Sunday, January 6, 2013

ಕಾಸರಗೋಡಿಗೆ ವೈದ್ಯಕೀಯ ಕಾಲೇಜು ಮಂಜೂರು: ಸಚಿವ ಡಾ.ಪಲ್ಲಂ ರಾಜು


ಕಾಸರಗೋಡಿಗೆ ವೈದ್ಯಕೀಯ ಕಾಲೇಜು ಮಂಜೂರು: ಸಚಿವ ಡಾ.ಪಲ್ಲಂ ರಾಜು
mail-img print-img

 ಜನವರಿ -06-2013

ಪೆರಿಯಾದಲ್ಲಿ ಕೇಂದ್ರ ವಿವಿ ಕಟ್ಟಡ ಸಮುಚ್ಚಯಕ್ಕೆ ಶಿಲಾನ್ಯಾಸ
ಕಾಸರಗೋಡು: ಕಾಸರಗೋಡಿ ನಲ್ಲಿ ಕೇಂದ್ರ ವಿಶ್ವವಿದ್ಯಾನಿಲಯದ ಅಧೀನತೆಯಲ್ಲಿ ವೈದ್ಯಕೀಯ ಕಾಲೇಜು ಮಂಜೂರುಗೊಳಿಸಲಾಗುವುದು ಎಂದು ಕೇಂದ್ರ ಮಾನವ ಸಂಸನ್ಮೂಲ ಖಾತೆ ಸಚಿವ ಡಾ.ಎಂ.ಪಲ್ಲಂರಾಜು ಹೇಳಿದ್ದಾರೆ.
ಅವರು ಶನಿವಾರ ಪೆರಿಯಾದಲ್ಲಿ ಕೇಂದ್ರ ವಿಶ್ವವಿದ್ಯಾನಿಲಯದ ಕಟ್ಟಡ ಸಮುಚ್ಚಯಕ್ಕೆ ಶಿಲಾನ್ಯಾಸ ನೆರವೇರಿಸಿ ಮಾತನಾಡುತ್ತಿದ್ದರು.
ಕಾಸರಗೋಡಿನಲ್ಲಿ ವೈದ್ಯಕೀಯ ಕಾಲೇಜು ಅಗತ್ಯವಾಗಿದೆ. ಈ ಕುರಿತು ಶುಕ್ರವಾರ ಮಂಗಳೂರಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಅಲ್ಲಿನ ಪ್ರಮುಖ ವೈದ್ಯರು ಗಮನಕ್ಕೆ ತಂದಿದ್ದರು. ಅಪಘಾತ ಹಾಗೂ ಇನ್ನಿತರ ಘಟನೆಗಳಲ್ಲಿ ಸಿಲುಕುವವರಿಗೆ ತುರ್ತು ಚಿಕಿತ್ಸೆ ಲಭಿಸಬೇಕಿದೆ. ಸದ್ಯ ಇಂತಹ ಸನ್ನಿವೇಶಗಳಲ್ಲಿ ಕಣ್ಣೂರು, ಕಾಸರಗೋಡು ಜಿಲ್ಲೆಯವರು ಮಂಗಳೂರನ್ನೇ ಅವಲಂಬಿಸುವಂತಾಗಿದೆ. ಈ ಕಾರಣಕ್ಕಾಗಿ ಕಾಸರಗೋಡಿನಲ್ಲಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಒತ್ತು ನೀಡಲಾಗುವುದು ಎಂದು ಸಚಿವ ಡಾ.ಪಲ್ಲಂರಾಜು ತಿಳಿಸಿದರು.
