Wednesday, January 23, 2013

ಟಿಂಟೆಡ್ ಗ್ಲಾಸ್ ನಿಷೇಧ: ಕ್ರಿಮಿನಲ್‌ಗಳಿಗೆ, ಯೋಗ್ಯರಿಗಲ್ಲ: ಕುಶ್ವಾಹಾ ಜನವರಿ -23-2013

ಗಾಝಿಯಾಬಾದ್: ಇಲ್ಲಿ ನಡೆದ ಸಮಾರಂಭವೊಂದಕ್ಕೆ ಟಿಂಟೆಡ್ ಗ್ಲಾಸ್ ಹೊಂದಿದ ಕಾರಿನಲ್ಲಿ ಆಗಮಿಸಿದ ಉತ್ತರ ಪ್ರದೇಶದ ಸಂಪುಟ ದರ್ಜೆ ಸಚಿವ ರಾಮಾಶ್ರಯ್ ಕುಶ್ವಾಹಾ, ವಾಹನಗಳಲ್ಲಿ ಟಿಂಟೆಡ್ ಗ್ಲಾಸ್ ಬಳಕೆಯನ್ನು ಸುಪ್ರೀಂ ಕೋರ್ಟ್ ನಿಷೇಧಿಸಿರುವುದು ಅಪರಾಧಿಗಳಿಗೆ ಹೊರತು ಯೋಗ್ಯ ವ್ಯಕ್ತಿಗಳಿಗಲ್ಲ ಎಂದು ಹೇಳಿದ್ದಾರೆ.
ವಾಹನಗಳಲ್ಲಿ ಟಿಂಟೆಡ್ ಗ್ಲಾಸ್ ಬಳಕೆ ಮಾಡುವುದುನ್ನು ನಿಷೇಧಿಸಿರುವುದು ಅಪರಾಧಿಗಳಿಗೆ ಮಾತ್ರ. ಆದರೆ ಸಮಾಜಕ್ಕೆ ಯಾವುದೇ ಅಪಾಯವೊಡ್ಡದ ಯೋಗ್ಯ ವ್ಯಕ್ತಿಯೊಬ್ಬ ಅಂತಹ ವಾಹನಗಳನ್ನು ಬಳಕೆ ಮಾಡಬಹುದಾಗಿದೆ ಎಂದರು.
ಅಲ್ಲದೆ ರಾಜಕಾರಣಿಗಳಿಗೆ ಭದ್ರತೆ ಬೇಕಿರುವುದರಿಂದ ಟಿಂಟೆಡ್ ಗ್ಲಾಸ್ ಹೊಂದಿರುವ ವಾಹನ ಅವರಿಗೆ ಹೆಚ್ಚು ಸುರಕ್ಷಿತವಾಗಿರುತ್ತದೆ ಎಂದರು

No comments:

Post a Comment