Friday, January 4, 2013

ಕಾಸರಗೋಡು ಹಾಗು ದಕ್ಷಿಣ ಕನ್ನಡ ಜಿಲ್ಲೆಯ ಪ್ರವಾಸಿಗಳಿಗೊಂದು ಸಂತಸದ ಸುದ್ದಿ


‘ಜೆಟ್’ನಿಂದ ವಾರದ 6 ದಿನ ದುಬೈಗೆ ನೇರ ಯಾನ 

 ಜನವರಿ -04-2013

ಮಂಗಳೂರು: ಜೆಟ್ ಏರ್‌ವೇಸ್‌ನಿಂದ ಇಂದಿ ನಿಂದ ಆರಂಭಗೊಂಡಿರುವ ಮಂಗಳೂರು-ದುಬೈ ನಡು ವಿನ ಪ್ರಥಮ ಖಾಸಗಿ ನೇರ ವಿಮಾನ ಯಾನ ವಾರದ ಆರು ದಿನಗಳಲ್ಲಿ ಪ್ರಯಾಣಿಕರಿಗೆ ಲಭ್ಯವಾಗಲಿದೆ ಎಂದು ಸಂಸ್ಥೆಯ ಹಿರಿಯ ಉಪಾಧ್ಯಕ್ಷ (ವಾಣಿಜ್ಯ) ಗೌರಂಗ್ ಶೆಟ್ಟಿ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ. 
ಉದ್ಘಾಟನಾ ಕೊಡುಗೆಯಾಗಿ ಮಂಗಳೂರು-ದುಬೈ- ಮಂಗಳೂರು ಮಾರ್ಗಕ್ಕೆ ಪ್ರಯಾಣ ದರ 20,360 ರೂ. ಗಳಾಗಿರುತ್ತದೆ. ಟಿಕೆಟ್ ಮಾರಾಟ ಈಗಾಗಲೇ ಆರಂಭ ಗೊಂಡಿದ್ದು, ಮಾಚ್ 31ರವರೆಗೆ ಈ ಕೊಡುಗೆ ಲಭ್ಯವಿ ರುತ್ತದೆ. ಒಂದು ದಿಕ್ಕಿನ ಪ್ರಯಾಣ ದರ 10,101 ರೂ.ಗಳಾಗಿರುತ್ತದೆ ಎಂದವರು ಹೇಳಿದರು. 
ಮಂಗಳೂರು- ದುಬೈ ನಡುವೆ ಸಂಚರಿಸುವ 9ಡಬ್ಲು 532 ಬೋಯಿಂಗ್ 737-800 ವಿಮಾನ ಇದಾಗಿದ್ದು, 170 ಆಸನಗಳನ್ನು ಹೊಂದಿದೆ. ಸೋಮವಾರ, ಬುಧವಾರ, ಗುರುವಾರ ಮತ್ತು ರವಿವಾರ ಈ ವಿಮಾನ ಯಾನ ಸೌಲಭ್ಯವು, ಮಂಗಳೂರು ವಿಮಾನ ನಿಲ್ದಾಣದಿಂದ ರಾತ್ರಿ 8ಕ್ಕೆ ಹೊರಟು ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಸ್ಥಳೀಯ ಕಾಲಮಾನ 10:30ಕ್ಕೆ ತಲುಪಲಿದೆ. ದುಬೈನಿಂದ 9 ಡಬ್ಲು531 ವಿಮಾನ ರಾತ್ರಿ ಸ್ಥಳೀಯ ಕಾಲಮಾನ 11:30ಕ್ಕೆ ಹೊರಟು ಮಂಗಳೂರನ್ನು ಮರುದಿನ ಮುಂಜಾನೆ 4:30ಕ್ಕೆ ತಲುಪಲಿದೆ. ಈ ಎರಡು ಸ್ಥಳಗಳ ನಡುವಿನ ಪ್ರಯಾಣ 3:30ಕ್ಕೆ ಅವಧಿಯದ್ದಾಗಿರುತ್ತದೆ. ಶುಕ್ರವಾರ ವಿಮಾನ 9ಡಬ್ಲು-532 ಸಂಜೆ 7 ಗಂಟೆಗೆ ಮಂಗಳೂರಿನಿಂದ ಹೊರಟು ದುಬೈಗೆ ಸ್ಥಳೀಯ ಕಾಲ ಮಾನ 9:30ಕ್ಕೆ ತಲುಪಲಿದೆ. ವಾಪಸು ಮಾರ್ಗದಲ್ಲಿ 9 ಡಬ್ಲು 531 ದುಬೈನಿಂದ 10:30ಕ್ಕೆ ಹೊರಟು ಮಂಗಳೂರನ್ನು ಮರುದಿನ ಬೆಳಗ್ಗೆ 3:30ಕ್ಕೆ ತಲುಪಲಿದೆ. ಜೆಟ್ ಏರ್‌ವೇಸ್ ಪ್ರಸ್ತುತ ದುಬೈಗೆ ದಿಲ್ಲಿಯಿಂದ ನೇರ ವಿಮಾನ ಸೌಲಭ್ಯ ಹಾಗೂ ಮುಂಬೈನಿಂದ ನಿತ್ಯ ನಾಲ್ಕು ಸೇವೆಗಳನ್ನು ನೀಡಲಿದೆ ಎಂದು ಅವರು ತಿಳಿಸಿದರು. 
