Tuesday, January 1, 2013

ಕಾರ್ಮಿಕರ ಆರೋಗ್ಯ ಸಂರಕ್ಷಣೆಗೆ ಶೀಘ್ರದಲ್ಲೇ ಜಿಲ್ಲಾ ಆಸ್ಪತ್ರೆಗಳಲ್ಲಿ ಕಾರ್ಮಿಕ ಬ್ಲಾಕ್ ವಿಬಾಗ ಆರಂಭ


Jan-1-2013
ಮಂಜೇಶ್ವರ:ರಾಜ್ಯದ ಕಾರ್ಮಿಕರ ಹಿತ ದೃಷ್ಟಿಯಿಂದ ಅವರ ಆರೋಗ್ಯ ಸಂರಕ್ಷಣೆ ಖಾತರಿಪಡಿಸಲು ಆಯಾ ಜಿಲ್ಲಾ ಆಸ್ಪತ್ರೆಗಳಲ್ಲಿ ಹೊರ ರಾಜ್ಯಗಳಿಂದ ದುಡಿಯಲು ಬಂದ ಕಾರ್ಮಿಕರಿಗೆ ವಸತಿ ಸೌಕರ್ಯ ಹಾಗು ರಾಜ್ಯದ ಕಾರ್ಮಿಕರಿಗೆ ಕಾರ್ಮಿಕ ಬ್ಲಾಕ್ ವಿಬಾಗ ಆರಂಭಿಸಲಾಗುವುದೆಂದು ಕಾರ್ಮಿಕ ಸಚಿವ ಶಿಬುಬೇಬಿ ಜೋನ್ ತಿಳಿಸಿದ್ದಾರೆ.
ಅರ್ಬುದ ರೋಗದ ರೀತಿಯ ಮಾರಕ ರೋಗ ತಗಲಿದ ಕಾರ್ಮಿಕರನ್ನು ದಾಖಲಿಸಿ ಚಿಕಿತ್ಸೆ ನೀಡುವುದೇ ಈ ಬ್ಲಾಕ್ ವಿಭಾಗಗಳನ್ನು ತೆರೆಯುವ ಪ್ರಧಾನ ಉದ್ದೇಶವಾಗಿದ್ದು ಆರೋಗ್ಯ ಇಲಾಖೆಯ ಸಹಭಾಗಿತ್ವದೊಂದಿಗೆ ರಾಜ್ಯದ ಎಲ್ಲಾ 14 ಜಿಲ್ಲೆಗಳಲ್ಲೂ ಇಂತಹ ಬ್ಲಾಕ್ ವಿಭಾಗ ಆರಂಭಿಸಲಾಗುವುದು ಇದರ ಮೊದಲ ಹಂತವಾಗಿ ತಿರುವನಂತಪುರದ ಜಿಲ್ಲಾ ಆಸ್ಪತ್ರೆಯಲ್ಲಿ ಈ ವಿಭಾಗ ತೆರೆಯಲಾಗುವುದೆಂದು ವಿವಿಧ ಸ್ತರಗಳಲ್ಲಿ ದುಡಿಯುವ ಕಾರ್ಮಿಕರಿಗೆ ಇದರ ಪ್ರಯೋಜನ ಸಿಗುವ ರೀತಿಯಲ್ಲಿ ಈ ಯೋಜನೆ ಜ್ಯಾರಿ ಗೊಳಿಸಲಾಗುವುದೆಂದು ಸಚಿವರು ತಿಳಿಸಿದ್ದಾರೆ.
ಹೊರ ರಾಜ್ಯಗಳಿಂದ ಬಂದು ಕೇರಳದಲ್ಲಿ ದುಡಿಯುತ್ತಿರುವ ಕಾರ್ಮಿಕರ ಹಿತ ದೃಷ್ಟಿಯನ್ನಿಟ್ಟುಕೊಂಡು ಅವರ ಸಂರಕ್ಷಣೆಯ ಗುರಿಯೊಂದಿಗೆ ಹೊರ ರಾಜ್ಯದ ಕಾರ್ಮಿಕರಿಗೆ ವಾಸಿಸಲು ಕಾರ್ಮಿಕ ವಸತಿ ಕೇಂದ್ರವನ್ನು ಕೂಡಾ ಜ್ಯಾರಿಗೊಳಿಸುವ ಮಹತ್ತರವಾದ ತೀರ್ಮಾನವನ್ನು ಕೂಡಾ ಸರಕಾರ ಕೈಗೊಂಡಿದ್ದು ಇದು ಕಾರ್ಮಿಕ ಕಲ್ಯಾಣ ನಿಧಿ ಮಂಡಳಿಯ ಆಶ್ರಯದಲ್ಲಿ ಕಾರ್ಯವೆಸಗಲಿದ್ದು ಇದಕ್ಕಾಗಿ ರಾಜ್ಯದ 14 ಜಿಲ್ಲೆಗಳಲ್ಲೂ ಸ್ಥಳ ಗುರುತಿಸುವ ಕೆಲಸಕ್ಕೂ ಚಾಲನೆ ನೀಡಲಾಗಿದೆ ಎಂದು ಸಚಿವರು ತ್ತಿಳಿಸಿದ್ದಾರೆ,ಮುಂದಿನ ಮಾರ್ಚ್ ತಿಂಗಳಿನೊಳಗಾಗಿ ಕಾರ್ಮಿಕರು ಸಲ್ಲಿಸಿದ ಮನವಿಗಳನ್ನು ಪರಿಶೀಲಿಸಿ ಅರ್ಹರಿಗೆ ಅರ್ಹ ರೀತಿಯಲ್ಲಿ ಸವಲತ್ತುಗಳನ್ನು ನೀಡುವ  ಕ್ರಮಕ್ಕೂ ಚಾಲನೆ ನೀಡಲಾಗುವುದೆಂದು ಸಚಿವರು ತಿಳಿಸಿದರು

No comments:

Post a Comment