Monday, January 14, 2013

ಮಂಗಲ್ಪಾಡಿಯಲ್ಲಿ ಅನಧಿಕೃತ ಮರಳು ಸಾಗಾಟ:ಪರಿಸರವಾಸಿಗಳು ಸಂಕಷ್ಟದಲ್ಲಿಮಂಜೇಶ್ವರ:ಇಲ್ಲಿಗೆ ಸಮೀಪದ ಉಪ್ಪಲ ಮಂಗಲ್ಪಾಡಿ ಗ್ರಾಮ ಪಂಚಾಯತಿಗೊಳಪಟ್ಟ ೧೩ ನೇ ವಾರ್ಡಿನಲ್ಲಿರುವ ವಲಯಂ ಕಡವಿನ ಹೊಳೆಯಿಂದ ಅನಧಿಕೃತವಾದ ಹೊಯ್ಗೆ ವ್ಯಾಪಾಕವಾಗಿ ಸಾಗಾಟವಾಗುತ್ತಿರುವುದಾಗಿ ಇಲ್ಲಿಯ ಸ್ಥಳೀಯರು ಆರೋಪಿಸಿದ್ದಾರೆ.
ಇಲ್ಲಿ ಮರಳು ಮಾಫಿಯಾಗಳ ದಂಡೇ ಇಲ್ಲಿ ನೆಲೆಸಿದ್ದು ಇಲ್ಲಿಂದ ಧೈನಂಧಿನ ೨೫ ಲೋಡ್ ತನಕ ಹೊಯ್ಗೆ ಅಕ್ರಮವಾಗಿ ಸಾಗಾಟವಾಗುತ್ತಿದೆ.ಈ ಪ್ರದೇಶಗಳಲ್ಲಿ ಸರಿಯಾದ ರೀತಿಯಲ್ಲಿ ರಸ್ತೆ ವ್ಯವಸ್ಥೆ ಇಲ್ಲದಿರುವುದರಿಂದ ಪಕ್ಕದಲ್ಲಿರುವ ಮನೆಗಳ ಸಮೀಪ ಹೊಯ್ಗೆಯನ್ನು ದಾಸ್ತಾನು ಮಾಡಲಾಗುತ್ತಿದೆ ಎಂಬುದಾಗಿ ಸ್ಥಳೀಯರಿಂದ ತಿಳಿದು ಬಂದಿದೆ.ಮರಳು ಮಾಫಿಯಾಅಗಳ ನಿರಂತರವಾದ ಮರಳು ಸಾಗಾಟದಿಂದ ಇಲ್ಲಿಯ ರಸ್ತೆಗಳು ಸಂಪೂರ್ಣ ಹದೆಗೆಟ್ಟಿದ್ದು ಮಾತ್ರವಲ್ಲದೆ ನೀರಿನ ಮಟ್ಟ ಕೂಡಾ ಕೆಳಕ್ಕೆ ಇಳಿದಿರುವುದಾಗಿ ತಿಳಿದು ಬಂದಿದೆ ಇದರಿಂದಾಗಿ ಹೊಳೆಯ ಅಡಿಬಾಗದಿಂದ ಮಣ್ಣಿನ ಸವೆತ ಉಂಟಾಗಿದ್ದು ಇದು ಕೃಷಿ ನಾಶಕ್ಕೂ ಕಾರಣವಾಗುತ್ತಿದೆ.
ಮರಳು ಮಾಫಿಯಾಗಳಿ ಇಲ್ಲಿಗೆ ಹೊರರಾಜ್ಯಗಳಿಂದ ಕಾರ್ಮಿಕರನ್ನು ತಂದು ಅವರಿಂದ ಹೊಯ್ಗೆಯನ್ನು ತೆಗೆಸಲಾಗುತ್ತಿದೆ ಇವರ ಅಟ್ಟಹಾಸದಿಂದ ಇಲ್ಲಿಯ ಸ್ಥಳೀಯರಿಗೆ ಜೀವಿಸಲು ಸಾಧ್ಯವಾಗದ ಪರಿಸ್ಥಿತಿ ಬಂದೊದಗಿರುವುದಾಗಿ ಜನರು ಆರೋಪಿಸುತಿದ್ದಾರೆ.ಮಾತ್ರವಲ್ಲದೆ ಇಲ್ಲಿ ಮೂಲ ಸೌಕರ್ಯಗಳು ಇಲ್ಲದೆ ಇರುವುದರಿಂದ ಈ ಪರಿಸರದಲ್ಲಿ ಹೊರ ರಾಜ್ಯಗಳಿಂದ ಬಂದ ಕಾರ್ಮಿಕರು ಊರವರಿಗೆ ಸಂಕಶ್ಟದ ಪರಿಸ್ಥಿತಿಯನ್ನು ನಿರ್ಮಿಸುತಿದ್ದಾರೆಂಬ ಆರೋಪ ಕೂಡಾ ಇದೆ.ಹೊಳೆಗಳಿಂದ ಹೊಯ್ಗೆ ತೆಗೆಯುತ್ತಿರುವುದರಿಂದ ಹೊಳೆಯಲ್ಲಿ ಬೃಹತಾಕಾರದ ಹೊಂಡಗಳು ಕೂಡಾ ಸೃಷ್ಟಿಯಾಗಿವೆ.
ಈ ಬಗ್ಗೆ ಊರವರು ಈಗಾಗಲೇ ಎಡಿಎಂ ಗೆ ದೂರು ನೀಡಿದ್ದು ಇಂತಹ ಮರಳು ಮಾಫಿಯಾಗಳ ವಿರುದ್ದ ಕೂಡಲೇ ಕ್ರಮ ಜರಗಿಸಲು ಆಗ್ರಹಿಸಿದ್ದಾರೆ.

No comments:

Post a Comment