Tuesday, January 29, 2013

ಮಂಜೇಶ್ವರ ಗ್ರಾ.ಪಂ ಅಧ್ಯಕ್ಷರ ಆಯ್ಕೆಯಲ್ಲಿ ಮುಸ್ಲಿಮ್ ಲೀಗ್ ಗೆ ಮತನೀಡಿ ವಿವಾದ ಸೃಷ್ಟಿಸಿದ ಬಿಜೆಪಿ ಸದಸ್ಯ ರಾಜಿನಾಮೆಮಂಜೇಶ್ವರ:ಮಂಜೇಶ್ವರ ಗ್ರಾ.ಪಂ.ನ ಅಧ್ಯಕ್ಷರ ಆಯ್ಕೆಯಲ್ಲಿ  ಮುಸ್ಲಿಂ ಲೀಗ್ ಅಭ್ಯರ್ಧಿಗೆ ಮತನೀಡಿ ಗೆಲ್ಲಲು ಅವಕಾಶವನ್ನು ಒದಗಿಸಿ ವಿವಾದವನ್ನು ಸೃಷ್ಟಿಸಿದ ಮಂಜೇಶ್ವರ ಗ್ರಾ.ಪಂ ಬಾವುಟಿ ಮೂಲೆ ಯ 17 ನೇ ವಾರ್ಡ್ ಸದಸ್ಯ ತುಳಸಿದಾಸ್ (24) ಇಂದು ತನ್ನ ರಾಜೀನಾಮೆಯನ್ನು ಮಂಜೇಶ್ವರ ಗ್ರಾ.ಪಂ.ಕಾರ್ಯದರ್ಶಿಯವರಿಗೆ ಸಲ್ಲಿಸಿದರು.
ಇವರು 17 ನೇ ವಾರ್ಡಿನಿಂದ ಬಿಜೆಪಿಯಲ್ಲಿ ಸ್ಪರ್ಧಿಸಿ ತನ್ನ ಪ್ರತಿಸ್ಪರ್ಧಿ ಕಾಂಗ್ರೆಸ್ ನ ಅಭ್ಯರ್ಧಿಯನ್ನು ೫೫ ಮತಗಳಿಂದ ಪರಾಜಯಗೊಳಿಸಿದ್ದರು.ಮಾತ್ರವಲ್ಲದೆ ಪಂಚಾಯತ್ ಅಧ್ಯಕ್ಷರ ಆಯ್ಕೆಯ ಚುಣಾವನೆಯಲ್ಲಿ ಮುಸ್ಲಿಂಲೀಗ್ ನ ಅಭ್ಯರ್ಧಿ ಮುಷರತ್ ಜಹಾನ್ ರವರೀಗೆ ತನ್ನ ಮತನೀಡಿ ಗೆಲ್ಲಲು ಅವಕಾಶ ಮಾಡಿಕೊಟ್ಟದ್ದು ಮಂಜೇಶ್ವರದಲ್ಲಿ ವಿವಾದವನ್ನು ಸೃಷ್ಟಿಸಿತ್ತು.ಮುಸ್ಲಿಂ ಲೀಗ್ ಅಭ್ಯರ್ಧಿಗೆ ಮತ ಚಲಾಯಿಸಿದ ತುಳಸೀದಾಸ್ ನನ್ನು ಸದಸ್ಯತ್ವದಿಂದ ವಜಾ ಗೊಳಿಸಲು ಮಂಜೇಶ್ವರ ಬಿಜೆಪಿ ಪಂಚಾಯತ್ ಕಮಿಟಿ ಚುಣಾವಣಾ ಆಯುಕ್ತರಿಗೆ ದೂರು ನೀಡಿತ್ತು.ಮಾತ್ರವಲ್ಲದೆ ಬಿಜೆಪಿ ಆಕ್ಟಿವ್ ಸದಸ್ಯತ್ವದಿಂದ ವಜಾಗೊಳಿಸಲು ರಾಜ್ಯ ಬಿಜೆಪಿ ಸಮಿತಿ ಆದೇಶಕೂಡಾ ನೀಡಿತ್ತು.
ರೈಲ್ವೇ ಇಲಾಖೆಯಲ್ಲಿ ಸಿಗ್ನಲ್ ನೌಕರನಾಗಿ ಕೆಲಸಕ್ಕೆ ಭರ್ತಿಯಾದ ಕಾರಣ ತಾನು ತನ್ನ ಪಂಚಾಯತ್ ಸದಸ್ಯತ್ವಕ್ಕೆ ರಾಜೀನಾಮೆ ನೀಡಿರುವುದಾಗಿ ತುಳಸೀದಾಸ್ ತಿಳಿಸಿದ್ದಾರೆ.ಮಾತ್ರವಲ್ಲದೆ ಬಿಜೆಪಿ ಪಂಚಾಯತ್ ಕಮಿಟಿಯ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೂ ಹಾಗು ಪರಿಶಿಷ್ಟ ಜಾತಿಯ ಮಂಡಲದ ಸದಸ್ಯತನಕ್ಕೂ ಮುಂದಿನ ದಿನಗಳಲ್ಲಿ ರಾಜಿನಾಮೆ ನೀಡುವುದಾಗಿ ತುಳಸೀದಾಸ್ ತಿಳಿಸಿರುತ್ತಾರೆ.

No comments:

Post a Comment