Monday, January 14, 2013

ನವಜಾತ ಶಿಶುವಿನ ರೋಗವನ್ನು ಪತೆ ಹಚ್ಚಲು ವಿಶೇಷ ಲ್ಯಾಬ್



ಮಂಜೇಶ್ವರ:ನವಜಾತ ಶಿಶುಗಳ ರೋಗಗಳನ್ನು ಹುಟ್ಟಿನಲ್ಲೇ ಗುರುತಿಸಲು ಓಟಿಸಂ ಸೇರಿದಂತೆ ಶಿಶುಗಳ ಧೈಹಿಕ ಹಾಗು ಮಾನಸಿಕ ವಿಕಲ ಚೇತನತೆಗಳನ್ನು ಮೊದಲಿನಿಂದಲೇ ಗುರುತಿಸಿ ಅದಕ್ಕೆ ಸಕಾಲದಲ್ಲಿ ಚಿಕಿತ್ಸೆ ನೀಡಿ ಗುಣಪಡಿಸುವ ವಿಶೇಷ ಯೋಜನೆಯೊಂದಕ್ಕೆ ರಾಜ್ಯ ಆರೋಗ್ಯ ಇಲಾಖೆ ರೂಪು ನೀಡಿದೆ,
ಈ ಯೋಜನೆಯಂತೆ ನವಜಾತ ಶಿಶುಗಳ ರಕ್ತ ಸ್ಯಾಂಪಲ್ ಗಳನ್ನು ಸಂಗ್ರಹಿಸಿ ಲ್ಯಾಬ್ ತಪಾಸನೆಗೊಳಪಡಿಸಿ ಶಿಶುಗಳ ಮಾನಸಿಕ ಹಾಗು ಶಾರೀರಿಕ ಅಂಗ ವೈಕಲ್ಯಗಳನ್ನು ಗುರುತಿಸಿ ಅಂತಹ ಶಿಶುಗಳಿಗೆ ಆರಂಭದಲ್ಲೇ ಚಿಕಿತ್ಸೆ ನೀಡಿ ಅವರನ್ನು ಪೂರ್ಣ ಆರೋಗ್ಯವಂತ ಶಿಶುವನ್ನಾಗಿಸುವುದು ಈ ಯೋಜನೆಯ ಉದ್ದೇಶವಾಗಿದೆ.ಇದರ ಪ್ರಯೋಜನವನ್ನು ಪಡೆಯಲು ಪಬ್ಲಿಕ್ ಹೆಲ್ತ್ ಸೆಂಟರ್ ಗಳಲ್ಲಿ ಹೊಸ ಲ್ಯಾಬ್ ಗಳನ್ನು ಕೂಡಾ ತೆರೆಯಲಾಗುವುದೆಂದು ತಿಳಿದು ಬಂದಿದೆ.
ನವಜಾತ ಶಿಶುಗಳಿಗೆ ಉಂಟಾಗಬಹುದಾದಂತಹ ಮಾರಕ ರೋಗ ಹಾಗು ಮಾನಸಿಕ ಹಾಗು ಶಾರೀರಿಕ ಬೆಳವಣಿಗೆಗೆ ಎದುರಾಗುವ ಸಮಸ್ಯೆಗಳನ್ನು ರಕ್ತ ತಪಾಸನೆ ಮೂಲಕ ಪತ್ತೆ ಹಚ್ಚುವ ಈ ಯೋಜನೆಗೆ ನ್ಯೂಬೋನ್ ಸ್ಕ್ಯಾನಿಂಗ್ ಎಂದು ಹೆಸರಿಡಲಾಗಿದೆ.
ಮಕ್ಕಳು ಹುಟ್ಟುವ ಸಂದರ್ಭದಲ್ಲಿ ಶಿಶುಗಳ ರಕ್ತ ಮೂತ್ರ ಇತ್ಯಾದಿಗಳನ್ನು ಆರಂಭದಲ್ಲೇ ತಪಾಸನೆಗೊಳಪಡಿಸಿ ರೋಗಗಳನ್ನು ಪತ್ತೆ ಹಚ್ಚುವ ಗೋಜಿಗೆ ಹೆತ್ತವರು ಹೋಗದೇ ಇರುವುದು ಶಿಶುಗಳ ಭವಿಷ್ಯದಲ್ಲಿ ಮಾನಸಿಕ ಹಾಗು ಧೈಹಿಕ ಬೆಳವಣಿಗೆ ಮೇಲೆ ಕಠಿಣ ಪರಿಣಾಮ ಬೀರುವುದಾಗಿ ಆರೋಗ್ಯ ಇಲಾಖೆ ಅಭಿಪ್ರಾಯಪಟ್ಟಿದೆ.ಇದರಿಂದಾಗಿ ಇನ್ನು ಮುಂದಕ್ಕೆ ಶಿಶು ಜನಿಸಿದ ಐದು ದಿನಗಳೊಳಗಾಗಿ ಮಗುವಿನ ರಕ್ತದ ಸ್ಯಾಂಪಲ್ ತೆಗೆದು ನ್ಯೂಬೋನ್ ಸ್ಕಾನಿಂಗ್ ಗಾಗಿ ಕಳಿಹಿಸಿ ಕೊಡಲಾಗುವುದು ಪರೀಕ್ಷಾ ಫಲಿತಾಂಶಗಳನ್ನು ಮೂರು ದಿನಗಳೊಳಗಾಗಿ ಸಂಭಂಧಪಟ್ಟ ಆಸ್ಪತ್ರೆಗಳಿಗೆ ಇ-ಮೈಲ್ ಮೂಲಕ ಕಳಿಸಿ ಕೊಡಲಾಗುವುದೆಂದು ಆರೋಗ್ಯ ಇಲಾಖೆ ತಿಳಿಸಿದೆ.ಇದು ಈಗ ಆರಂಭದಲ್ಲಿ ತಿರುವನಂತಪುರ,ಎರ್ನಾಕುಳಂ,ಹಾಗು ಕಲ್ಲಿಕೋಟೆಯಲ್ಲಿ ವಿಶೇಷ ಲ್ಯಾಬ್ ಸ್ಥಾಪಿಸಲಾಗುತ್ತದೆ.ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಯೋಜನೆ ಹಾಗು ರಾಜ್ಯ ಸರಕಾರದ ಆರ್ಥಿಕ ನೆರವಿನಿಂದ ಈ ಲ್ಯಾಬ್ ಸ್ಥಾಪನೆಯಾಗುತಿದ್ದು ಈ ಕೇಂದ್ರಗಳಲ್ಲಿ ಉಚಿತವಾಗಿ ರಕ್ತ ಸ್ಯಾಂಪಲ್ ಗಲ ಪರೀಕ್ಷೆ ನದೆಸಲಾಗುವುದೆಂದು ತಿಳಿದು ಬಂದಿದೆ.

No comments:

Post a Comment