Tuesday, January 22, 2013

ನಾಪತ್ತೆಯಾಗಿದ್ದ ಯುವಕ ಪತ್ತೆ



ಮಂಜೇಶ್ವರ:ಕಳೆದ ಕೆಲವು ದಿನಗಳಿಂದ ನಾಪತ್ತೆಯಾಗಿದ್ದ ಯುವಕ ಪತ್ತೆಯಾಗಿ ಈತನನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ
ಇಲ್ಲಿಗೆ ಸಮೀಪದ ಬೇಕೂರು ನಿವಾಸಿ ಕೆಶವ ಆಚಾರ್ಯರ ಪುತ್ರ ಪ್ರವೀಣ(೨೫)ಎಂಬಾತ ಪತ್ತೆಯಾಗಿದ್ದು ಇವನನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.ಪ್ರವೀಣ ಕಳೆದ ೨೦ ದಿವಸಗಳಿಂದ ನಾಪತ್ತೆಯಾಗಿದ್ದ ದಿಡೀರಣೆ ಮನೆಗೆ ತಲುಪಿದ ಈತನನ್ನು ನಿನ್ನೆ ಮಂಜೇಶ್ವರ ಠಾಣೆಗೆ ಹಾಜರು ಪದಿಸಿದ ನಂತ್ರ ಪೊಲೀಸರು ಕಾಸರಗೋಡು ಪ್ರಥಮ ದರ್ಜೆ ನ್ಯಾಯಾಲಯಕ್ಕೆ ಹಾಜರು ಪಡಿಸಿದರು.ಕೆಲಸದ ನಿಮಿತ್ತ ಮಂಗಳೂರಿಗೆ ತೆರಳಿರುವುದಾಗಿ ಪ್ರವೀಣ ಹೇಳಿಕೆ ನೀಡಿರುತ್ತಾನೆ.ಡಿ.೨೮ ರಂದು ಮನೆಯಿಂದ ಕೆಲಸಕ್ಕೆ ಹೋದ ಪ್ರವೀಣ ನಾಪತ್ತೆಯಾಗಿದ್ದಾನೆಂದು ಈತನ ತಂದೆ ಮಂಜೇಶ್ವರ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದರು.

No comments:

Post a Comment