Tuesday, January 29, 2013

ಶಾಸಕರ ರಾಜೀನಾಮೆ: ಸ್ಪೀಕರ್ ಕೆ.ಜಿ.ಬೋಪಯ್ಯ ನಿರಾಕರಣೆ


ಶಾಸಕರ ರಾಜೀನಾಮೆ: ಸ್ಪೀಕರ್ ಕೆ.ಜಿ.ಬೋಪಯ್ಯ ನಿರಾಕರಣೆ

ಜನವರಿ -29-2013

 ಬೆಂಗಳೂರು: ರಾಜ್ಯ ರಾಜಕೀಯದ ಹಿನ್ನೆಲೆಯಲ್ಲಿ ಇಂದು 13ಮಂದಿ ಶಾಸಕರು ನೀಡಿರುವ ರಾಜೀನಾಮೆಯನ್ನು ವಿಧಾನಸಭೆಯಲ್ಲಿ ಸ್ಪೀಕರ್ ಕೆ.ಜಿ.ಬೋಪಯ್ಯ ನಿರಾಕರಿಸಿದ್ದಾರೆ.
 ಸ್ಪೀಕರ್ ಕೆ.ಜಿ.ಬೋಪಯ್ಯ ಕೆಲ ಶಾಸಕರ ಅನರ್ಹತೆಯ ಸಂಬಂಧ ದೂರು ಬಂದಿದೆ. ಈ ವಿಚಾರ ಲೋಕಸಭೆ ಸ್ಪೀಕರ್ ಗಮನಕ್ಕೆ ತರುತ್ತೇನೆ. ಅವರಿಂದ ಸ್ಪಷ್ಟೀಕರಣ ಬಂದ ನಂತರ ರಾಜೀನಾಮೆಯ ಬಗ್ಗೆ ಪರಿಗಣಿಸುತ್ತೇನೆ ಎಂದು ರಾಜೀನಾಮೆ ನೀಡಲು ಬಂದ 13 ಮಂದಿ ಶಾಸಕರಿಗೆ ಸ್ಪೀಕರ್ ತಿಳಿಸಿದ್ದಾರೆ.
ಸಿ.ಎಂ.ಉದಾಸಿ-ಹಾನಗಲ್, ನೆಹರೂ ಒಲೇಕರ್-ಹಾವೇರಿ, ಸುನೀಲ್‌ವಲ್ಯಾಪುರ -ಚಿಂಚೊಳಿ, ಶೋಭಾ ಕರಂದ್ಲಾಜೆ-ಯಶವಂತಪುರ, ತಿಪ್ಪೇಸ್ವಾಮಿ-ಚಳ್ಳಕರೆ, ಸುರೇಶ್‌ಗೌಡ ಪಟೀಲ್-ಬ್ಯಾಡಗಿ, ಬಿ.ಪಿ.ಹರೀಶ್-ಹರಿಹರ, ಎಂ.ಚಂದ್ರಪ್ಪ- ಹೊಳಲ್ಕೆರೆ, ಹರತಾಳ ಹಾಲಪ್ಪ -ಸೊರಬ, ಎಸ್.ಐ.ಚಿಕ್ಕನ ಗೌಡರ್-ಕುಂದಗೋಳ, ಜಿ.ಶಿವಣ್ಣ -ರಾಣೆಬನ್ನೂರು, ಬಸವರಾಜ ಪಟೀಲ್ ಅಟ್ಟೂರು-ಬಸವ ಕಲ್ಯಾಣ ಕ್ಷೇತ್ರದ ಶಾಸಕ ಸೇರಿ ಒಟ್ಟು 13 ಮಂದಿ ಶಾಸಕರು ರಾಜೀನಾಮೆ ನೀಡಲು ಮುಂದಾಗಿದ್ದರು

No comments:

Post a Comment