Friday, January 25, 2013

ಏರ್ ಇಂಡಿಯಾ ವಿಶ್ವದ ಮೂರನೇ ಕನಿಷ್ಠ ಸುರಕ್ಷತೆಯ ವಿಮಾನ



 ಜನವರಿ -26-2013

ವಾಷಿಂಗ್ಟನ್: ವಿಶ್ವದ 60 ಸುರಕ್ಷಿತ ವಿಮಾನ ಸಂಸ್ಥೆಗಳ ಪಟ್ಟಿಯಲ್ಲಿ ಭಾರತದ ಏರ್ ಇಂಡಿಯಾ ವಿಮಾನ ಸಂಸ್ಥೆ 58ನೆ ಸ್ಥಾನದಲ್ಲಿದೆ. ಆ ಮೂಲಕ ಚೀನಾ ಏರ್‌ಲೈನ್ಸ್ ಮತ್ತು ಟಿಎಎಂ ಏರ್‌ಲೈನ್ಸ್‌ನ ನಂತರ ಕನಿಷ್ಠ ಸುರಕ್ಷತೆಯಲ್ಲಿ ಮೂರನೆ ಸ್ಥಾನ ಪಡೆದುಕೊಂಡಿದೆ.
ಹ್ಯಾಂಬರ್ಗ್ ಮೂಲದ ಜೆಟ್ ಏರ್‌ಲೈನರ್ ಅಂಕಿ ಅಂಶ ವೌಲ್ಯಮಾಪನ ಕೇಂದ್ರ ನಡೆಸಿದ ಸಮೀಕ್ಷೆಯ ಪ್ರಕಾರ ಫಿನ್‌ಏರ್ ಪ್ರಪಂಚದ ಅತ್ಯಂತ ಸುರಕ್ಷಿತ ವಿಮಾನ ಸಂಸ್ಥೆಯಾಗಿದೆ.
ಆನಂತರದ ಸ್ಥಾನಗಳಲ್ಲಿ ಏರ್ ನ್ಯೂಝಿಲ್ಯಾಂಡ್, ಕ್ಯಾಥೆ ಪೆಸಿಫಿಕ್ ಮತ್ತು ಎಮಿರೇಟ್ಸ್ ವಿಮಾನ ಸಂಸ್ಥೆಗಳು ಇವೆ.
ಅಗ್ರ 9 ಸ್ಥಾನದಲ್ಲಿರುವ ವಿಮಾನ ಸಂಸ್ಥೆಗಳು ಕಳೆದ 30 ವರ್ಷದಲ್ಲಿ ಯಾವುದೇ ವಿಮಾನವನ್ನು ನಷ್ಟ ಹೊಂದಿಲ್ಲ ಅಥವಾ ದುರಂತಗಳನ್ನು ಎದುರಿಸಿಲ್ಲ ಎಂದು ಸಮೀಕ್ಷೆ ಹೇಳಿದೆ.
ಕಳೆದ 30 ವರ್ಷಗಳಲ್ಲಿ ನಡೆದ ದುರಂತ ಮತ್ತು ವಾರ್ಷಿಕ ದುರಂತದ ಆಧಾರದ ಮೇಲೆ ಕೇಂದ್ರವು ವಾರ್ಷಿಕ ಸ್ಥಾನವನ್ನು ಲೆಕ್ಕ ಹಾಕುತ್ತದೆ.
ವಾಣಿಜ್ಯ ಉದ್ದೇಶದ ಪ್ರಯಾಣಿಕ ವಿಮಾನಗಳಲ್ಲಿ ಕಳೆದ ವರ್ಷ ಒಟ್ಟು 496 ದುರಂತಗಳು ಸಂಭವಿಸಿದೆ. ನೈಜೀರಿಯಾದಲ್ಲಿ ನಡೆದ ವಿಮಾನ ದುರಂತದಲ್ಲಿ 169 ಪ್ರಯಾಣಿಕರು ಮತ್ತು ಪಾಕಿಸ್ತಾನದಲ್ಲಿ ನಡೆದ ಭೋಜ ವಿಮಾನ ದುರಂತದಲ್ಲಿ 127 ಪ್ರಯಾಣಿಕರು ಮೃತಪಟ್ಟಿದ್ದು, ಪ್ರಮುಖ ವಿಮಾನ ದುರಂತಗಳಲ್ಲೊಂದಾಗಿದೆ ಎಂದು ಹೇಳಿದೆ.

No comments:

Post a Comment