Thursday, January 10, 2013

ಸೆಮಿನಾರ್ ನಲ್ಲಿ ಪಾಲ್ಗೊಂಡ ಕಾರ್ಮಿಕ ನೇತಾರರ ವಿರುದ್ದ ಪೊಲೀಸ್ ಧಾವೆ ಖಂಡನೀಯ :ಬಿ.ವಿ.ರಾಜನ್


Jan-10-2013
ಮಂಜೇಶ್ವರ:ಹೊಸಂಗಡಿಯಲ್ಲಿ ಇತ್ತೀಚೆಗೆ ಸಿ.ಐ.ಟಿ.ಯು ರಾಜ್ಯ ಸಮ್ಮೇಳನದ ಅಂಗವಾಗಿ ಬಹಿರಂಗ ಸೆಮಿನಾರ್ ನಲ್ಲಿ ಪಾಲ್ಗೊಂಡ ಕಾರ್ಮಿಕ ನೇತಾರರಾದ ಮಾಜಿ ಸಚಿವ  ಎಳಮರಮ್ ಕರೀಂ,ಮಂಜೇಶ್ವರದ ಮಾಜಿ ಶಾಸಕ ಸಿ.ಎಚ್ .ಕುಂಞಂಬು,ಏರಿಯಾ  ಕಾರ್ಯದರ್ಶಿ ಕೆ.ಆರ್.ಜಯಾನಂದ ಮೊದಲಾದವರ ವಿರುದ್ದ ಮಂಜೇಶ್ವರ ಠಾಣಾಧಿಕಾರಿ ಬಿಜುಲಾಲ್  ರವರು ಧಾವೆ  ಹೂಡಿರುವುದನ್ನು ಖಂಡಿಸಿರುವ ಎಲ್.ಡಿ.ಎಫ್ ಮಂಜೇಶ್ವರ ಮಂಡಲ ಕನ್ವೀನರ್ ಬಿ.ವಿ.ರಾಜನ್ ರಾಷ್ಟ್ರೀಯ ಹೆದ್ದಾರಿಯ ಬದಿಯಲ್ಲಿ ಅಂದ್ರೆ ಹೊಸಂಗಡಿ ಜಂಕ್ಷನ್ ನಲ್ಲಿ ಹಲವಾರು ಕಾಲಗಳಿಂದ ಸರ್ವ ಸಾಧಾರಣವಾಗಿ ಎಲ್ಲಾ ರಾಜಕೀಯ ಪಕ್ಷಗಳು ಅದೇ ರೀತಿ ಸಾಮಾಜಿಕ ಧಾರ್ಮಿಕ ಸಂಘಟನೆಗಳು ಸಭೆ ಹಾಗು ಸಮ್ಮೇಳನಗಳನ್ನು ನಡೆಸುತ್ತಾ ಬಂದಿವೆ.ಮಾತ್ರವಲ್ಲದೆ ಕೆಲವು ದಿನಗಳಿಂದ ರಾಷ್ಟ್ರೀಯ ಹೆದ್ದಾರಿಯ ಬದಿಯಲ್ಲಿ ಧಾರ್ಮಿಕ ಉಪನ್ಯಾಸ ನಡೆಯುತಿದ್ದರೂ ಚಕಾರವೆತ್ತದ ಮಂಜೇಶ್ವರ ಪೊಲೀಸರು ಸಾರ್ವಜನಿಕರಿಗೆ ಯಾವುದೇ ಅಡಚನೆಯನ್ನುಂಟುಮಾಡದೆ ನದೆಸಿದ ಕಾರ್ಯಕ್ರಮಕ್ಕೆ ಜನತೆಯಿಂದ ಯಾವುದೇ ಲಿಖಿತ ಆಕ್ಶೇಪ ಇಲ್ಲದಿರುವಾಗ ಇಂತಹ ಧಾವೆ ಹೂಡಿದ್ದು ದುರುದ್ದೇಶಪೂರಿತವಾಗಿದ್ದು ಪೊಲೀಸರು ಕಾರ್ಮಿಕ ನೇತಾರರ ಮೆಲೆ ಮಾತ್ರ ಧಾವೆ ಹೂಡಿರುವುದು ಪೊಲೀಸ್ ನ ವಿಚಿತ್ರ ನೀತಿಯಾಗಿದೆ ಎಂದು  ಆರೋಪಿಸಿರುತ್ತಾರೆ.ಮಂಜೇಶ್ವರ ಠಾಣಾಧಿಕಾರಿಯವರ ಈ ಕ್ರಮದ ವಿರುದ್ದ ಉನ್ನತ ಪೊಲೀಸ್ ಅಧಿಕಾರಿಗಳಿಗೆ ದೂರು ನೀಡಲಾಗುವುದು. ಮಂಜೇಶ್ವರದಲ್ಲಿ ಸರ್ವಸಾಮಾನ್ಯವಾಗಿ ಸಾರ್ವಜನಿಕವಾಗಿ ಯಾವುದಾದರೂ ನೀತಿ ನಿಯಮಗಳನ್ನು ಜ್ಯಾರಿ ಮಾಡುವಾಗ ಸರ್ವ ಸಾಧಾರಣವಾಗಿ ಶಾಂತಿ ಸಭೆ ಕರೆದು ಚರ್ಚಿಸುವುದು ಹಿಂದಿನಿಂದಲೂ ಅನುಸರಿಸಿಕೊಂಡು ಬಂದ ನೀತಿಯಾಗಿದ್ದು ಆದ್ದರಿಂದ ಹೂಡಿದ ಧಾವೆ ಹಿಂದಕ್ಕೆ ಪಡೆದು ಶಾಂತಿ ಸಮಿತಿ ಸಭೆ ಕರೆದು ಪೊಲೀಸ್ ನ ಹೊಸ ನೀತಿಯ ಬಗ್ಗೆ ಸೃಷ್ಟೀಕರಣ ನೀಡಬೇಕೆಂದು ಅವರು ಆಗ್ರಹಿಸಿದ್ದಾರೆ.

No comments:

Post a Comment