12ನೆ ಪಂಚವಾರ್ಷಿಕ ಯೋಜನೆ ಯಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುವುದು. ಶಿಕ್ಷಣದ ಗುಣ ಮಟ್ಟವನ್ನು ಹೆಚ್ಚಿಸಲು ಕ್ರಮ ಕೈಗೊಳ್ಳ ಲಾಗುವುದು. ಜೊತೆಗೆ ಉದ್ಯೋಗಾ ವಕಾಶವನ್ನು ಗಳಿಸಲು ಪೂರಕವಾಗು ವಂತಹ ಪಠ್ಯ ಯೋಜನೆಯನ್ನು ತಯಾರಿಸಲಾಗುವುದು ಎಂದು ಸಚಿವರು ಇದೇ ಸಂದರ್ಭ ನುಡಿದರು.
ಮುಖ್ಯಮಂತ್ರಿ ಉಮ್ಮನ್ ಚಾಂಡಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಖಾತೆ ರಾಜ್ಯ ಸಚಿವ ಶಶಿ ತರೂರ್, ವಿದೇಶಾಂಗ ಖಾತೆ ರಾಜ್ಯ ಸಚಿವ ಇ.ಅಹ್ಮ್ಮದ್, ಸಂಸದ ಪಿ.ಕರುಣಾಕರನ್, ಕೇಂದ್ರ ವಿಶ್ವವಿದ್ಯಾನಿಲಯದ ಕುಲಪತಿ ಡಾ.ವಿ.ಎಲ್.ಚೋಪ್ರ, ರಾಜ್ಯ ಶಿಕ್ಷಣ ಸಚಿವ ಪಿ.ಅಬ್ದುರ್ರಬ್, ಶಾಸಕರಾದ ಕೆ. ಕುಂಞಿರಾಮನ್, ಎನ್.ಎ.ನೆಲ್ಲಿಕುನ್ನು, ಕಾಞಂಗಾಡ್ ಬ್ಲಾಕ್ ಪಂಚಾಯತ್ ಅಧ್ಯಕ್ಷ ಕೆ. ಕೃಷ್ಣನ್, ಸಿಡ್ಕೋ ಅಧ್ಯಕ್ಷ ಸಿ.ಟಿ. ಅಹ್ಮದಾಲಿ, ಜಿಪಂ ಅಧ್ಯಕ್ಷೆ ಪಿ.ಪಿ. ಶ್ಯಾಮಲದೇವಿ, ಪುಲ್ಲೂರು ಪೆರಿಯ ಪಂಚಾಯತ್ ಅಧ್ಯಕ್ಷ ಸಿ.ಕೆ. ಅರವಿಂದನ್, ಕಾಞಂಗಾಡ್ ನಗರ ಸಭಾಧ್ಯಕ್ಷೆ ಹಸೀನಾ ತಾಜುದ್ದೀನ್, ಚೆಂಗಳ ಪಂಚಾಯತ್ ಅಧ್ಯಕ್ಷ ಮುಹಮ್ಮದ್ ಕುಂಞಿ ಚಾಯಿಂಡಡಿ, ಜಿಲ್ಲಾಧಿಕಾರಿ ಪಿ.ಎಸ್.ಮುಹಮ್ಮದ್ ಸಗೀರ್, ಕೇಂದ್ರ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಸಮಿತಿ ಅಧ್ಯಕ್ಷ ಅನೂಪ್ ಪಿ.ವಿ. ಮತ್ತಿತರರು ಉಪಸ್ಥಿತರಿದ್ದರು.
ಉಪಕುಲಪತಿ ಪ್ರೊ.ಜಾನ್ಸಿ ಜೇಮ್ಸ್ ಸ್ವಾಗತಿಸಿದರು. ಶಶಿ ತರೂರ್ ಕೇಂದ್ರ ವಿಶ್ವವಿದ್ಯಾನಿಲಯದ ಮಾಸ್ಟರ್ ಪ್ಲಾನ್‌ನ್ನು ಬಿಡುಗಡೆಗೊಳಿಸಿದರು. ಸುಮಾರು 310 ಎಕರೆ ಸ್ಥಳದಲ್ಲಿ ವಿಶ್ವವಿದ್ಯಾನಿಲಯ ಕಟ್ಟಡ ಸಮುಚ್ಚಯ ನಿರ್ಮಾಣಗೊಳ್ಳಲಿದೆ

No comments:

Post a Comment