Wednesday, January 16, 2013

ಭ್ರಷ್ಟಾಚಾರ: ಪಾಕ್ ಪ್ರಧಾನಿ ಪರ್ವೇಝ್ ಬಂಧನಕ್ಕೆ ಸುಪ್ರೀಂ ಕೋರ್ಟ್ ಆದೇಶ


mail-img print-img


ಬುಧವಾರ - ಜನವರಿ -16-2013

ಇಸ್ಲಾಮಾಬಾದ್: ಭ್ರಷ್ಟಾಚಾರದ ಆರೋಪಗಳಿಗೆ ಸಂಬಂಧಿಸಿ ಪಾಕಿಸ್ತಾನದ ಪ್ರಧಾನಿ ರಾಜಾ ಪರ್ವೇಝ್ ಅಶ್ರಫ್ ಹಾಗೂ ಇತರ 15ಮಂದಿಯನ್ನು ಬಂಧಿಸುವಂತೆ ಪಾಕ್ ಸುಪ್ರೀಂಕೋರ್ಟ್ ಮಂಗಳವಾರ ಐತಿಹಾಸಿಕ ತೀರ್ಪು ನೀಡಿದೆ. ಪಾಕ್‌ನ ಸಾರ್ವತ್ರಿಕ ಚುನಾವಣೆಗೆ ಇನ್ನು ಕೆಲವೇ ತಿಂಗಳುಗಳು ಬಾಕಿ ಉಳಿದಿರುವಂತೆಯೇ, ಪರ್ವೇಝ್ ಅಶ್ರಫ್‌ರ ಬಂಧನಕ್ಕೆ ಸುಪ್ರೀಂ ಕೋರ್ಟ್ ನೀಡಿರುವ ಆದೇಶವು ಆ ರಾಷ್ಟ್ರದ ರಾಜಕೀಯದಲ್ಲಿ ಗಂಭೀರ ರಾಜಕೀಯ ಬಿಕ್ಕಟ್ಟಿಗೆ ನಾಂದಿ ಹಾಡಿದೆ. 2010ರಲ್ಲಿ ಅಶ್ರಫ್ ಜಲಸಂಪನ್ಮೂಲ ಹಾಗೂ ವಿದ್ಯುತ್ ಸಚಿವರಾಗಿದ್ದಾಗ, ವಿದ್ಯುತ್ ಉತ್ಪಾದನಾ ಯೋಜನೆಗಳಿಗೆ ಅನುಮೋದನೆ ನೀಡಲು ಭಾರೀ ಮೊತ್ತದ ಲಂಚವನ್ನು ಸ್ವೀಕರಿಸಿದ್ದಾರೆಂಬ ಆರೋಪಗಳ ಬಗ್ಗೆ ಸುಪ್ರೀಂ ಕೋರ್ಟ್ ವಿಚಾರಣೆ ನಡೆಸುತ್ತಿದೆ. ತನ್ನ ಮೇಲಿನ ಭ್ರಷ್ಟಾಚಾರದ ಆರೋಪಗಳನ್ನು ಅಶ್ರಫ್ ಬಲವಾಗಿ ನಿರಾಕರಿಸಿದ್ದಾರೆ. ಆದರೆ ಸುಪ್ರೀಂಕೋರ್ಟ್‌ನ ತೀರ್ಪಿನ ಹೊರತಾಗಿಯೂ ಅಶ್ರಫ್ ಅವರನ್ನು ತಕ್ಷಣವೇ ಪ್ರಧಾನಿ ಹುದ್ದೆಯಿಂದ ಪದಚ್ಯುತಿಗೊಳಿಸುವ ಸಾಧ್ಯತೆ ತೀರಾ ಕಡಿಮೆಯೆಂದು ಪಾಕ್‌ನ ರಾಜಕೀಯ ವಿಶ್ಲೇಷಕರು ಅಭಿಪ್ರಾಯಿಸಿದ್ದಾರೆ.
ಅಶ್ರಫ್ ಬಂಧನಕ್ಕೆ ಸುಪ್ರೀಂ ಕೋರ್ಟ್ ಆದೇಶ ನೀಡಿದ ಬೆನ್ನಲ್ಲೇ, ರಾಜಧಾನಿ ಇಸ್ಲಾಮಾಬಾದ್‌ನಲ್ಲಿ ಜನಪ್ರಿಯ ಧಾರ್ಮಿಕ ವಿಧ್ವಾಂಸ ತಾಹಿರುಲ್ ಖಾದ್ರಿ ನೇತೃತ್ವದಲ್ಲಿ ಸಾವಿರಾರು ಮಂದಿ ರಸ್ತೆಗಿಳಿದು ಪಾಕ್ ಪ್ರಧಾನಿಯ  ರಾಜೀನಾಮೆಗೆ ಆಗ್ರಹಿಸಿದರು. ಈ ವರ್ಷದ ಮೇನಲ್ಲಿ ನಡೆಯಲಿರುವ ಪಾಕ್ ಸಂಸತ್ ಚುನಾವಣೆಯಲ್ಲಿ ಆಡಳಿತಾರೂಢ ಪಾಕಿಸ್ತಾನ ಪೀಪಲ್ಸ್ ಪಾರ್ಟಿಯು ಅಶ್ರಫ್ ನೇತೃತ್ವದಲ್ಲಿ ಚುನಾವಣೆಯನ್ನು ಎದುರಿಸುವ ನಿರೀಕ್ಷೆಯಿತ್ತು.
2008ರಿಂದ ಅಧಿಕಾರದಲ್ಲಿರುವ ಪಿಪಿಪಿ ಸರಕಾರದಲ್ಲಿ ಅಶ್ರಫ್ ಪ್ರಧಾನಿಯಾಗುವ ಮುನ್ನ ಎರಡು ಬಾರಿ ಸಚಿವರಾಗಿದ್ದರು. ಪಾಕ್ ಸುಪ್ರೀಂಕೋರ್ಟ್ ಇಂದು ನೀಡಿದ ಆದೇಶದಲ್ಲಿ ಪ್ರಧಾನಿ ಪರ್ವೇಝ್ ಅಶ್ರಫ್ ಹಾಗೂ ಇತರರನ್ನು ತಕ್ಷಣವೇ ಬಂಧಿಸಿ, ಮುಂದಿನ 24ತಾಸುಗಳೊಳಗೆ ನ್ಯಾಯಾಲಯಕ್ಕೆ ಹಾಜರುಪಡಿಸಬೇಕೆಂದು ತಿಳಿಸಲಾಗಿದೆ.
ಆದರೆ ನ್ಯಾಯಾಲಯಕ್ಕೆ ಅಶ್ರಫ್‌ರ ಹಾಜರಾತಿಯನ್ನು ವಿಳಂಬಗೊಳಿಸಲು ವಿವಿಧ ಮಾರ್ಗೋಪಾಯಗಳನ್ನು ಅವರ ನ್ಯಾಯವಾದಿಗಳು ಹುಡುಕುತ್ತಿದ್ದಾರೆಂದು ರಾಜಕೀಯ ವಿಶ್ಲೇಷಕರು ಹೇಳಿದ್ದಾ

No comments:

Post a Comment