Thursday, January 24, 2013

ರಾಜ್ಯದ ವಿದ್ಯುತ್ ವಿತರಣೆಯಲ್ಲಿ ಪ್ರತಿ ವರ್ಷ ಏರಿಕೆಮಂಜೇಶ್ವರ:ಇನ್ನು ರಾಜ್ಯದ ವಿದ್ಯುತ್ ವಿತರಣೆ ಖಾಸಗೀಕರಣಗೊಳಿಸುವ ಹಿನ್ನಲೆಯಲ್ಲಿ ದರದಲ್ಲಿ ಇನ್ನು ಮುಂದೆ ಪ್ರತಿ ವರ್ಷ ಏರಿಕೆಯಾಗುವ ಸಾಧ್ಯತೆ ಇರುವುದಾಗಿ ರಾಜ್ಯ ಸರಕಾರ ಘೋಶಿಸಿದೆ.
ಕೇಂದ್ರ ಸರಕಾರದ ಆರ್ಥಿಕ ಪುನರುತ್ಥಾನ ಯೋಜನೆಗೆ ಅಂಗೀಕಾರ ನೀಡುವ ಮೂಲಕರಾಜ್ಯ ಸರಕಾರ ಈ ತೀರ್ಮಾನ ಕೈಗೊಂಡಿರುವುದಾಗಿ ತಿಳಿದು ಬಂದಿದೆ.ವಿದ್ಯುತ್ ಇಲಾಖೆಯನ್ನು ಆರ್ಥಿಕ ಬಿಕ್ಕಟ್ಟಿನಿಂದ ಪಾರು ಮಾಡಲು ವಿದ್ಯುತ್ ವಲಯವನ್ನು ಸಂಪುರ್ಣವಾಗಿ ಖಸಗೀಕರಣಗೊಳಿಸಿ ಪ್ರತೀ ವರ್ಷ ವಿದ್ಯುತ್ ದರವನ್ನು ಹೆಚ್ಚಿಸಲು ಕೈಗೊಂಡಿರುವ ಯೋಜಣೆಗೆ ಸರಕಾರದ ಹಸಿರು ನಿಶಾನೆ ದೊರೆತಿದೆ.
ಕೇಂದ್ರ ಸರಕಾರವು ವಿದ್ಯುತ್ ವಿತರಣಾ ರಂಗದಲ್ಲಿ ಖಾಸಗಿ ಪಾಲುದಾರಿಕೆಯ ಅಗತ್ಯವೂ ಇದೆ ಎಂಬ ವಾದವನ್ನು ಮುಂದಿಟ್ಟು ಆರ್ಥಿಕ ನಷ್ಟ ನೀಗಿಸಲು ಪ್ರತೀ ವರ್ಷ ವಿದ್ಯುತ್ ದರದಲ್ಲಿ ಹೆಚ್ಚಳ ತರಬೇಕೆಂಬ ಮೂಲಕ ವಿದ್ಯುನ್ಮಂಡಳಿಯ ಆರ್ಥಿಕ ನಷ್ಟದಿಂದ ಪೂರ್ಣವಾಗಿ ಮುಕ್ತವಾಗಬೇಕೆಂಬುದಾಗಿ ಕೇಂದ್ರ ಸರಕಾರ ತನ್ನ ಯೋಜಣೆಯಲ್ಲಿ ಸ್ಫಷ್ಟ ಪಡಿಸಿದೆ.
ಇದೀಗ ಹಲವು ರಾಜ್ಯಗಳಲ್ಲಿ ವಿದ್ಯುತ್ ವಿತರಣೆಯನ್ನು ಪ್ರತ್ಯೇಕ ಸಂಸ್ಥೆಗೆ ನೀಡಲಾಗಿದ್ದು ಇಂತಹ ಸಂಸ್ಥೆಗಳು ನಷ್ಟದ ಹಾದಿಯತ್ತ ಸಾಗುತ್ತಿರುವ ಕಾರಣ ಅದಕ್ಕೊಂದು ಪರಿಹಾರ ಕಂಡುಕೊಳ್ಳುವ ಹಿನ್ನಲೆಯಲ್ಲಿ ಕೇಂದ್ರ ಸರಕಾರವು ಇತ್ತೀಚೆಗೆ ಹೊಸತಾದ ಆರ್ಥಿಕ ಪುನರುತ್ಥಾನಕ್ಕೆ ರೂಪು ನೀಡಿತ್ತು.ಇದರಂತೆ ವಿದ್ಯುತ್ ಸಂಸ್ಥೆಗಳಿಗೆ ಉಂಟಾಗಬಹುದಾದ ನಷ್ಟದಲ್ಲಿ ಶೇಕಡಾ ೧೦ ರಷ್ಟನ್ನು ರಾಜ್ಯ ಸರಕಾರಗಳು ವಹಿಸಬೇಕು ಅದಕ್ಕೆ ಸಮಾನವಾದ ಮುಚ್ಚಳಿಕೆಗಳನ್ನು ಬ್ಯಾಂಕ್ ಗಲು ನೀಡಬೇಕು.ಇದರಲ್ಲಿ ರಾಜ್ಯ ಸರಕಾರಗಳು ವಹಿಸಬೇಕಾಗಿ ಬರುವ ಆರ್ಥಿಕ ಹೊರೆಯ ನಾಲ್ಕರಲ್ಲಿ ಒಂದು ಪಾಲನ್ನು ಕೇಂದ್ರ ಸರಕಾರ ನೀಡಲಿದೆ.ವಿದ್ಯುತ್ ವಿತರಣಾ ವಲಯದ ನಷ್ಟವನ್ನು ನೀಗಿಸಲು ಘೋಷಿಸಲಾಗಿರುವ ಸಬ್ಸಿಡಿ ಲಭಿಸಬೇಕಾದಲ್ಲಿ ತನ್ನ ಅರ್ಥಿಕ ಪುನರುತ್ಥಾನ ಯೋಜನೆಗೆಗಳನ್ನು ರಾಜ್ಯ ಸರಕಾರ ಕಡ್ಡಾಯವಾಗಿ ಅಂಗೀಕರಿಸಬೇಕೆಂಬ ನಿಬಂಧನೆಯನ್ನು ಕೇಂದ್ರ ಸರಕಾರ ಹೇರಿದೆ.

No comments:

Post a Comment