Wednesday, January 2, 2013

ಮದವೇರಿದ ಲಕ್ಷ್ಮೀಶ ಆನೆ ಹಾಗೂ ಆನೆಯನ್ನು ನೋಡಲು ಸೇರಿದ ಕುತೂಹಲಿಗರು.


  ಮದವೇರಿದ ಲಕ್ಷ್ಮೀಶ ಆನೆ ಹಾಗೂ ಆನೆಯನ್ನು ನೋಡಲು ಸೇರಿದ ಕುತೂಹಲಿಗರು. ಜನವರಿ -02-2013

ಪುತ್ತೂರು: ಆತಂಕ ಸೃಷ್ಟಿಸಿದ ಮದಗಜ;ವೀಕ್ಷಣೆಗೆ ಸೇರಿದ ಜನರನ್ನು ಚದುರಿಸಲು ಪೊಲೀಸರಿಂದ ಲಘು ಲಾಠಿ ಪ್ರಹಾರ   
 
ಪುತ್ತೂರು,  ಆನೆಯೊಂದನ್ನು ಲಾರಿಯಲ್ಲಿ ಸಾಗಾಟ ನಡೆಸುತ್ತಿದ್ದ ವೇಳೆ ಮದವೇರಿ ಲಾರಿಯ ಮೇಲೆಯೇ ರಾದ್ಧಾಂತ ನಡೆಸಿ ಜನರಿಗೆ ಆತಂಕ ಮೂಡಿಸಿದ ಹಾಗೂ ಲಾರಿ ಚಾಲಕ ಮತ್ತು ಮಾವುತ ಆನೆಯ ತಿವಿತದಿಂದ ಸ್ವಲ್ಪದರಲ್ಲೇ ಪಾರಾದ ಘಟನೆ ಮಂಗಳವಾರ ಪುತ್ತೂರು ಪೇಟೆಯಲ್ಲಿ ನಡೆದಿದೆ.
ಪುತ್ತೂರು ತಾಲೂಕಿನ ಉಪ್ಪಿನಂಗಡಿಯ ನಿವಾಸಿ ಕರುಣಾಕರ ಸುವರ್ಣ ಎಂಬವರಿಗೆ ಸೇರಿದ ಲಕ್ಷ್ಮೀಶ ಎಂಬ ಹೆಸರಿನ ಆನೆಯನ್ನು ಮಂಗಳವಾರ ಸುಳ್ಯ ಸಮೀ ಪಕ್ಕೆ ಮರದ ದಿಮ್ಮಿಗಳನ್ನು ಸಾಗಿಸಲೆಂದು ಪುತ್ತೂರಿ ನಿಂದ ಲಾರಿಯೊಂದರಲ್ಲಿ ಸಾಗಾಟ ಮಾಡಲಾಗುತ್ತಿತ್ತು.
ಪುತ್ತೂರು ನಗರದ ಬಸ್ಸು ನಿಲ್ದಾಣದಿಂದ ಸ್ವಲ್ಪಮುಂದಕ್ಕೆ ತಲುಪುತ್ತಿದ್ದಂತೆಯೇ ಆನೆ ವಿಚಿತ್ರವಾಗಿ ವರ್ತಿಸಲಾರಂಭಿ ಸಿತ್ತು. ಬಳಿಕ ಆನೆ ಚಾಲಕನ ಕ್ಯಾಬಿನ್‌ನೊಳಗೆ ಸೊಂಡಿಲು ತೂರಿ ಆತನನ್ನು ಎಳೆದು ಹಾಕಲು ಪ್ರಯತ್ನ ನಡೆಸಿತು. ಅಪಾಯದ ಸೂಚನೆಯರಿತ ಲಾರಿ ಚಾಲಕ ಲಾರಿ ಯನ್ನು ಸ್ವಲ್ಪಮುಂದಕ್ಕೆ ಚಲಾಯಿಸಿ ಕೊಂಡು ಹೋಗಿ ಏಳ್ಮುಡಿ ಬಳಿಯ ಮುಖ್ಯ ರಸ್ತೆಯ ಬದಿ ನಿಲ್ಲಿಸುತ್ತಿ ದ್ದಂತೆಯೇ ಆನೆ ಆತನನ್ನು