Wednesday, January 9, 2013

ಕಾಸರಗೋಡು: ಬಸ್ ಮುಷ್ಕರ; ಅಸ್ತವ್ಯಸ್ತಗೊಂಡ ಜನಜೀವನ



 ಜನವರಿ -09-2013

 ಕಾಸರಗೋಡು: ಖಾಸಗಿ ಹಾಗೂ ಕೆಎಸ್ಸಾರ್ಟಿಸಿ ಬಸ್ ಮುಷ್ಕರ ಜಿಲ್ಲೆಯಲ್ಲಿ ಜನಜೀವನ ಅಸ್ತವ್ಯಸ್ತಗೊಳಿಸಿದೆ. ಕೆಎಸ್ಸಾರ್ಟಿಸಿ ಬಸ್ ಕಾರ್ಮಿಕ ಸಂಘಟನೆ (ಸಿಐಟಿಯು) ಇಂದು ಒಂದು ದಿನದ ಮುಷ್ಕರಕ್ಕೆ ಕರೆ ನೀಡಿದ್ದು, ಖಾಸಗಿ ಬಸ್ ಕಾರ್ಮಿಕರು ಸೋಮವಾರದಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸುತ್ತಿದ್ದಾರೆ.
ಸೋಮವಾರ ಕೆಎಸ್ಸಾರ್ಟಿಸಿ ಬಸ್ ಸಂಚರಿಸುತ್ತಿದ್ದರೆ, ಇಂದು ಕೆಎಸ್ಸಾರ್ಟಿಸಿ ಬಸ್ ಸಂಚಾರ ಸ್ಥಗಿತಗೊಂಡಿರುವುದು ಜನಜೀವನವನ್ನು ಅಸ್ತವ್ಯಸ್ತಗೊಳಿಸಿತು. ಕಾಸರ ಗೋಡು- ಮಂಗಳೂರು ದಾರಿಯಾಗಿ ಕರ್ನಾಟಕ ಕೆಎಸ್ಸಾರ್ಟಿಸಿ ಬಸ್‌ಗಳು ಮಾತ್ರ ಸಂಚರಿಸುತ್ತಿದೆ. ಉಳಿದ ರೂಟ್‌ಗಳಲ್ಲಿ ಬಸ್ ಸಂಚಾರ ಪೂರ್ಣ ಸ್ಥಗಿತಗೊಂಡಿದೆ. ವೇತನ ಹೆಚ್ಚಳಕ್ಕೆ ಒತ್ತಾಯಿಸಿ ಖಾಸಗಿ ಬಸ್ ಕಾರ್ಮಿಕರು ಅನಿರ್ದಿಷ್ಟಾವಧಿ ಮುಷ್ಕರ ನಡೆಸುತ್ತಿದ್ದಾರೆ.
ಪಾಲುದಾರಿಕೆ ಪಿಂಚಣಿ ಯೋಜನೆ ಪ್ರತಿಭಟಿಸಿ ಸರಕಾರಿ ನೌಕರರು, ಅಧ್ಯಾಪಕರು ನಡೆಸುತ್ತಿರುವ ಪ್ರತಿಭಟನೆಗೆ ಬೆಂಬಲ ಸೂಚಿಸಿ ಕೆಎಸ್ಸಾರ್ಟಿಸಿ ಯ ಕಾರ್ಮಿಕರ ಸಂಘಟನೆಯು ಒಂದು ದಿನದ ಮುಷ್ಕರ ನಡೆಸುತ್ತಿದ್ದಾರೆ

No comments:

Post a Comment