Monday, January 21, 2013

ಕುಂಜತ್ತೂರಿನಲ್ಲೊಂದು ಅನಧಿಕೃತ ರಿಕ್ಷಾ ಪಾರ್ಕಿಂಗ್




ಮಂಜೇಶ್ವರ:ಇಲ್ಲಿಗೆ ಸಮೀಪದ ಜನನಿಬಿಡ ಪ್ರದೇಶವಾದ ಕುಂಜತ್ತೂರಿನ ರಾಷ್ಟ್ರೀಯ ಹೆದ್ದಾರಿಗೆ ತಾಗಿಕೊಂಡಿರುವ .ಕವಲು ದಾರಿಯಲ್ಲಿ ಅನಧಿಕೃತವಾಗಿ ತಲೆ ಎತ್ತಿರುವ ರಿಕ್ಷಾ ನಿಲುಗಡೆಯಿಂದ ಇತರ ವಾಹನಗಳಿಗೆ ಹಾಗು ಜನ ಸಂಚಾರಕ್ಕೆ ತೊಂದರೆಯಾಗುತಿದ್ದು ಬಗ್ಗೆ ಇಲ್ಲಿಯ ನಾಗರಿಕರು ವ್ಯಾಪಕವಾದ ಆಅಕ್ರೋಶವನ್ನು ವ್ಯಕ್ತಪಡಿಸುತಿದ್ದಾರೆ.
ಇಲ್ಲಿ ಸುಮಾರು ೧೫-೨೦ ರಿಕ್ಷಾಗಳು ನಿಲುಗಡೆಯಾಗುತಿದ್ದು ಇವರ ಬಗ್ಗೆ ಯಾರು ಇಲ್ಲಿ ಚಕಾರವೆತ್ತುವಂತಿಲ್ಲ ಇಲ್ಲಿ ರಿಕ್ಷಾ ಚಾಲಕರದ್ದೇ ಕಾರುಬಾರು ಅಧಿಕೃತವಾದ ರಿಕ್ಷಾ ಪಾರ್ಕ್ ಕುಂಜತ್ತೂರು ಬಸ್ಸು ನಿಲ್ದಾನದ ಎದುರು ಬಾಗದಲ್ಲಿ ಇದ್ದರೂ ಇಲ್ಲಿ ಕೆಲವೊಂದು ರಿಕ್ಷಾ ಚಾಲಕರು ತಮ್ಮ ರಿಕ್ಷಾ ವನ್ನು ಅಡ್ಡಾದಿಡ್ಡಿಯಾಗಿ ನಿಲ್ಲಿಸಿ ಜನ ಸಂಚಾರಕ್ಕೆ ಹಾಗು ಇತರ ವಾಹನಗಳ ಸಂಚಾರಕ್ಕೆ ತಡೆ ಉಂಟುಮಾಡುತ್ತಿರುವುದಾಗಿ ನಾಗರಿಕರಿಂದ ಕೇಳಿ ಬರುತ್ತಿದೆ.ಕಾನೂನು ಪಾಲಕರು ರಿಕ್ಷಾ ಚಾಲಕರ ಅನಧಿಕೃತ ಪಾರ್ಕಿಂಗ್ ಬಗ್ಗೆ ಕೂಡಲೇ ಕ್ರಮ ಜರಗಿಸಿಲು ಇಲ್ಲಿಯ ನಾಗರಿಕರು ಒಕ್ಕೊರಳಿನಿಂದ ಆಗ್ರಹಿಸಿದ್ದಾರೆ

No comments:

Post a Comment