Friday, January 25, 2013

ಮಂಜೇಶ್ವರದಲ್ಲಿ ಬಾಡಿಗೆ ಮನೆಗಳಲ್ಲಿ ವ್ಯಾಪಕ ವೆಶ್ಯಾವಾಟಿಕೆ



ಮಂಜೇಶ್ವರ;ಮಂಜೇಶ್ವರದ ಕೆಲವೊಂದು ಪ್ರದೇಶಗಳಲ್ಲಿರುವ ಬಾಡಿಗೆ ಮನೆಗಳಲ್ಲಿ ವ್ಯಾಪಕವಾದ ವೇಶ್ಯಾವಾಟಿಕೆ ಧಂಧೆ ನಡೆಯುತ್ತಿರುವುದಾಗಿ ನಾಗರಿಕರಿಂದ ಕೇಳಿ ಬರುತ್ತಿದೆ.ಹೊರ ರಾಜ್ಯಗಳಿಂದ ಅಥವಾ ಹತ್ತಿರದ ಜಿಲ್ಲೆಗಳಿಂದ ಬಂದು ಕೆಲವೊಂದು ಕಾಲನಿಗಳಳಲ್ಲಿ ಕಡಿಮೆ ಬಾಡಿಗೆಯ ಮನೆಯನ್ನು ಕೇಂದ್ರೀಕರಿಸಿ ಇವರು ತನ್ನ ಧಂಧೆಯನ್ನು ನಡೆಸುತ್ತಿರುವುದಾಗಿ ತಿಳಿದು ಬಂದಿದೆ.ಕೆಲವರು ತಮ್ಮ ಮನೆಗಳಲ್ಲಿ ಧಂಧೆಯನ್ನು ನಡೆಸಿದರೆ ಇನ್ನು ಕೆಲವರು ಧಂಧೆಗಾಗಿ ಮಂಗಳೂರು ಹಾಗು ಕಾಸರಗೋಡಿನ ನಗರವನ್ನು ಆಯ್ದು ಕೊಳ್ಳುತ್ತಿದ್ದಾರೆ.
ಗಂಡಸರಿಲ್ಲದ ಈ ಮನೆಗಳಲ್ಲಿ ಹೆಂಗಸರೇ ಜಾಸ್ತಿಯಾಗಿ ಇರುತ್ತಾರೆ.ಮನೆಗೆ ಯಾರಾದರೂ ಬಂದರೆ ಅಣ್ಣ,ಚಿಕ್ಕಪ್ಪ,ಮಾವ ಎಂದೆಲ್ಲಾ ಬಿಂಬಿಸಿ ಬಂದವರಿಂದ ಹಣವನ್ನು ಲೂಟಿ ಮಾಡಿ ಕಳಿಸುತ್ತಾರೆ.ಇದರ ಬಗ್ಗೆ ಊರಿನ ಯಾರಾದರೂ ವಿಚಾರಿಸಿ ತಡೆಯಲು ಹೋದರೆ ಊರಿನವರ ವಿರುದ್ದ ಪೊಲೀಸರಿಗೆ ಕೇಸು ನೀಡಿ ತಮ್ಮ ಚಾಳಿಯನ್ನು ಮುಂದುವರಿಸುತಿದ್ದಾರೆ.ಇದೀಗ ಮಂಜೇಶ್ವರದಲ್ಲಿ ವೇಶ್ಯೆಗಳ ಉಪಟಳದಿಂದ ಮರ್ಯಾದಸ್ಥ ಮಹಿಳೆಯರಿಗೆ ಬೀದಿಯಲ್ಲಿ ನಡೆಯುವುದೇ ಕಷ್ಟವಾಗಿದೆಂಬುದು ಇಲ್ಲಿಯ ನಾಗರಿಕರ ಆರೋಪ.
ಇತರ ರಾಜ್ಯಗಳಿಂದ ದೊಡ್ಡ ದೊಡ್ಡ ಕಾರುಗಳಲ್ಲಿ  ಮದ್ಯವಿಸಿ ಗಾಂಜಾ ಸೇವಿಸಿ  ರಾತ್ರಿ ಹೊತ್ತಿನಲ್ಲಿ ಮಂಜೇಶ್ವರಕ್ಕೆ ತಲುಪುವ ಇವರ ಗಿರಾಕಿಗಳು ನಗರಗಳಲ್ಲೇ ಸಾಮಾನ್ಯ ಜನರಲ್ಲಿ ವೇಶ್ಯೆಗಳು ವಾಸವಾಗಿರುವ ಕಾಲನಿಗಳ ವಿಳಾಸಗಳನ್ನು ಕೇಳುವುದು ಕಂಡು ಬರುತ್ತಿದೆ.ಇವರನ್ನು ಯಾರಾದರೂ ತಡೆ ಹಿಡಿದರೆ ಕೂಡಲೇ ವೇಶ್ಯೆಗಳು ತಡೆದವರ ವಿರುದ್ದ ಕೂಡಾ ಕಿರುಕುಳ ನೀಡುತ್ತಿರುವುದಾಗಿ ಪೊಲೀಸರಿಗೆ  ದೂರು ನೀಡುತಿದ್ದಾರೆಂಬ ಸುದ್ದಿ ಕೂಡಾ ಕೇಳಿ ಬರುತ್ತಿದೆ.ಸಂಭಂಧ ಪಟ್ಟವರು ಇತ್ತ ಕಡೆ ಗಮನಿಸದಿದ್ದಲ್ಲಿ ಮಂಜೇಶ್ವರ ಒಂದು ವೇಶ್ಯಾವಾಟಿಕೆ  ಕೇಂದ್ರವಾಗದಿರಲಾರದು.

No comments:

Post a Comment