Saturday, January 5, 2013

ರಸ್ತೆ ಬದಿಯಲ್ಲಿ ಅನಾಥವಾಗಿ ಬಿದ್ದಿರುವ ಲಾರಿ

Jan-05-2013
ಕುಂಜತ್ತೂರು :ಕುಂಜತ್ತೂರು ಗ್ರಾಮೀಣ ಬ್ಯಾಂಕಿನ ಎದುರುಗಡೆ ರಾಷ್ಟ್ರೀಯ ಹೆದ್ದಾರಿಯ ಬದಿಯಲ್ಲಿ   ಕಳೆದ 2 ತಿಂಗಳಿನಿಂದ ಕೆ.ಎಲ್ 14-ಎಫ್ 2720 ನಂಬ್ರದ ಲಾರಿಯೊಂದು ಅನಾಥವಾಗಿ ಬಿದ್ದಿದ್ದು ಇದು ಇಲ್ಲಿಯ ದಾರಿಹೋಕರಿಗೆ ಹಾಗು ವಾಹನ ಚಾಲಕರಿಗೆ ಅಫಘಾತವನ್ನು ಆಹ್ವಾನಿಸುವ ರೀತಿಯಲ್ಲಿ ನಿಂತು ಕೊಂಡಿದೆ. ಇದೀಗ ಇದನ್ನು ಕೆಲವೊಂದು  ಸಂಘಟನೆಯವರು ಪ್ರಚಾರಕ್ಕಾಗಿ ಅಂಟಿಸುವ ಪ್ಲೇಕ್ಸ್ ಬೋರ್ಡ್ ಆಗಿ  ಕೂಡಾ  ಉಪಯೋಗಿಸುತಿದ್ದಾರೆ.ಸ್ಥಳೀಯರಿಗೆ ಯಾರಿಗೂ ಈ ಲಾರಿಯ ಬಗ್ಗೆ ಯಾವುದೇ ಮಾಹಿತಿ ಇಲ್ಲದಿರುವುದಾಗಿ ತಿಳಿದು ಬಂದಿದೆ.ಸಮೀಪವಿರುವ ಅಂಗಡಿಯೊಂದರಲ್ಲಿ ವಿಚಾರಿಸಿದಾಗಲೂ ಕೂಡಾ ನಮಗೆ ಗೊತ್ತಿಲ್ಲವೆಂಬ ಉತ್ತರ ಸಿಕ್ಕಿದೆ.ಪೊಲೀಸರು ಕೂಡಾ ಇದೇ ರಸ್ತೆಯಾಗಿ ಗುಸ್ತು ತಿರುಗುತಿದ್ದರು ಅವರು ಕೂಡಾ ಇದರ ಬಗ್ಗೆ ನಿರ್ಲಕ್ಷ್ಯವನ್ನು ತೋರಿರುವುದಾಗಿ ಕೇಳಿ ಬಂದಿದೆ .ರಾತ್ರಿ ಸಮಯಗಳಲ್ಲಿ ಈ ಸ್ಥಳದಲ್ಲಿ ದಾರಿ ದೀಪವಿಲ್ಲದೆ ಕತ್ತಲು  ಆವರಿಸುವುದರಿಂದ ದಾರಿ ಹೋಕರಿಗೆ  ಇದೊಂದು ದೊಡ್ಡದೊಂದು ಸಮಸ್ಯೆಯಾಗಿ ಪರಿಣಮಿಸಿದೆ. ಅನಾಥವಾಗಿ ಬಿದ್ದಿರುವ ಈ  ಲಾರಿಯ ಬಗ್ಗೆ  ನಾಗರಿಕರಲ್ಲಿ ಹಲವಾರು ಶಂಶಯಗಳು ಹುಟ್ಟಿ ಕೊಂಡಿದ್ದು ಯಾಕಾಗಿ ಈ ಲಾರಿ ಈ ರೀತಿ ರಸ್ತೆ ಬದಿಯಲ್ಲಿ ಅನಾಥವಾಗಿ ಬಿದ್ದಿದೆ ಇದು ಇಲ್ಲಿಯ ನಾಗರಿಕರ ಪ್ರಶ್ನೆ.ಸಂಭಂಧಪಟ್ಟವರು ಇತ್ತ ಕಡೆ ಗಮನ ಹರಿಸಿ ಲಾರಿಯನ್ನು ರಸ್ತೆ ಬದಿಯಿಂದ ತೆರವು ಗೊಳಿಸಲು ನಾಗರಿಕರು ಆಗ್ರಹಿಸಿದ್ದಾರೆ.

No comments:

Post a Comment