ಹಿಡಿದು ಎಳೆಯಲು ಯತ್ನಿಸಿತು. ಲಾರಿ ಚಾಲಕ ಲಾರಿಯಿಂದ ಜಿಗಿದು ಪರಾರಿ ಯಾದ ಬೆನ್ನಲ್ಲೇ ಆನೆ ಲಾರಿಯಲ್ಲಿದ್ದ ಮಾವುತ ಕೇರಳ ರಾಜ್ಯದ ತ್ರಿಶೂರಿನ ಕಲ್ಪಟ್ಟ ನಿವಾಸಿ ಚಂದ್ರನ್ ಎಂಬವರನ್ನು ಸೊಂಡಿಲಲ್ಲಿ ಹಿಡಿದು ಲಾರಿಯಿಂದ ಹೊರಗೆ ಎಸೆದಿದ್ದು, ಅವರು ರಸ್ತೆ ಬದಿಯ ಮಣ್ಣಿನ ಭಾಗಕ್ಕೆ ಬಿದ್ದ ಪರಿಣಾಮವಾಗಿ ಸಣ್ಣಪುಟ್ಟ ಗಾಯ ಗಳೊಂದಿಗೆ ಅವರು ಅಪಾಯದಿಂದ ಪಾರಾಗಿದ್ದಾರೆ.
ಆನೆ ಸಾಗಾಟದ ಲಾರಿ ಪುತ್ತೂರಿನ ಅರುಣಾ ಚಿತ್ರ ಮಂದಿರದ ಬಳಿಗೆ ಸಮೀಪಿಸುತ್ತಿದ್ದಂತೆಯೇ ರಿಕ್ಷಾವೊಂದು ಅಡ್ಡ ಬಂದ ಹಿನ್ನ್ನೆಲೆಯಲ್ಲಿ ಲಾರಿ ಚಾಲಕ ಬ್ರೇಕ್ ಹಾಕಿದ್ದು, ಆ ವೇಳೆ ಆನೆಯ ತಲೆಗೆ ಲಾರಿಯ ಕ್ಯಾಬಿನ್‌ನ ಹಿಂಭಾಗದ ಬಾಡಿ ತಾಗಿತ್ತು. ಇದರಿಂದಾಗಿ ಗಾಯಗೊಂಡ ಆನೆ ಆಕ್ರೋಶ ಗೊಂಡು ಈ ರೀತಿಯ ರಾದ್ಧಾಂತ ಸೃಷ್ಟಿಸಿದೆ ಎಂದು ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ. ಮದವೇರಿದ ಆನೆ ರಾದ್ಧಾಂತ ಸೃಷ್ಟಿಸಿದ ಮಾಹಿತಿ ಯರಿತು ಪುತ್ತೂರು ನಗರ ಪೊಲೀಸರು, ಪುತ್ತೂರು ಅರಣ್ಯ ಇಲಾಖೆಯ ಅಧಿಕಾರಿಗಳು, ಅಗ್ನಿ ಶಾಮಕ ದಳದವರು ಘಟನಾ ಸ್ಥಳಕ್ಕೆ ಆಗಮಿಸಿ ಅನಾಹುತ ಸಂಭವಿಸದಂತೆ ಎಚ್ಚರಿಕೆ ವಹಿಸಿದರು. ಲಾರಿಯಲ್ಲಿದ್ದ ಆನೆ ಬಿಸಿಲಿನ ತಾಪದ ಹಿನ್ನೆಲೆಯಲ್ಲಿ ಮತ್ತಷ್ಟು ಅನಾಹುತ ನಡೆಸಬಹುದೆಂಬ ಮನ್ನೆಚ್ಚರಿಕೆಯಾಗಿ ಅಗ್ನಿ ಶಾಮಕ ದಳದವರು ಆನೆಯ ಮೇಲೆ ನೀರು ಚಿಮ್ಮಿ ಶಾಂತಗೊಳಿಸುವ ಪ್ರಯತ್ನ ನಡೆಸಿದರು. ಈ ನಡುವೆ ತನ್ನ ಮಾವುತನ ವಿರುದ್ಧ ಆಕ್ರೋಶ ಗೊಂಡಿದ್ದ ಆನೆಯನ್ನು