Thursday, January 10, 2013

ಮಡೆಸ್ನಾನ-ಪಂಕ್ತಿಭೇದ: ಎಲ್ಲ ಮಠ, ದೇವಳಗಳೆದುರು ಪ್ರತಿಭಟನೆಗೆ ಸಿಪಿಎಂ ನಿರ್ಧಾರ ಜನವರಿ -10-2013

ಉಡುಪಿ: ವೌಢ್ಯದ ಅನಿಷ್ಟ ಪದ್ಧತಿಯಾದ ಮಡೆಸ್ನಾನ, ಪಂಕ್ತಿಭೇದ ಹಾಗೂ ಜಾತಿ ತಾರತಮ್ಯವನ್ನು ಈಗಲೂ ಆಚರಿಸುತ್ತಿರುವ ರಾಜ್ಯದ ಎಲ್ಲ ಜಿಲ್ಲೆಗಳ ಮಠ-ದೇವಸ್ಥಾನಗಳ ಎದುರು ಪ್ರತಿಭಟನೆ ನಡೆಸಲು ಸಿಪಿಐ(ಎಂ)ನ ಕರ್ನಾಟಕ ರಾಜ್ಯ ಸಮಿತಿ ಇತ್ತೀಚಿನ ತನ್ನ ಸಭೆಯಲ್ಲಿ ನಿರ್ಧರಿಸಿದೆ ಎಂದು ಪಕ್ಷದ ಜಿಲ್ಲಾ ಸಮಿತಿ ಪ್ರಕಟನೆೆಯಲ್ಲಿ ತಿಳಿಸಿದೆ.ಮಡೆಸ್ನಾನ, ಉಡುಪಿ ಮಠ-ದೇವಳಗಳಲ್ಲಿ ಜಾರಿಯಲ್ಲಿರುವ ಪಂಕ್ತಿಭೇದ, ಜಾತಿ ತಾರತಮ್ಯವನ್ನು ನಿಲ್ಲಿಸಲು ಸಿಪಿಎಂ ಡಿ.27ರಂದು ಉಡುಪಿಯಲ್ಲಿ ಬೃಹತ್ ಪ್ರತಿಭಟನೆ ನಡೆಸಿತ್ತು.ಉಡುಪಿಯಲ್ಲಿ ಮಾತ್ರ ಈ ಪ್ರತಿಭಟನೆ ಯಾಕೆ ನಡೆಸಲಾಗುತ್ತಿದೆ ಎಂದು ಪೇಜಾವರ ಶ್ರೀ ಪ್ರಶ್ನೆ ಮಾಡಿದ್ದಾರೆ. ರಾಜ್ಯದ ಪ್ರಗತಿಪರ ಹಾಗೂ ಪ್ರಜಾ ಸತ್ತಾತ್ಮಕ ಸಂಘಟನೆಗಳ ಬೆಂಬಲ ಪಡೆದು ರಾಜ್ಯ ವ್ಯಾಪಿ ಹೋರಾಟ ನಡೆಸಲು ಸಿಪಿಎಂ ತೀರ್ಮಾನಿಸಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಉಡುಪಿಯಲ್ಲಿ ನಡೆದ ಪೋಲಿಸ್ ಲಾಠಿ ಪ್ರಹಾರವನ್ನು ಖಂಡಿಸಿ ಉಡುಪಿ ಜಿಲ್ಲೆಯ ದಲಿತ ಸಂಘಟನೆಗಳ ಒಕ್ಕೂಟ ಜ.7ರಂದು ಪ್ರತಿಭಟನಾ ರ್ಯಾಲಿ ನಡೆಸಿ ಮಡೆಸ್ನಾನ, ಪಂಕ್ತಿಭೇದ, ಜಾತಿ ತಾರತಮ್ಯದ ಅನಿಷ್ಟ ಪದ್ಧತಿಯನ್ನು ನಿಷೇಧಿಸುವಂತೆ ಸರಕಾರವನ್ನು ಒತ್ತಾಯಿಸಿರುವುದನ್ನು ಪಕ್ಷ ಅಭಿನಂದಿಸಿದೆ.
ಪ್ರತಿಭಟನೆ-ಹೋರಾಟಗಳು ದೇವರ ವಿರುದ್ಧವೂ ಅಲ್ಲ, ದೇವಾಲಯಗಳ ವಿರುದ್ಧವೂ ಅಲ್ಲ ಹಾಗೂ ಭಕ್ತರ ವಿರುದ್ಧವೂ ಅಲ್ಲ. ಯಾವುದೇ ಜಾತಿ,ಮತ, ಧರ್ಮ, ಪಂಥದ ವಿರುದ್ಧವೂ ಅಲ್ಲ.  ಈ ಎಲ್ಲ ಅನಿಷ್ಟ ಪದ್ಧತಿಗಳನ್ನು ಸರಕಾರ ನಿಷೇಧಿಸಬೇಕೆಂದು ಸರಕಾರವನ್ನು ಒತ್ತಾಯಿಸಲು ಪ್ರತಿಭಟನೆ ನಡೆಸಲಾಗಿದೆ ಎಂದು ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಕೆ.ಶಂಕರ್ ಸ್ಪಷ್ಟಪಡಿಸಿದ್ದಾ

No comments:

Post a Comment