Friday, January 4, 2013

ಸದ್ಯದಲ್ಲೇ ಡೀಸೆಲ್, ಎಲ್‌ಪಿಜಿ, ಸೀಮೆಎಣ್ಣೆ ಬೆಲೆ ಏರಿಕೆ ಬರೆ



ಜನವರಿ -05-2013

ಹೊಸದಿಲ್ಲಿ: ವಿತ್ತೀಯ ಕೊರತೆಯನ್ನು ಕಡಿತಗೊಳಿಸುವ ನಿಟ್ಟಿನಲ್ಲಿ ವಿಜಯ್ ಕೇಳ್ಕರ್ ಸಮಿತಿಯ ಶಿಫಾರಸಿನಂತೆ, ಕೇಂದ್ರ ಸರಕಾರವು ಸದ್ಯದಲ್ಲೇ ಡೀಸೆಲ್,ಸೀಮೆಎಣ್ಣೆ ಹಾಗೂ ಅಡುಗೆ ಅನಿಲದ ದರಗಳನ್ನು ಏರಿಕೆ ಮಾಡುವ ಸಾಧ್ಯತೆಯಿದೆಯೆಂದು ಅಧಿಕೃತ ಮೂಲಗಳು ತಿಳಿಸಿವೆ.
ದೇಶದ ಆರ್ಥಿಕ ಸುದೃಢತೆಗೆ ಮಾರ್ಗನಕ್ಷೆಯೊಂದನ್ನು ಸಿದ್ಧಪಡಿಸಲು ಕೇಂದ್ರ ಹಣಕಾಸು ಸಚಿವಾಲಯದಿಂದ ನೇಮಕಗೊಂಡ ಕೇಳ್ಕರ್ ಸಮಿತಿಯು ತೈಲ ಬೆಲೆಯಲ್ಲಿ ತಕ್ಷಣವೇ ಏರಿಕೆ ಮಾಡುವಂತೆ ಶಿಫಾರಸು ಮಾಡಿತ್ತು. 2014-15ರ ವಿತ್ತ ವರ್ಷದ ಆರಂಭದೊಳಗೆ ಡೀಸೆಲ್‌ನ ಬೆಲೆಯನ್ನು ಸಂಪೂರ್ಣವಾಗಿ ಅನಿಯಂತ್ರಿತ ಗೊಳಿಸುವಂತೆ ಕೇಳ್ಕರ್ ಸಮಿತಿಯು ಕೇಳಿಕೊಂಡಿತ್ತು.
ಸೀಮೆಎಣ್ಣೆ ಹಾಗೂ ಎಲ್‌ಪಿಜಿ ದರದಲ್ಲೂ ಏರಿಕೆ ಮಾಡುವಂತೆ ಅದು ಕೇಂದ್ರಕ್ಕೆ ಸಲಹೆ ನೀಡಿದೆ.

No comments:

Post a Comment