Monday, January 28, 2013

ಗೋವಾ: ಶಾಲೆಗಳಲ್ಲಿ ಸಿಸಿಟಿವಿ, ಮೊಬೈಲ್ ಜಾಮರ್ ಅಳವಡಿಕೆ


- ಜನವರಿ -28-2013

ಪಣಜಿ: ಇಲ್ಲಿನ ಶಾಲೆಯೊಂದರಲ್ಲಿನ ಶೌಚಾಲಯದಲ್ಲಿ 7 ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣದ ನಂತರ ಮಕ್ಕಳ ಸುರಕ್ಷತೆಯ ಕುರಿತು ಎಚ್ಚೆತ್ತುಕೊಂಡಿರುವ ರಾಜ್ಯದ ಶಾಲೆಗಳು, ಶಾಲಾವರಣದಲ್ಲಿ ತಂತಿ ಬೇಲಿ, ಸಿಸಿಟಿವಿ ಮತ್ತು ವೊಬೈಲ್ ಜಾಮರ್‌ಗಳನ್ನು ಅಳವಡಿಸಲು ಮುಂದಾಗಿವೆ. ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣದ ನಂತರ ಆರೋಪಿ ತಲೆಮರೆಸಿಕೊಂಡಿದ್ದಾನೆ. ಆತನ ಹಿಂದೆ112 ಕ್ಕೂ ಹೆಚ್ಚಿನ ಪೊಲೀಸರ ತಂಡಗಳು ಬಿದ್ದಿದ್ದರೂ ತನಿಖೆಯಲ್ಲಿ ಯಾವುದೇ ಯಶಸ್ಸು ಕಂಡಿಲ್ಲ. ಹೀಗಾಗಿ ಮಕ್ಕಳ ಸುರಕ್ಷತೆಯ ಕುರಿತು ಕಂಗೆಟ್ಟಿರುವ ರಾಜ್ಯದ ಶಿಕ್ಷಣ ಸಚಿವಾಲಯ ಮಕ್ಕಳ ಸುರಕ್ಷತೆಗೆ ಒಂದಷ್ಟು ಹೊಸ ಆವಿಷ್ಕಾರದ ಕ್ರಮಗಳನ್ನು ತೆಗೆದುಕೊಳ್ಳಲು ಮುಂದಾಗಿದೆ.
ಕೇಂದ್ರ ಸರಕಾರದ ಒಡೆತನದ ಎಂಪಿಟಿ ನಡೆಸುತ್ತಿರುವ ದೀಪ್‌ವಿಹಾರ್ ಶಾಲೆಯಲ್ಲಿ ಅತ್ಯಾಚಾರ ಪ್ರಕರಣ ನಡೆದಿದೆ. ಹೀಗಾಗಿ ಈ ಶಾಲೆ ತನ್ನ ಆವರಣದಲ್ಲಿ ಸುರಕ್ಷತೆಯ ಕ್ರಮವಾಗಿ 14 ಸಿಸಿಟಿವಿಯನ್ನು ಅಳವಡಿಸಲು ಮುಂದಾಗಿದೆ. ಘಟನೆಯ ಹಿನ್ನೆಲೆಯಲ್ಲಿ ನಡೆದ ಪಿಟಿಎ ಸಭೆಯಲ್ಲಿ ಸಿಸಿಟಿವಿಗಳನ್ನು ಅಳವಡಿಸಬಹುದಾದ ಸ್ಥಳಗಳನ್ನು ಗುರುತಿಸಲಾಗಿದ್ದು, ಶಾಲೆಯ ಆವರಣದಲ್ಲಿ ಒಟ್ಟು 14 ಸಿಸಿಟಿವಿಗಳನ್ನು ಅಳವಡಿಸಲು ನಿರ್ಧರಿಸಲಾಗಿದೆ ಎಂದು ಶಾಲೆಯ ಆಡಳಿತ ಮಂಡಳಿಯ ವಕ್ತಾರರು ತಿಳಿಸಿದ್ದಾರೆ.
ಈ ಶಾಲೆ ಬಂದರಿಗೆ ಸಮೀಪವಿರುವುದರಿಂದ ಮತ್ತು ಬಂದರು ಟ್ರಸ್ಟ್ ಇದನ್ನು ನಿರ್ವಹಿಸುತ್ತಿರುವುದರಿಂದ ಶಾಲೆಗೆ ಸಿಐಎಸ್‌ಎಫ್ ರಕ್ಷಣೆ ಒದಗಿಸಲಾಗಿದೆ. ಮಕ್ಕಳ ಸುರಕ್ಷತೆಗೆ ಶಾಲಾವರಣದಲ್ಲಿ ವೊಬೈಲ್ ಜಾಮರ್‌ಗಳನ್ನು ಅವಳವಡಿಕೆ ಮಾಡುವಂತೆ ಗೋವಾ ಪೊಲೀಸರು ಶಿಫಾರಸು ಮಾಡಿದ್ದಾರೆ. ಈ ಘಟನೆಯಿಂದ ಎಚ್ಚೆತ್ತಿರುವ ಪೊಂಡಾದಲ್ಲಿರುವ ಮತ್ತೊಂದು ಪ್ರತಿಷ್ಠಿತ ಶಾಲೆ, ಶಾಲಾವರಣದೊಳಗೆ ಅನಗತ್ಯ ವ್ಯಕ್ತಿಗಳು ಪ್ರವೇಸಿಸುವುದನ್ನು ನಿರ್ಬಂಧಿಸಲು ಮುಳ್ಳು ತಂತಿ ಬೇಲಿಯನ್ನು ನಿರ್ಮಿಸಲು ಉದ್ದೇಶಿಸಿದೆ.
ಪ್ರತಿಷ್ಠಿತ ರಾಜಕಾರಣಿಗಳು, ಅಧಿಕಾರಿಗಳು, ಉದ್ಯಮಿಗಳು ಹಾಗೂ ಮೇಲ್ಮಧ್ಯಮ ವರ್ಗದವರ ಮಕ್ಕಳು ವ್ಯಾಸಂಗ ಮಾಡುತ್ತಿರುವ ಮತ್ತೊಂದು ಪ್ರತಿಷ್ಠಿತ ಶಾಲೆ ಕೂಡಾ ಮಕ್ಕಳ ಸುರಕ್ಷತೆಗೆ ಭದ್ರತೆಯನ್ನು ಹೆಚ್ಚಿಸಿಕೊಳ್ಳಲು ಸಿಸಿಟಿವಿಗಳನ್ನು ಅಳವಡಿಸಲು ಮುಂದಾಗಿದ್ದು, ಖಾಸಗಿ ಭದ್ರತಾ ಸಂಸ್ಥೆಯೊಂದಿಗೂ ಹೆಚ್ಚಿನ ಭದ್ರತೆ ಒದಗಿಸಲು ಸಮಾಲೋಚನೆ ನಡೆಸುತ್ತಿದೆ ಎನ್ನಲಾಗಿ

No comments:

Post a Comment