Sunday, January 27, 2013

ಗುತ್ತಿಗೆದಾರರ ಕಳಪೆ ರಸ್ತೆ ಕಾಮಗಾರಿ ವಿರುದ್ದ ಸಿಡಿದೆದ್ದ ಮಂಜೇಶ್ವರದ ನಾಗರಿಕರು



ಮಂಜೇಶ್ವರ:ಮಂಜೇಶ್ವರ ತ್ರಿತರ ಪಂಚಾಯತುಗಳಿಂದ ಹಾಗು ಪಿ ಡಬ್ಲ್ಯು.ಡಿ ಗಳಿಂದ ಅನುದಾನಗೊಂಡ ರಸ್ತೆ ಕಾಮಗಾರಿಯಯು ಇದೀಗ ಕೆಲವು ಸ್ಥಳಗಳಲ್ಲಿ ಪೂರ್ಣಗೊಂಡಿದ್ದರು ಕಳಪೆ ಕಾಮಗಾರಿಯನ್ನು ಮಾಡಿ ಗುತ್ತಿಗೆದಾರರು ಕೈತೊಳೆದು ಕೊಂಡಿರುವುದಾಗಿ ಇಲ್ಲಿಯ ನಾಗರಿಕರಿಂದ ಕೇಳಿ ಬಂದಿದೆ.ತ್ರಿತರ ಪಂಚಾಯತುಗಳಿಂದ ಹಾಗು ಪಿ.ಡಬ್ಲ್ಯು.ಡಿ ಯಿಂದ ಅನುದಾನಗೊಂಡ ಮೊತ್ತದ ಕೆಲಸವನ್ನು ಸಂಪೂರ್ಣವಾಗಿ ನಿರ್ವಹಿಸದೆ ಇಂಜಿನಿಯರುಗಳ ಉಪಸ್ಥಿಕೆ ಇಲ್ಲದೆ ನಕಲು ಸಾಮಾಗ್ರಿಗಳನ್ನು ಉಪಯೋಗಿಸಿ  ಗುತ್ತಿಗೆದಾರರು ಜನರನ್ನು ಮೋಸಗೊಳಿಸಿರುವುದಾಗಿ ನಾಗರಿಕರಿಂದ ಕೇಳಿ ಬರುತಿದ್ದು ಇದೀಗ ಮಂಜೇಶ್ವರದ ವಿವಿಧ ಸ್ಥಳಗಳಲ್ಲಿ ಮಾಡಿದ ರಸ್ತೆ ಕಾಮಗಾರಿಯ ಸಂಪೂರ್ಣ ಮಾಹಿತಿಯನ್ನು  ಮಾಹಿತಿ ಹಕ್ಕು ಖಾಯಿದೆ ನಿಯಮ ಪ್ರಕಾರ ಕೇಳಲು ಸಾರ್ವಜನಿಕರು ತಯಾರಾಗಿರುವುದಾಗಿ ತಿಳಿದು ಬಂದಿದೆ.ಈಗಾಗಲೇ  ಪಿ.ಡಬ್ಲ್ಯು.ಡಿ ಯಿಂದ ಅನುದಾನಗೊಂಡ ಒಂದು ಕೋಟಿ ೬೮ ಲಕ್ಷ ವೆಚ್ಚದ ತೂಮಿನಾಡು ಬಾಚಲಿಗೆ ರಸ್ತೆ,ಅದೇ ರೀತಿ ಮಂಜೇಶ್ವರ ಗ್ರಾ.ಪಂ ನ ಫಂಡ್ ನಿಂದ ಅನುದಾನವಾದ ಇರ್ಷಾದ್ ರಸ್ತೆ,ಬಂಡಾರ ಮನೆ ರಸ್ತೆ,ಮಂಜೇಶ್ವರ ಫಸ್ಟ್ ಸಿಗ್ನಲ್ ರಸ್ತೆ,ಮಂಜೇಶ್ವರ ಸೆಕಂಡ್ ಕ್ರಾಸ್ ರಸ್ತೆ, ತೂಮಿನಾಡು ಜಿ.ಎಚ್.ಎಸ್.ರಸ್ತೆ,ಲಕ್ಷಂ ವೀಡು ಕಾಲನಿ ರಸ್ತೆ,ಗುಡ್ಡಕ್ಕೇರಿ ರಸ್ತೆ, ಮುಂತಾದ ಸ್ಥಳಗಳ ಕಳಪೆ ಕಾಮಗಾರಿ ವಿರುದ್ದ ಈಗಾಗಲೇ ಮಂಜೇಶ್ವರ ಗ್ರಾಹಕರ ವೇದಿಕೆಗೆ ದೂರು ನೀಡಲಾಗಿದೆಂದು ಸ್ಥಳೀಯರೊಬ್ಬರು ಪತ್ರಿಕೆಗೆ ಮಾಹಿತಿ ನೀಡಿರುತ್ತಾರೆ.
ಮಂಜೇಶ್ವರದಲ್ಲಿ ಇದುವರೇಗೂ ಪೂರ್ಣಗೊಂಡ ಯಾವುದೇ  ರಸ್ತೆಗಳು  ಮಳೆಗಾಲದಲ್ಲಿ ಅಳಿದು ಹೋಗುತ್ತಿರುವುದಾಗಿ ನಾಗರಿಕರು ದೂರುತಿದ್ದು ಇದಕ್ಕೆ ಗುತ್ತಿಗೆದಾರರ ಕಳಪೆ ಕಾಮಗರಿಯೇ ಕಾರಣವೆಂದು ಕೂಡಾ ಕೇಳಿ ಬಂದಿದೆ.
ತ್ರಿತರ ಪಂಚಾಯತುಗಳಿಂದ ಹಾಗು ಪಿ.ಡಬ್ಲ್ಯು.ಡಿ ಯಿಂದ ಅನುದಾನಗೊಂಡ ಫಂಡ್ ನಿಂದ ಯಾವ ರೀತಿಯ ಕೆಲಸ ನಡೆದಿದೆ ಎಂದು ಮಾಹಿತಿ ಹಕ್ಕು ಖಾಯಿದೆ ಪ್ರಕಾರ ಕೇಳಿದ ಪ್ರಶ್ನೆಗಳಿಗೆ ಉತ್ತರ ಸಿಕ್ಕಿದ ನಂತ್ರ ಅದನ್ನು ಪರಿಶೀಲಿಸಿ ಕುಂದು ಕೊರತೆ ಯ ಶಂಶಯಗಳು ಎದುರಾದಲ್ಲಿ  ಸಾರ್ವಜನಿಕರು ವಿಜಿಲೆನ್ಸ್ ಗೆ ದೂರು ನೀಡಲು ತೀರ್ಮಾನಿಸಿರುವುದಾಗಿ ತಿಳಿದು ಬಂದಿದೆ.

No comments:

Post a Comment