Wednesday, January 30, 2013

ಕಾಂಗ್ರೆಸ್ ಗೆದ್ದರೆ ಕಲ್ಲಡ್ಕ ಭಟ್ಟರ ಕೇಸ್ ರೀಓಪನ್ : ಸಿದ್ದರಾಮಯ್ಯ ಜನವರಿ -30-2013

ಮಂಗಳೂರು: ಕೊಮು ಪ್ರಚೋದನಕಾರಿ ಭಾಷಣ ಮಾಡಿ ಕರಾವಳಿಯ ಸೌಹಾರ್ಧಕ್ಕೆ ಧಕ್ಕೆ ತರುತ್ತಿರುವ ಆರ್‌ಎಸ್‌ಎಸ್ ನಾಯಕ ಕಲ್ಲಡ್ಕ ಪ್ರಭಾಕರ ಭಟ್ಟರ ವಿರುದ್ಧ ಕ್ರಿಮಿನಲ್ ಕೇಸ್ ಹಾಕಬೇಕು. ಆದರೆ ಪೊಲೀಸರ ಮೇಲೆ ಒತ್ತಡ ಹೇರಿ ಅವರ ಮೀಲಿದ್ದ ಕೇಸ್‌ಗೆ ಬಿ ರಿಪೋರ್ಟ್ ಹಾಕಲಾಗಿದೆ. ಮುಂದೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಭಟ್ಟರ ಮೇಲಿನ ದೂರಿನ ಮರು ತನಿಖೆ ನಡೆಸಿ ನ್ಯಾಯಾಲಯದಲ್ಲಿ ಚಾರ್ಜ್ ಶೀಟ್ ಸಲ್ಲಿಸುತ್ತೇವೆ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ. ಉಳ್ಳಾಲದಿಂದ ಆರಂಭಿಸಲಾದ ಪಾದಯಾತ್ರೆಯ ಬಳಿಕದ ಮಂಗಳೂರಿನ ಕೊಟ್ಟಾರ ಚೌಕಿಯಲ್ಲಿ ಹಮ್ಮಿಕೊಂಡಿದ್ದ ದಿನದ ಕೊನೆಯ ಸಮಾವೇಶವೇಶದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು. ಅವರದೇ ಸರಕಾರ ಅಧಿಕಾರದಲ್ಲಿರುವುದರಿಂದ ಪೊಲೀಸರ ಮೇಲೆ ಒತ್ತಡ ಹೇರಿ ಬಿ ರಿಪೋರ್ಟ್ ಹಾಕಿಸಿಕೊಂಡಿದ್ದಾರೆ. ಬಿ ರಿಪೋರ್ಟ್ ಹಾಕಿದ ಮಾತ್ರಕ್ಕೆ ಮುಗಿತೆಂದೇನೂ ಅಲ್ಲ. ಪ್ರಕರಣ ರೀಓಪನ್ ಮಾಡಬಹುದು.
ಪ್ರಭಾಕರ ಭಟ್ಟರ ಪ್ರಕರಣವನ್ನೂ ನಾವು ರೀಓಪನ್ ಮಾಡುತ್ತೇವೆ. ಭಟ್ಟರು ಮಾತ್ರ ಅಲ್ಲ ಕೋಮು ಸೌಹಾರ್ದಕ್ಕೆ ಧಕ್ಕೆ ಉಂಟುಮಾಡಿದ ಎಲ್ಲರ ವಿರುದ್ಧವೂ ಕ್ರಮ ಕೈಗೊಳ್ಳುತ್ತೇವೆ ಎಂದು ಅವರು ಹೇಳಿದರು. ಜನರಲ್ಲಿ ನಂಬಿಕೆ, ವಿಶ್ವಾಸ ಮೂಡಿಸುವ ಉದ್ದೇಶದಿಂದ ಪಾದಯಾತ್ರೆ ಮಾಡುತ್ತಿದ್ದೇವೆ. ಪ್ರಚಾರಕ್ಕಲ್ಲ. ಬಿಜೆಪಿಯವರು ಮಾನಗೆಟ್ಟವರು, ಲಜ್ಜೆ ಇಲ್ಲದವರು,  ಭಂಡರು ಅವರ ವಿರುದ್ಧ ಜನರಲ್ಲಿ ಜಾಗೃತಿ ಮೂಡಸಲು ಮತ್ತು ಬಿಜೆಪಿ ಸರಕಾರದ ದುರಾಡಳಿತದತ್ತ ಜನರ ಗಮನ ಸೆಳೆಯಲು ಪಾದಯಾತ್ರೆ ಮಾಡುತ್ತಿದ್ದೇವೆ ಎಂದು ಹೇಳಿದರು.
ಮುಂದಿನ ವಿಧಾನ ಸಭೆಯ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ ಗೆಲ್ಲುವುದು 30ರಿಂದ 40ಕ್ಷೇತ್ರಗಳಲ್ಲಿ ಮಾತ್ರ. ಕಾಂಗ್ರೆಸ್ 120ರಿಂದ 130 ಸ್ಥಾನ ಪಡೆದು ಅಧಿಕಾರಕ್ಕೆ ಏರುವುದು ಖಂಡಿತ ಎಂಬ ವಿಶ್ವಾಸವನ್ನು ಸಿದ್ದರಾಮಯ್ಯ ಪ್ರಕಟಿಸಿದರು. ಕೆಪಿಸಿಸಿ ಅಧ್ಯಕ್ಷ ಡಾ.ಪರಮೇಶ್ವರ ಮಾತನಾಡಿ, ಯಡಿಯೂರಪ್ಪ ಅಧಿಕಾರಕ್ಕೆ ಬಂದಾಗ ಕರ್ನಾಟಕವನ್ನು ಗುಜರಾತ್ ಮಾದರಿ ಮಾಡುತ್ತೇವೆ ಎಂದಿದ್ದರು. ಅದಕ್ಕೆ ತಕ್ಕಹಾಗೆ ಪ್ರಾರ್ಥನಾ ಮಂದಿರಗಳ ಮೇಲೆ ದಾಳಿ, ಕೋಮು ಗಲಭೆಯಂತಹ ಘಟನೆಗಳು ನಡೆಸಿದ್ದಾರೆ ಎಂದು ಆರೋಪಿಸಿದರು.
ವೀರಪ್ಪ ಮೊಯ್ಲಿ ಮಾತನಾಡಿ ಕರಾವಳಿಯಲ್ಲಿ ಅಭಿವೃದ್ದಿ ಕಾರ್ಯಗಳು ನಡೆದದ್ದೇ ಕಾಂಗ್ರೆಸ್ ಅಧಿಕಾರದಲ್ಲಿ ಎಂದು ಅಂಕಿ-ಅಂಶ ತಿಳಿಸಿದರು. ಮಾಜಿ ಸಭಾಪತಿ ಚಿಕ್ಕಮಗಳೂರಿನ  ಬಿ.ಎಲ್.ಶಂಕರ್ ತುಳುವಿನಲ್ಲಿ ಮಾತನಾಡಿ ಗಮನ ಸೆಳೆದರು. ಕೆಪಿಸಿಸಿ ಕಾರ್ಯದರ್ಶಿ ಐವನ್ ಡಿಸೋಜಾ ಸ್ವಾಗತಿಸಿದರು. ರಾಜ್ಯ ವಿವಿಧೇಡೆಯಿಂದ ಬಂದ ಪ್ರಮುಖ ನಾಯಕರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

No comments:

Post a Comment