Friday, January 25, 2013

ಪ್ರಜಾಪ್ರಭುತ್ವದಲ್ಲಿ ಒಂದು ಮತವೂ ಶಕ್ತಿಶಾಲಿ:ಡಾ.ಶಾಂತಾರಾಮ ಶೆಟ್ಟಿ


ಪ್ರಜಾಪ್ರಭುತ್ವದಲ್ಲಿ ಒಂದು ಮತವೂ ಶಕ್ತಿಶಾಲಿ
- ಜನವರಿ -26-2013

ರಾಷ್ಟ್ರೀಯ ಮತದಾರರರ ದಿನಾಚರಣೆ ಉದ್ಘಾಟಿಸಿ ಡಾ.ಶಾಂತಾರಾಮ ಶೆಟ್ಟಿ
ಮಂಗಳೂರು: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಒಂದೊಂದು ಮತವೂ ಶಕ್ತಿಶಾಲಿ. ಈ ಮಹತ್ವವನ್ನು ಅರಿತು ಮತದಾನಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ನಿಟ್ಟೆ ವಿವಿಯ ಸಹ ಕುಲಾಧಿಪತಿ ಡಾ.ಶಾಂತಾರಾಮ ಶೆಟ್ಟಿ ಹೇಳಿದ್ದಾರೆ.
ರಾಷ್ಟ್ರೀಯ ಮತದಾರರರ ದಿನಾಚ ರಣೆಯ ಪ್ರಯುಕ್ತ ನಗರದ ಪುರಭವನ ದಲ್ಲಿ ಜಿಲ್ಲಾಡಳಿತದ ಆಶ್ರಯದಲ್ಲಿ ಆಯೋಜಿಸಲಾದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ದೇಶದಲ್ಲಿ ಶೇ. 30ರಷ್ಟು ಬಡತನ, ಶೇ.30ರಷ್ಟು ಅನಕ್ಷರತೆ, ಶೇ.25ರಷ್ಟು ಜನರಿಗೆ ಸೂರಿನ ಸಮಸ್ಯೆ ಕಾಡುತ್ತಿದೆ. ದೇಶದ ಜನಸಂಖ್ಯೆಯಲ್ಲಿ 76 ಕೋಟಿ ಮತದಾರರಿದ್ದಾರೆ. ಇಂತಹ ಸಂದರ್ಭ ದಲ್ಲಿ ದೇಶವನ್ನು ಅಭಿವೃದ್ಧಿಯತ್ತ ಮುನ್ನಡೆಸುವ ನಾಯಕತ್ವದ ಅಗತ್ಯವಿದೆ. ಮತದಾನದ ಮಹತ್ವವನ್ನು ಅರಿತು ದೇಶಕ್ಕೆ ಸಮರ್ಥ ಮುಂದಾಳತ್ವ ನೀಡಬಲ್ಲ ನಾಯಕನನ್ನು ಆಯ್ಕೆ ಮಾಡುವ ಜವಾಬ್ದಾರಿ ನಮ್ಮೆಲ್ಲರದು ಎಂದು ಡಾ.ಶೆಟ್ಟಿ ಅಭಿಪ್ರಾಯಿಸಿದರು.
ಮತದಾನದ ಮಹತ್ವದ ಕುರಿತಂತೆ ಮಾತನಾಡಿದ ಮಂಗಳೂರು ವಿವಿಯ ರಾಜ್ಯಶಾಸ್ತ್ರ ಪ್ರೊ.ಪಿ.ಎಲ್.ಧರ್ಮ, ದೇಶದಲ್ಲಿ ಯುವಜನತೆ ಮತದಾನ ದಿಂದ ದೂರ ಇರುವುದು ಆತಂಕಕಾರಿ ಸಂಗತಿ ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಎನ್.ಪ್ರಕಾಶ್, ಹಿಂದಿನ ವರ್ಷಗಳಿಗೆ ಹೋಲಿಸಿದರೆ ಪ್ರಸ್ತುತ ಮತ ದಾನ ಮಾಡುವವರ ಸಂಖ್ಯೆ ಹೆಚ್ಚುತ್ತಿರು ವುದು ಸಂತಸದ ಸಂಗತಿ ಎಂದರು.
ಕಾರ್ಯಕ್ರಮದಲ್ಲಿ ಸಾಂಕೇತಿಕವಾಗಿ ಮತದಾರರ ಗುರುತಿನ ಚೀಟಿಯನ್ನು ವಿತರಿಸಲಾಯಿತು. ಮತದಾರರ ದಿನಾ ಚರಣೆ ಅಂಗವಾಗಿ ಆಯೋಜಿಸಲಾದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹು ಮಾನವನ್ನು ನೀಡಲಾಯಿತು.
ಮತ ದಾನದ ಬಗ್ಗೆ ಮನಪಾ ಆಯುಕ್ತ ಡಾ.ಹರೀಶ್ ಕುಮಾರ್ ಸಭಿಕರಿಗೆ ಪ್ರತಿಜ್ಞಾ ವಿಧಿ ನೆರವೇರಿಸಿದರು. ವೇದಿಕೆಯಲ್ಲಿ ಅಪರ ಜಿಲ್ಲಾಧಿಕಾರಿ ದಯಾನಂದ್, ಮಂಗಳೂರು ವಿಭಾಗದ ಸಹಾಯಕ ಆಯುಕ್ತ ಎಂ.ವಿ. ವೆಂಕಟೇಶ್, ಜಿಪಂ ಉಪ ಕಾರ್ಯದರ್ಶಿ ಶಿವರಾಮೇ ಗೌಡ ಉಪಸ್ಥಿತರಿದ್ದರು

No comments:

Post a Comment