Friday, January 4, 2013

ಕಾಸರಗೋಡಿಗೆ ಇಂದು ಕೇಂದ್ರ ಸಚಿವರ ದಂಡು ಜನವರಿ -05-2013

ಕಾಸರಗೋಡು: ಕೇಂದ್ರದ ನಾಲ್ವರು ಸಚಿವರು ಜ.5ರಂದು ಜಿಲ್ಲೆಗೆ ಆಗಮಿಸಲಿದ್ದಾರೆ.
 ಕೇಂದ್ರ ಮಾನವ ಸಂಪನ್ಮೂಲ ಖಾತೆ ಸಚಿವ ಡಾ.ಪಲ್ಲಂ ರಾಜು, ಸಹಾಯಕ ಸಚಿವ ಶಶಿ ತರೂರ್, ಕೇಂದ್ರ ವಿದೇಶಾಂಗ ಖಾತೆ ರಾಜ್ಯ ಸಚಿವ ಇ.ಅಹ್ಮದ್, ಗೃಹ ಖಾತೆ ರಾಜ್ಯ ಸಚಿವ ಮುಲ್ಲಪಳ್ಳಿ ರಾಮಚಂದ್ರನ್ ಕಾಸರಗೋಡು ಜಿಲ್ಲೆಗೆ ಆಗಮಿಸುವರು. ಬೆಳಗ್ಗೆ 10:30ಕ್ಕೆ ಪೆರಿಯಾ ದಲ್ಲಿ ಕೇಂದ್ರೀಯ ವಿಶ್ವವಿದ್ಯಾಲ ಯದ ಕ್ಯಾಂಪಸ್ ಕಟ್ಟಡಕ್ಕೆ ಸಚಿವ ಡಾ.ಪಲ್ಲಂ ರಾಜು ಶಿಲಾನ್ಯಾಸ ನೆರವೇರಿಸುವರು.
ಸಮಾರಂಭದಲ್ಲಿ ಕೇಂದ್ರ ಸಚಿವರಾದ ಶಶಿ ತರೂರ್, ಇ. ಅಹ್ಮ್ಮದ್, ಮುಲ್ಲಪಳ್ಳಿ ರಾಮಚಂದ್ರನ್, ಮುಖ್ಯ ಮಂತ್ರಿ ಉಮ್ಮನ್ ಚಾಂಡಿ, ಶಿಕ್ಷಣ ಸಚಿವ ಅಬ್ದುರ್ರಬ್ ಮತ್ತಿ ತರರು ಉಪಸ್ಥಿತರಿರುವರು. ಸುಮಾರು 361 ಎಕರೆ ಸ್ಥಳದಲ್ಲಿ ವಿಶ್ವವಿದ್ಯಾನಿಲಯ ಕ್ಯಾಂಪಸ್ ಕಟ್ಟಡ ತಲೆ ಎತ್ತಲಿದೆ.
2009ರಲ್ಲಿ ಕೇಂದ್ರ ವಿಶ್ವ ವಿದ್ಯಾನಿಲಯದ ಕ್ಯಾಂಪಸ್ ಕಾಸರಗೋಡಿಗೆ ಮಂಜೂರು ಗೊಂಡಿತ್ತು. ಪ್ರಸ್ತುತ ಈ ಕ್ಯಾಂಪಸ್ ಪಡನ್ನಕಾಡ್ ಮತ್ತು ನಾಯಮ್ಮಾರ್ ಮೂಲೆಯ ಬಾಡಿಗೆ ಕಟ್ಟಡಗಳಲ್ಲಿ ಕಾರ್ಯಾ ಚರಿಸುತ್ತಿದೆ.

No comments:

Post a Comment