Saturday, January 12, 2013

ಪೊಲೀಸ್ ಕಿರುಕುಳದ ವಿರುದ್ಧ ನಾಳೆ ಎಸ್‌ಡಿಪಿಐ ಪ್ರತಿಭಟನೆ ಜನವರಿ -13-2013

ಮಂಗಳೂರು: ಪೊಲೀಸರಿಂದ ಬಂಧಿತನಾದ ವ್ಯಕ್ತಿಯ ಬಗ್ಗೆ ವಿಚಾರಿಸಲು ಪೊಲೀಸ್ ಠಾಣೆಗೆ ತೆರಳಿದ ಎಸ್‌ಡಿಪಿಐ ಕಾರ್ಯಕರ್ತನನ್ನು ಬಂಧಿಸಿ ವಿಚಾರಣೆಗೊಳಪಡಿಸುವ ಮೂಲಕ ಮಾನಸಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಡಿಪಿಐಯ ಜನವರಿ 14 ರಂದು ಜಿಲ್ಲಾಧಿಕಾರಿ ಕಚೇರಿಯ ಎದುರು ಸೂಕ್ತ ಕ್ರಮ ಕೈಗೊಳ್ಳಲು ಆಗ್ರಹಿಸಿ ಪ್ರತಿಭಟನೆ ಹಮಿಕೊಳ್ಳಲಾಗಿದೆ ಎಂದು ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಅಬ್ದುಲ್ ಜಲೀಲ್ ಕೆ.ಪತ್ರಿಕಾಗೋಷ್ಠಿಯಲ್ಲಿಂದು ತಿಳಿಸಿದರು. ಠಾಣೆಗೆ
ತೆರಳಿ ವಿಚಾರಿಸುವುದು ತಪ್ಪೆ?: ನನ್ನ ವ್ಯಾಪಾರದ ಪಾಲುದಾರನೊಬ್ಬನ ಸಂಬಂಧಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಈ ಬಗ್ಗೆ ನನಗೆ ತಿಳಿಸಿದಾಗ ಠಾಣೆಯಲ್ಲಿ ಈ ಬಗ್ಗೆ ವಿಚಾರಿಸಲು ತೆರಳಿದ ನನ್ನನು ಪೊಲೀಸರು ಬಂಧಿಸಿದ್ದಾರೆ. ನನ್ನ ಮೇಲೆ ಸುಳ್ಳು ಆರೋಪವನ್ನೂ ಹೊರಿಸಿದ್ದಾರೆ. ಬಿಡುಗಡೆ ಮಾಡುತ್ತೇವೆ ಎಂದು ಹೇಳಿ ಜೈಲಿಗಟ್ಟಿದ್ದಾರೆ.
ಇದರಿಂದಾಗಿ ಕಳೆದ ಡಿಸೆಂಬರ್ 10ರಿಂದ ಜನವರಿ 10ರವರೆಗೆ ಜೈಲಿನಲ್ಲಿರಬೇಕಾಯಿತು. ಇದರಿಂದ ನಾನು ಸಾಕಷ್ಟು ಮಾನಸಿಕ ಹಿಂಸೆ ಅನುಭವಿಸಬೇಕಾಯಿತು.ಸಾಮಾಜಿಕ ಕಾರ್ಯಕರ್ತನಾಗಿ ಕಾನೂನು ರೀತಿಯಲ್ಲಿ ವ್ಯವಹಾರ ನಡೆಸುತ್ತಿರುವ ನನ್ನನು ಈ ರೀತಿಯಲ್ಲಿ ಬಂಧಿಸಲು ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣಾಧಿಕಾರಿ ರವೀಶ್ ನಾಯಕ್, ಅವರ ಜೊತೆ ಪೊಲೀಸ್ ಸಿಬ್ಬಂದಿ ಮೆಲ್ವಿನ್ ಪಿಂಟೋ ಹಾಗೂ ಸೀತಾರಾಮ ಕಾರಣರಾಗಿದ್ದಾರೆ.
ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಪೊಲೀಸ್ ವರಿಷ್ಠಾಧಿಕಾರಿಗಳಿಗೆ, ಮಾನವ ಹಕ್ಕು ಆಯೋಗಕ್ಕೆ ದೂರು ನೀಡಲಾಗುವುದು. ಜಿಲ್ಲೆಯ ಪೊಲೀಸರ ಈ ಕೃತ್ಯದ ವಿರುದ್ಧ ನ್ಯಾಯಾಲಯದಲ್ಲಿ ಕಾನೂನು ಹೋರಾಟ ನಡೆಸಲಾಗುವುದು ಎಂದು ಬಂಧನದಿಂದ ಬಿಡುಗಡೆಯಾಗಿ ಹೊರಬಂದ ಅಬೂಬಕರ್ ಕುಳಾಯಿ ಪತ್ರಿಕಾಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಎಸ್‌ಡಿಪಿಐ ಮುಖಂಡರಾದ ಮುಹಮ್ಮದ್ ಶರೀಫ್ ಅರ್ಕುಳ, ಇಸ್ಮಾಯೀಲ್ ಎಂಜಿನಿಯರ್, ಅಬೂಬಕರ್ ಕುಳಾಯಿಯ ಸಹೋದರ ಮುಹಮ್ಮದ್ ಕುಳಾಯಿ ಮೊದಲಾದವರು ಉಪಸ್ಥಿತರಿದ್ದರು.

No comments:

Post a Comment