Sunday, January 6, 2013

ಆಕೆ ಅತ್ಯಾಚಾರಿಗಳನ್ನು ಸಜೀವವಾಗಿ ದಹಿಸಬೇಕೆಂದಿದ್ದಳು


ಜನವರಿ -06-2013

ಕಳೆದ ಡಿ. 16ರ ಕರಾಳ ರಾತ್ರಿಯಂದು ದಿಲ್ಲಿಯಲ್ಲಿ ನಡೆದ ಪೈಶಾಚಿಕ ಸಾಮೂಹಿಕ ಅತ್ಯಾಚಾರದ ವೇಳೆ 23 ವರ್ಷದ ಸಂತ್ರಸ್ತ ಯುವತಿ ನಿರ್ಭಯಾಳ ಜತೆಗಿದ್ದ ಸ್ನೇಹಿತ ಸಾಫ್ಟ್‌ವೇರ್ ಎಂಜಿನಿಯರ್ ಕೊನೆಗೂ ವೌನ ಮುರಿದು ನಿನ್ನೆ ಸಂಜೆ ಝೀ ಚಾನೆಲ್‌ಗೆ ನೀಡಿರುವ ಸಂದರ್ಶನದಲ್ಲಿ, ಘೋರ ಪ್ರಕರಣಕ್ಕೆ ಸಂಬಂಧಿಸಿದಂತೆ ದೇಶದ ಜನತೆಯಿಂದ ವ್ಯಕ್ತವಾಗಿರುವ ಪ್ರತಿಭಟನೆಯನ್ನು ಸ್ವಾಗತಿಸಿದ್ದಾರೆ.
ಆದರೆ, ನಿರ್ಭಯಾಳ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ಇಬ್ಬರನ್ನೂ ಬಸ್‌ನಿಂದ ಹೊರಗೆಸೆದಾಗ ಸುಮಾರು ಅರ್ಧ ಗಂಟೆ ಇಬ್ಬರೂ ಅಲ್ಲಿಯೇ ಬಿದ್ದಿದ್ದೆವು. ಆಗ ಯಾವುದೇ ಸಾರ್ವಜನಿಕರು ನಮ್ಮ ಸಹಾಯಕ್ಕೆ ಬರಲಿಲ್ಲ ಎಂದಿದ್ದಾರೆ. ಅವರ ಸಂದರ್ಶನ ಆಯ್ದ ಭಾಗ ಇಲ್ಲಿದೆ.
ಮುಂಬೈ, ಜ. 4: ಇಲ್ಲಿನ ಬ್ಯೂಟಿಪಾರ್ಲರೊಂದರ ನೌಕರರು ಮತ್ತು ಗ್ರಾಹಕರ ಮೇಲೆ ದೌರ್ಜನ್ಯ ನಡೆಸಿ ಹದಿನೈದು ದಿನದಲ್ಲಿ ಎರಡು ಬಾರಿ ಹಣ ಅಪಹರಿಸಿದ ಘಟನೆಗೆ ಸಂಬಂಧಿಸಿದಂತೆ ನಾಲ್ವರು ಪೇದೆಗಳನ್ನು ಬಂಧಿಸಲಾಗಿದೆ.
ಬಲವಂತದಿಂದ ಹಣ ಲೂಟಿ ಮಾಡುವುದು ಇಲಾಖೆಗೆ ಅವಮಾನಕರವಾಗಿದ್ದು, ಮುಂದೆ ಇಂತಹ ಘಟನೆಗಳು ಪುನರಾವರ್ತನೆಯಾಗಲು ಅವಕಾಶ ನೀಡುವುದಿಲ್ಲ ಎಂದಿರುವ ನಗರ ಪೊಲೀಸ್ ಆಯುಕ್ತ ಸತ್ಯಪಾಲ್ ಸಿಂಗ್, ಆರೋಪಿ ಪೇದೆಗಳ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಹೇಳಿ ನಾಲ್ವರನ್ನು ಕೂಡಲೇ ಅಮಾನತುಗೊಳಿಸಿದ್ದಾರೆ.
 ನಿನ್ನೆ ಸಂಜೆ ಇಬ್ಬರು ಪೇದೆಗಳು ಪಶ್ಚಿಮ ಮುಲುಂದ್‌ನಲ್ಲಿರವ ರುದ್ರಾಕ್ಷಿ ಸ್ಪಾಗೆ ತೆರಳಿ ದಾಳಿ ನಡೆಸುವ ನೆಪದಲ್ಲಿ ಅಲ್ಲಿದ್ದ ಮಹಿಳಾ ನೌಕಕರು ಮತ್ತು ಗ್ರಾಹಕರ ಮೇಲೆ ದೌರ್ಜನ್ಯ ನಡೆಸಿ ಅಲ್ಲಿದ್ದ 4,000 ರೂ. ದೋಚಿ ಹೊರ ಹೋಗಲು ಯತ್ನಿಸಿದಾಗ ಅಲ್ಲಿನ ಸಿಬ್ಬಂದಿ ಅವರನ್ನು ಹಿಡಿದು ಪೊಲೀಸರಿಗೆ ಕರೆ ಮಾಡಿದರು.

 ನಂತರ ಇಬ್ಬರನ್ನು ಬಂಧಿಸಿದಾಗ ಕಳೆದ ಡಿ. 22 ರಂದು ಇದೇ ಸ್ಪಾ ಮೇಲೆ ದಾಳಿ ನಡೆಸುವ ನೆಪದಲ್ಲಿ ಹೋಗಿ 10,000 ರೂ. ಲೂಟಿ ಮಾಡಿದ್ದು, ಆಗ ಮತ್ತಿಬ್ಬರು ಪೇದೆಗಳು ತಮ್ಮಿಂದಿಗಿದ್ದರು ಎಂದು ಅವರು ತಿಳಿಸಿದರು.
ಈ ಸಂಬಂಧ ಒಟ್ಟು ನಾಲ್ವರು ಪೇದೆಗಳನ್ನು ಬಂಧಿಸಲಾಗಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ

No comments:

Post a Comment