Tuesday, January 8, 2013

ತೂಮಿನಾಡಿನಲ್ಲಿ ಮತ್ತೆ ತಲೆ ಎತ್ತಿದ ಧರೋಡೆಕೋರರು

Jan-08-2013
ಮಂಜೇಶ್ವರ:ಇಲ್ಲಿಗೆ ಸಮೀಪದ ತೂಮಿನಾಡಿನಲ್ಲಿ ಧರೋಡೆಕೋರರು ಮತ್ತೆ ತಲೆ ಎತ್ತಿದ್ದಾರೆ ಕಳೆದ ರಾತ್ರಿ ವಿದ್ಯುತ್ ಪವರ್ ಕಟ್  ನ ಸಮಯದಲ್ಲಿ  ಐಸ್ ಕೇಂಡಿ ಮಾರಾಟ ಮಾಡಿ ಜೀವನ ಸಾಗಿಸುತ್ತಿರುವ ಉತ್ತರಪ್ರದೇಶದ ನಿವಾಸಿ ರಾಮ್ ಉತಾರ್ (35)ಎಂಬ ಐಸ್ ಕೇಂಡಿ ಮಾರುವವನನ್ನು ತೂಮಿನಾಡಿನಲ್ಲಿ ತಡೆಹಿಡಿದ ಧರೋಡೆಕೋರರ ಸಂಘವೊಂದು ಹಲ್ಲೆಗೈದು ಕೈಯಲ್ಲಿದ್ದ ಹಣವನ್ನು ದೋಚಿ ಐಸ್ ಕೇಂಡಿ ಮಾರಲು ಉಪಯೋಗಿಸುತಿದ್ದ ಪೆಟ್ಟಿ ಹಾಗು ಸೈಕಲನ್ನು ನಾಶಗೊಳಿಸಿ ಪರಾರಿಯಾಗಿದ್ದಾರೆ. ಮಾತ್ರವಲ್ಲದೆ ಈ ಬಗ್ಗೆ ದೂರು ಏನಾದರು ನೀಡಿದರೆ ಜೀವಂತ ದಹಿಸುವುದಾಗಿ ಬೆದರಿಕೆ ಕೂಡಾ ನೀಡಿ ಹೋಗಿರುವುದಾಗಿ ದೂರಲಾಗಿದೆ.ಕಂಡರೆ ಪತ್ತೆ  ಹಚ್ಚಬಹುದಾದ 4 ಮಂದಿಯ ವಿರುದ್ದ ದೂರು ನೀಡಲಾಗಿದೆ  .
ವರ್ಷಕ್ಕೆ ಮೊದಲು ಇದೇ ಸ್ಥಳದಲ್ಲಿ ಬಿಹಾರ ನಿವಾಸಿ ಚಪ್ಪಲು ಮಾರುವವನನ್ನು ತಡೆಹಿಡಿದ ಸಂಘವೊಂದು ನಿರ್ಜನ ಪ್ರದೇಷವೊಂದಕ್ಕೆ ಕೊಂಡು ಹೋಗಿ ಅವನಲ್ಲಿದ್ದ ಹಣವನ್ನು ದೋಚಿದಾಗ ಚಪ್ಪಲು ಮಾರುವವನ ಅಟ್ಟಹಾಸದಿಂದ ಧರೋಡೆಕೋರರನ್ನು ಹಿಡಿಯಲು ಸಾಧ್ಯವಾಗಿತ್ತು.ಅಂದಿನ ಪೊಲೀಸ್ ಅಧಿಕಾರಿಯ ಕಾರ್ಯಾಚರಣೆಯಿಂದ ಸ್ವಲ್ಪ ಸಮಯಕ್ಕೆ ಸದ್ದಡಗಿತ್ತು.ಇದೀಗ ಪುನಃ ತೂಮಿನಾಡನ್ನು ಕೇಂದ್ರೀಕರಿಸಿ ಮತ್ತೆ ಧರೋಡೆ ಆರಂಭಗೊಂಡಿದೆ.ಈ ಪ್ರದೇಶವು ಅತ್ಯಧಿಕವಾಗಿ ಮಾದಕ ವಸ್ತುಗಳು ಮಾರಲ್ಪಡುವ ಒಂದು ಪ್ರದೇಶವಾಗಿ ಮಾರ್ಪಾಟಾಗುತ್ತಿದ್ದು .ಮದ್ಯಪಾನ,ಗಾಂಜಾ ಸೇವನೆ,ಸಿರಂಜ್ ನಿಂದ ನಶೆ ಏರಿಸುವುದು ಮೊದಲಾದ ರೀತಿಯ ಚಟಗಳಿಗೆ ಸಣ್ಣ ಪ್ರಾಯದ ಮಕ್ಕಳು ಬಲಿಯಾಗುತ್ತಿರುವುದಾಗಿ ನಾಗರಿಕರಿಂದ ಕೇಳಿ ಬಂದಿದೆ.ಮಾದಕ ದ್ರವ್ಯ ವ್ಯಸನಿಗಳ ಹಾಗು ಧರೋಡೆಕೋರರ ಉಪಟಲದಿಂದ ರಾತ್ರಿ ಹೊತ್ತಿನಲ್ಲಿ  ಈ ಪ್ರದೇಶದಲ್ಲಿ ಒಬ್ಬಂಟಿಯಾಗಿ ಜನ ಸಂಚರಿಸುವುದೇ ಅಸಾಧ್ಯವಾಗಿದೆ.ಈ ಬಗ್ಗೆ ಮಂಜೇಶ್ವರ ಪೊಲೀಸರು ಕೂಡಲೇ ಕಾರ್ಯಾಚರಿಸಿ ಧರೋಡೆಕೋರರನ್ನು ಪತ್ತೆ ಹಚ್ಚಬೇಕಾದ ಕಾಲ ಸನ್ನಿಹಿತವಾಗಿದೆ.ಇಲ್ಲವಾದರೆ ಧರೋಡೆಕೋರರ ಹಾಗು ಮಾದಕ ವ್ಯಸನಿಗಳ ಉಪಟಲಕ್ಕೊಂದು ಕಡಿವಾಣ ಹಾಕದಿದ್ದಲ್ಲಿ ಇವರ ಅಟ್ಟಹಾಸ ಅತಿಯಾಗುವುದರಲ್ಲಿ ಶಂಶಯವಿಲ್ಲ.

No comments:

Post a Comment