ವಿಶೇಷ ಜೆಟ್ ಎಸ್ಕೇಪ್ಸ್ ಹಾಲಿಡೆ ಪ್ಯಾಕೇಜ್
ದುಬೈ ಶಾಪಿಂಗ್ ಫೆಸ್ಟಿವಲ್‌ನಂಗವಾಗಿ ದುಬೈಗೆ ಪ್ರಯಾಣಿ ಸುವವರಿಗೆ ಜ.3ರಿಂದ ಫೆಬ್ರವರಿ 3ರವರೆಗೆ ವಿಶೇಷ ಹಾಲಿಡೆ ಪ್ಯಾಕೇಜ್‌ಗಳನ್ನು ನೀಡಲಿದೆ ಎಂದವರು ಈ ಸಂದರ್ಭ ಪ್ರಕಟಿಸಿದರು. ಸಕಲ ಸೌಲಭ್ಯಗಳ ‘ಬೊನಾಂಝಾ’ ಪ್ಯಾಕೇಜ್ ವೌಲ್ಯ 30,800 ರೂ.ಗಳಿಂದ ಆರಂಭವಾಗಲಿದ್ದು, ‘ಎಕ್ಸ್‌ಟ್ರಾ ವಾಗಾಂಜಾ’ ಪ್ಯಾಕೇಜ್ ದರ 34,850 ರೂ.ಗಳಿಂದ ಆರಂಭವಾಗಲಿದೆ ಎಂದು ಗೌರಂಗ್ ಶೆಟ್ಟಿ ತಿಳಿಸಿದರು. 
ಎರಡೂ ಪ್ಯಾಕೇಜ್‌ಗಳಲ್ಲಿ ವಾಪಸಾಗುವ ಟಿಕೆಟ್ ದರವು ಎಕಾನಮಿ ದರ್ಜೆಯಲ್ಲಿ (ಎಲ್ಲಾ ತೆರಿಗೆಗಳು ಸೇರಿ) ಒಳಗೊಂ ಡಿದ್ದು, ಏರ್‌ಪೋರ್ಟ್ ವರ್ಗಾವಣೆಗಳು, 3 ಸ್ಟಾರ್ ಹೊಟೇಲ್ ವಸತಿ, ಉಟೋಪಚಾರ, ನಗರ ಸುತ್ತಾಟ, ಪ್ರಯಾಣ ವಿಮೆ, ಜೆಟ್ ಎಸ್ಕೇಪ್ಸ್‌ನಲ್ಲಿ ವಿನಿಯೋಗಿಸುವ ಪ್ರತಿ 100 ರೂ.ಗಳಿಗೆ 5 ಜೆಪಿ ಮೈಲ್ಸ್ ಗಳಿಕೆ ಸೇರಿವೆ ಎಂದು ಅವರು ವಿವರಿಸಿದರು.
ಜೆಟ್ ಏರ್‌ವೇಸ್ ಪ್ರಸ್ತುತ 100 ವಿಮಾನಗಳನ್ನು ಹೊಂದಿದ್ದು, ಇವುಗಳಲ್ಲಿ 10 ಬೋಯಿಂಗ್ 777-300 ಇಆರ್, 11 ಏರ್‌ಬಸ್ ಎ330-200 ಏರ್ ಕ್ರಾಫ್ಟ್, 1 ಏರ್‌ಬಸ್ ಎ330-300 ಏರ್‌ಕ್ರಾಫ್ಟ್, 55 ನವ ಪೀಳಿಗೆಯ ಬೋಯಿಂಗ್ ಆಗಿರುವ 737-700/800/900 ಹಾಗೂ 18 ಮಾರ್ಡನ್ ಎಟಿಆರ್ 72-500 ಟರ್ಬೋಪ್ರಾಪ್ ಏರ್‌ಕ್ರಾಫ್ಟ್ ಸೇರಿವೆ. ಜೆಟ್ ಏರ್‌ವೇಸ್ ಕೊನೆಕ್ಟ್ ಸಂಸ್ಥೆಯ ಸರ್ವ ಎಕಾನಮಿ ಸೇವೆಯಾಗಿದ್ದು, ನಿತ್ಯ 500 ಮಾರ್ಗದ ಸೇವೆ ಕಲ್ಪಿಸುವ ಇದು ದೇಶಾದ್ಯಂತ 52 ತಾಣಗಳಿಗೆ ಸಂಪರ್ಕ ಒದಗಿಸ ಲಿದೆ ಎಂದವರು ಸಂಸ್ಥೆಯ ಬಗ್ಗೆ ವಿಸ್ತೃತ ಮಾಹಿತಿ ನೀಡಿದರು.

No comments:

Post a Comment