ಶಾಂತಗೊಳಿಸಲು ಅದರ ಹಿಂದಿನ ಮಾವುತನ್ನು ಮಡಿಕೇರಿಯಿಂದ ಕರೆತರ ಲಾಯಿತು. ಸಂಜೆ ವೇಳೆಗೆ ಆಗಮಿಸಿದ ಆತ ಆನೆಯ ಬಳಿಗೆ ತೆರಳಿ ಶಾಂತಗೊಳಿಸಲು ಪ್ರಯತ್ನಿಸು ತ್ತಿದ್ದಂತೆ ಮತ್ತಷ್ಟು ಆಕ್ರೋಶಗೊಂಡ ಆನೆಯು ಆತನನ್ನು ಎತ್ತಿ ಎಸೆಯಲು ಮುಂದಾಯಿತು. ಆನೆಯ ಆಕ್ರೋಶ ಇನ್ನಷ್ಟು ಹೆಚ್ಚಾಗಿ ಲಾರಿಯನ್ನು ಮುರಿದು ಕೆಳಗೆ ಹಾರಲು ಪ್ರಯತ್ನ ನಡೆಸಲಾರಂಭಿಸಿತು.
ಈ ವೇಳೆ ಸೇರಿದ ಜನರು ಇದನ್ನೊಂದು ಉಚಿತ ಮನರಂಜನೆ ಎಂದು ತಿಳಿದು ಬೊಬ್ಬೆ ಶಿಳ್ಳೆ ಹಾಕತೊಡಗಿದರು. ಇದರಿಂದಾಗಿ ಆನೆಯು ಮತ್ತಷ್ಟು ಕೆರಳುವಂತಾಯಿತು. ಆನೆಯನ್ನು ಶಾಂತಗೊಳಿಸಲು ಹಾಗೂ ಪರಿಸ್ಥಿತಿಯನ್ನು ನಿಯಂತ್ರಿ ಸಲು ಪುತ್ತೂರು ಪೊಲೀಸರು, ಅರಣ್ಯ ಇಲಾಖೆಯ ಸಿಬ್ಬಂದಿ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ರಾತ್ರಿಯ ತನಕ ಪ್ರಯತ್ನ ನಡೆಸಿದರು. ಜನರು ಗುಂಪು ಸೇರಿದರಿಂದ ಆನೆಯ ಕೆರಳುವಿಕೆ ಹೆಚ್ಚಾದ ಹಿನ್ನೆಲೆ ಯಲ್ಲಿ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ ಜನರನ್ನು ಚದುರಿಸುವ ಪ್ರಯತ್ನ ನಡೆಸಬೇಕಾಗಿ ಬಂತು. ಆದರೂ ಸಾವಿರಾರು ಜನರು ಸೇರಿದ ಕಾರಣ ಪೊಲೀಸರು 2 ಬಾರಿ ಲಾಠಿ ಬೀಸಿ ಜನರನ್ನು ಚದುರಿ ಸುವ ಪ್ರಯತ್ನ ನಡೆಸಿದರು.
ರಾತ್ರಿಯ ವೇಳೆಯಲ್ಲಿ ಆನೆಗೆ ಅರಿವಳಿಕೆ ಚುಚ್ಚು ಮದ್ದು ನೀಡಿ ಮತ್ತು ಬರಿಸಿದ ಬಳಿಕ ಶಾಂತಗೊಳಿಸಿ ಮರಳಿ ಊರಿಗೆ ಕಳುಹಿಸಲಾಗುವುದು ಎಂದು ಅಧಿಕಾರಿಗಳು ಪತ್ರಿಕೆಗೆ ತಿಳಿಸಿದ್ದಾರೆ

No comments:

Post a Comment