುದ್ರ ಕ್ರೀಡೆಗಳ ಸಹಿತ ಸಂಗೀತ ಸ್ಪರ್ಧೆ, ಯುಫೋರಿಯಾ ಮತ್ತು ತಂಡದಿಂದ ಸಂಗೀತ ರಸಮಂಜರಿ ಕಾರ್ಯಕ್ರಮ ಉತ್ಸವಕ್ಕೆ ವಿಶೇಷ ಮೆರುಗು ನೀಡಲಿದೆ

No comments:

Post a Comment